More

    ‘ಟಾಕ್ಸಿಕ್’ನಲ್ಲಿ ಕರೀನಾ ಕಪೂರ್, ಸಾಯಿ ಪಲ್ಲವಿ, ಶೃತಿ ಹಾಸನ್? ಆದ್ರೆ, ನಿರ್ಮಾಪಕರು ಹೇಳಿದ್ದು ಮಾತ್ರ ಬೇರೇ!

    ಮುಂಬೈ: ಪ್ಯಾನ್ ಇಂಡಿಯಾ ಸ್ಟಾರ್​ ರಾಕಿಂಗ್ ಸ್ಟಾರ್​ ಯಶ್ ಅಭಿನಯಿಸಲಿರುವ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’​ ಬಗ್ಗೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವದಂತಿಗಳು ಹರಿದಾಡುತ್ತಿದ್ದು, ಚಿತ್ರದಲ್ಲಿ ಯಶ್​ಗೆ ನಾಯಕಿಯಾಗಿ ಬಾಲಿವುಡ್​ ಸ್ಟಾರ್​ ನಟಿ ಕರೀನಾ ಕಪೂರ್​ ನಟಿಸಲಿದ್ದಾರೆ ಎಂಬುದು ಒಂದೆಡೆಯಾದರೆ, ಮತ್ತೊಂದೆಡೆ ಸೌತ್​ ಬ್ಯೂಟಿ ಸಾಯಿ ಪಲ್ಲವಿ ಮತ್ತು ಶ್ರುತಿ ಹಾಸನ್ ಕೂಡ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಹೊಸ ಅಂಗಣದಲ್ಲಿ ಪಂಜಾಬ್ ಗೆಲುವಿನ ಆರಂಭ: ಸೋಲಿನ ನಡುವೆ ಗಮನ ಸೆಳೆದ ಪಂತ್

    ಪ್ರಶಾಂತ್ ನೀಲ್​ ನಿರ್ದೇಶನದ ‘ಕೆಜಿಎಫ್​-2’ ನಂತರ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಯಶ್​, ಸದ್ದಿಲ್ಲದೇ ತಮ್ಮ ಮುಂದಿನ ‘ಟಾಕ್ಸಿಕ್’ ಚಿತ್ರಕ್ಕಾಗಿ ಕೆಲಸ ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ತಮ್ಮ ಜನ್ಮದಿನದಂದು ಸಿನಿಮಾದ ಸಣ್ಣ ವಿಡಿಯೋ ತುಣುಕು ಬಿಡುಗಡೆಗೊಳಿಸುವ ಮೂಲಕ ಸಿನಿಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದರು.

    ಚಿತ್ರದಲ್ಲಿ ಯಶ್​ಗೆ ಜೋಡಿಯಾಗಿ ಕರೀನಾ ಕಪೂರ್​, ಸಾಯಿ ಪಲ್ಲವಿ, ಶ್ರುತಿ ಹಾಸನ್​ ಮತ್ತು ಸಂಯುಕ್ತಾ ಮೆನನ್​ ಹೆಸರುಗಳು ಸಾಮಾಜಿಕ ಜಾಲತಾಣಗಳಲ್ಲಿ ಮುಂಚೂಣಿಯಲ್ಲಿವೆ. ವ್ಯಾಪಕವಾಗಿ ಹರಿದಾಡುತ್ತಿರುವ ವದಂತಿಗಳೇ ನಿಜ ಎಂದು ನಂಬುತ್ತಿರುವ ಫ್ಯಾನ್ಸ್​ಗಳಿಗೆ ಇದೀಗ ಚಿತ್ರದ ನಿರ್ಮಾಪಕರು ಶಾಕಿಂಗ್ ಉತ್ತರ ನೀಡಿದ್ದಾರೆ.

    ಇದನ್ನೂ ಓದಿ: ಅಧಿಕ ಸಂಖ್ಯೆಯ ಅರೆ ಸೇನಾ ತುಕಡಿಗಳಿಗೆ ಬೇಡಿಕೆ

    ವದಂತಿಗಳ ಬೆನ್ನಲ್ಲೇ ಚಿತ್ರದ ನಿರ್ಮಾಪಕರು ಮಾತನಾಡಿದ್ದು, “ಊಹಾಪೋಹಗಳಿಂದ ಎಲ್ಲರೂ ದೂರವಿರಿ, ಇದು ನನ್ನ ವಿನಂತಿ. ಟಾಕ್ಸಿಕ್ ಬಗ್ಗೆ ಹಲವಾರು ಆಧಾರರಹಿತ ಮಾಹಿತಿ ಮತ್ತು ಸುದ್ದಿಗಳು ಹರಿದಾಡುತ್ತಿವೆ. ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಮೂಡಿರುವ ಉತ್ಸಾಹ, ಕುತೂಹಲ ನಿಜಕ್ಕೂ ಪ್ರಶಂಸನೀಯ ಆದ್ರೆ, ಚಿತ್ರವು ಇನ್ನು ಪೂರ್ಣಗೊಳ್ಳುವ ಹಂತದಲ್ಲಿದೆ. ಅಧಿಕೃತ ಮಾಹಿತಿ ನಾವೇ ಹಂಚಿಕೊಳ್ಳುವವರೆಗೂ ಇದನ್ನು ನಂಬವುದು ಬೇಡ” ಎಂದಿದ್ದಾರೆ.

    ಗೀತು ಮೋಹನ್‌ದಾಸ್ ನಿರ್ದೇಶನದ, ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹ-ನಿರ್ಮಾಣದಲ್ಲಿ ತಯಾರಾಗುತ್ತಿರುವ ‘ಟಾಕ್ಸಿಕ್ ಚಿತ್ರವು ಏಪ್ರಿಲ್ 10, 2025 ರಂದು ಜಾಗತಿಕವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸಿನಿ ಮೂಲಗಳು ಮಾಹಿತಿ ನೀಡಿವೆ,(ಏಜೆನ್ಸೀಸ್).

    ‘ಇದೆಲ್ಲವೂ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ’; ಕಡೆಗೂ ಮೌನ ಮುರಿದ ಚಹಲ್ ಪತ್ನಿ!

    ಕೂದಲು ಸೊಂಪಾಗಿ, ದಟ್ಟವಾಗಿ ಬೆಳೆಯಬೇಕಾ? ಹಾಗಾದ್ರೆ ಇದನ್ನು ಟ್ರೈ ಮಾಡುವುದೇ ಬೆಸ್ಟ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts