

ನವದೆಹಲಿ: ಸದಾ ಒಂದಿಲ್ಲೊಂದು ಇಲ್ಲಸಲ್ಲದ ಹೇಳಿಕೆಗಳನ್ನು ಕೊಡುವ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ (Pakistan) ಮಾಜಿ ಹಾಗೂ ಹಾಲಿ ಆಟಗಾರರು ತೀವ್ರ ಟೀಕೆಗೆ ಗುರಿಯಾಗುತ್ತಾರೆ. ಮುಖ್ಯವಾಗಿ ಭಾರತದ (India) ಬಗ್ಗೆ ಹೆಚ್ಚು ಮಾತನಾಡುವ ಈ ಆಟಗಾರರು ಒಂದಿಲ್ಲೊಂದು ಕಾರಣಕ್ಕೆ ಟೀಮ್ ಇಂಡಿಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ಪರ 1 ಏಕದಿನ ಹಾಗೂ 4 ಟಿ20 ಪಂದ್ಯವನ್ನಾಡಿರುವ ಆಟಗಾರನೋರ್ವ ಜಸ್ಪ್ರೀತ್ ಬುಮ್ರಾ (Jasprit Bumrah) ಕುರಿತು ಹೇಳಿಕೆಯನ್ನು ನೀಡಿದ್ದು, ಭಾರತೀಯರ (Indians) ಕೆಂಗಣ್ಣಿಗೆ ಗುರಿಯಾಗಿದೆ.
ಪಾಕಿಸ್ತಾನದ ಪರ 1 ಏಕದಿನ ಹಾಗೂ 4 ಟಿ20 ಪಂದ್ಯವನ್ನಾಡಿರುವ ಇಹ್ಸಾನುಲ್ಲಾ (Ihsanullah) ಟೀಮ್ ಇಂಡಿಯಾದ (Team India) ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಕುರಿತು ನೀಡಿರುವ ಹೇಳಿಕೆ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಈತನ ಹೇಳಿಕೆಯನ್ನು ಭಾರತೀಯರು ವ್ಯಾಪಕವಾಗಿ ಖಂಡಿಸಿದ್ದಾರೆ. ಈತನ ಕ್ಷುಲಕ ಹೇಳಿಕೆ ಕ್ರೀಡಾ ವಲಯದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ನೆಟ್ಟಿಗರು ಬುಮ್ರಾ (jasprit Bumrah) ಮಾಡಿರುವ ದಾಖಲೆಗಳನ್ನು ಉಲ್ಲೇಖಿಸಿ ಕಮೆಂಟ್ ಮಾಡುತ್ತಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಇಹ್ಸಾನುಲ್ಲಾ, ನನ್ನ ಪ್ರಕಾರ ಜಸ್ಪ್ರೀತ್ ಬುಮ್ರಾಗಿಂದ (Jasprit Bumrah) ಪಾಕಿಸ್ತಾನದ ವೇಗಿ ನಸೀಮ್ ಷಾ (Naseem Shah) ಉತ್ತಮ ಎಂದು ಭಾವಿಸುತ್ತೇನೆ. ಅದು ಹೇಗೆ ಎಂದು ಸಂದರ್ಶಕರು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರಿಸಿದ ಇಹ್ಸಾನುಲ್ಲಾ (Ihsanullah) ನಸೀಮ್ ಷಾ (Naseem Shah) 2022ರಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಬುಮ್ರಾಗಿಂತ ಉತ್ತಮ ಪ್ರದರ್ಶನ ನೀಡಿದರು. ಇದಕ್ಕಿಂತ ಇನ್ನೇನು ಬೇಕು. ಆತ ಬುಮ್ರಾಗಿಂತ (Jasprit Bumrah) ಉತ್ತಮ ಬೌಲರ್ ಎಂಬುದನ್ನು ಸಾಬೀತು ಮಾಡಲು ಎಂದು ಹೇಳಿದ್ದಾರೆ.
ಇತ್ತ ಇಹ್ಸಾನುಲ್ಲಾ (Ihsanullah) ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕ್ರೀಡಾಭಿಮಾನಿಗಳು ಆತನನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಯಾವ ಆಧಾರದ ಮೇಲೆ ಈ ರೀತಿಯ ಹೇಳಿಕೆಗಳನ್ನು ಕೊಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy) ಭಾರತ ಭಾಗಿಯಾಗಬೇಕಾ ಬೇಡವಾ ಎಂದು ನಿರ್ಧರಿಸುತ್ತಿರುವ ನಡುವೆಯೇ ಈ ಹೇಳಿಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ಹಂತ ತಲುಪಲಿದೆ ಎಂದು ಕಾದುನೋಡಬೇಕಿದೆ.