More

    ಹೊಸ ಅಂಗಣದಲ್ಲಿ ಪಂಜಾಬ್ ಗೆಲುವಿನ ಆರಂಭ: ಸೋಲಿನ ನಡುವೆ ಗಮನ ಸೆಳೆದ ಪಂತ್

    ಚಂಡೀಗಢ: ಆಲ್ರೌಂಡರ್ ಸ್ಯಾಮ್ ಕರ‌್ರನ್ (63 ರನ್, 47 ಎಸೆತ, 6 ಬೌಂಡರಿ, 1 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ 17ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು 4 ವಿಕೆಟ್‌ಗಳಿಂದ ಗೆದ್ದು ಶುಭಾರಂಭ ಕಂಡಿದೆ. ಈ ಮೂಲಕ ಶಿಖರ್ ಧವನ್ ಬಳಗ ತನ್ನ ಹೊಸ ತವರು ತಾಣವಾದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಯಶಸ್ವಿ ಆರಂಭವನ್ನೇ ಕಂಡರೆ, ರಸ್ತೆ ಅಪಘಾತದಿಂದ ಚೇತರಿಸಿಕೊಂಡು 15 ತಿಂಗಳ ಬಳಿಕ ಮರಳಿ ಕಣಕ್ಕಿಳಿದ ರಿಷಭ್ ಪಂತ್‌ಗೆ ಸೋಲಿನ ಸ್ವಾಗತ ದೊರೆಯಿತು.

    ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಡೆಲ್ಲಿ ತಂಡ ಉತ್ತಮ ಜತೆಯಾಟದ ಕೊರತೆಯಿಂದ ಕುಸಿತ ಕಂಡಿತು. ಆಗ ಇಂಪ್ಯಾಕ್ಸ್ ಪ್ಲೇಯರ್ ಆಗಿ ಕಣಕ್ಕಿಳಿದ ಯುವ ಬ್ಯಾಟರ್ ಅಭಿಷೇಕ್ ಪೊರೆಲ್ (32* ರನ್, 10 ಎಸೆತ, 4 ಬೌಂಡರಿ, 2 ಸಿಕ್ಸರ್) ಕೊನೇ ಓವರ್‌ನಲ್ಲಿ ಸಿಡಿಸಿದ 25 ರನ್‌ಗಳ ಬಲದಿಂದ 9 ವಿಕೆಟ್‌ಗೆ 174 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಪ್ರತಿಯಾಗಿ ಸ್ಯಾಮ್ ಕರ‌್ರನ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ (38* ರನ್, 21 ಎಸೆತ, 2 ಬೌಂಡರಿ, 3 ಸಿಕ್ಸರ್) ಜತೆಯಾಟದ ನೆರವಿನಿಂದ ಪಂಜಾಬ್ 19.2 ಓವರ್‌ಗಳಲ್ಲಿ 6 ವಿಕೆಟ್‌ಗೆ 177 ರನ್‌ಗಳಿಸಿ ಗೆಲುವು ದಾಖಲಿಸಿತು.

    454 ದಿನಗಳ ಬಳಿಕ ಪಂತ್ ಕಣಕ್ಕೆ: ಭೀಕರ ಕಾರು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಡೆಲ್ಲಿ ನಾಯಕನಾಗಿ ಸೋಲಿನ ಪುನರಾಗಮನ ಕಂಡಿದ್ದಾರೆ. ಸುಮಾರು 454 ದಿನಗಳ ಬಳಿಕ ಪಂತ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದರು. 15 ತಿಂಗಳ ಪುನಶ್ಚೇತನ ಶಿಬಿರದ ಬಳಿಕ ಚೇತರಿಸಿಕೊಂಡು ಆಡಿದ ಪಂತ್ 19 ನಿಮಿಷ ನಡೆಸಿದ ಬ್ಯಾಟಿಂಗ್‌ನಲ್ಲಿ 2 ಬೌಂಡರಿ ಸಿಡಿಸಿ 18 ರನ್‌ಗಳಿಸಿದರು. ಕೀಪಿಂಗ್‌ನಲ್ಲೂ ಗಮನ ಸೆಳೆದು ಸಂಪೂರ್ಣ ಫಿಟ್ ಆಗಿರುವುದಾಗಿ ಸಾಬೀತುಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts