More

    ಕನ್ನಡಿಗ ರಾಹುಲ್ ಸಾರಥ್ಯದ ಲಖನೌಗೆ ರಾಯಲ್ಸ್ ಚಾಲೆಂಜ್

    ಜೈಪುರ: ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್‌ಜೈಂಟ್ಸ್ ತಂಡಗಳು ಐಪಿಎಲ್-17ರಲ್ಲಿ ಭಾನುವಾರ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುವ ಮೂಲಕ ಅಭಿಯಾನ ಆರಂಭಿಸಲಿವೆ. ಕಳೆದ ಆವೃತ್ತಿಯ ಮಧ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಕೆಎಲ್ ರಾಹುಲ್ ಪುನರಾಗಮನದ ನಿರ್ವಹಣೆ ಮೇಲೆ ಎಲ್ಲರ ಚಿತ್ತನೆಟ್ಟಿದೆ. ಆದರೆ ಉಭಯ ತಂಡಗಳಿಗೆ ಹನ್ನೊಂದರ ಬಳಗ ಆಯ್ಕೆ ಮೊದಲ ಸವಾಲೆನಿಸಿದೆ.
    ಎಲ್‌ಎಸ್‌ಜಿ ತಂಡ ಆಡಿದ ಮೊದಲೆರಡು ಆವೃತ್ತಿಯಲ್ಲಿ ಪ್ಲೇಆ್ಗೇರಿದ್ದು, ಈ ಬಾರಿ ನೂತನ ಕೋಚ್ ಜಸ್ಟಿನ್ ಲ್ಯಾಂಗರ್ ಮಾರ್ಗದರ್ಶನದಲ್ಲಿ ಪ್ರಶಸ್ತಿ ಜಯಿಸುವ ತವಕದಲ್ಲಿದೆ. ಮುಂಬರುವ ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ರಾಹುಲ್ ಪ್ರದರ್ಶನ ನಿರ್ಣಾಯಕ ಎನಿಸಿದ್ದು, ಆರಂಭಿಕ ಕೆಲ ಪಂದ್ಯಗಳಲ್ಲಿ ಬ್ಯಾಟರ್ ಆಗಿ ಮಾತ್ರ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಜತೆಗೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಸಹ ವಿಶ್ವಕಪ್ ತಂಡದ ವಿಕೆಟ್ ಕೀಪರ್ ರೇಸ್‌ನಲ್ಲಿದ್ದಾರೆ.
    2022ರ ರನ್ನರ್ ಅಪ್ ರಾಜಸ್ಥಾನ ಕಳೆದ ಆವೃತ್ತಿಯಲ್ಲಿ ಐದನೇ ಸ್ಥಾನಕ್ಕೆ ಜಾರಿತ್ತು. ಸಂಜು ಸ್ಯಾಮ್ಸನ್ ಜತೆಗೆ ಭರ್ಜರಿ ಾರ್ಮ್‌ನಲ್ಲಿರುವ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಶಿಮ್ರಾನ್ ಹೆಟ್ಮೆಯರ್ ಸೇರಿ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ಹೊಂದಿದೆ. ಭಾರತ ಟೆಸ್ಟ್ ತಂಡಕ್ಕೆ ಇತ್ತೀಚೆಗೆ ಯಶಸ್ವಿ ಪದಾರ್ಪಣೆ ಮಾಡಿದ ಧ್ರುವ ಜುರೆಲ್, ದೇಶೀಯ ಟೂರ್ನಿಯಲ್ಲಿ ಅಸ್ಸಾಂ ಪರ ಅದ್ಭುತ ನಿರ್ವಹಣೆ ತೋರಿದ ರಿಯಾನ್ ಪರಾಗ್‌ಗೆ ಈ ಟೂರ್ನಿ ಉತ್ತಮ ವೇದಿಕೆಯಾಗಿದೆ. ಬೌಲಿಂಗ್‌ನಲ್ಲಿ ಆರ್.ಅಶ್ವಿನ್, ಯಜುವೇಂದ್ರ ಚಾಹಲ್ ಲಖನೌಗೆ ಸವಾಲೊಡ್ಡಲಿದ್ದಾರೆ.

    ಯುವ ಆಟಗಾರರ ಬಲ: ಲಖನೌ ತಂಡ ಯುವ ಆಟಗಾರರಿಂದ ಕೂಡಿದ್ದು, ದೇಶೀಯ ಟೂರ್ನಿಗಳಲ್ಲಿ ರನ್ ಮಳೆ ಹರಿಸಿ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ರಾಜಸ್ಥಾನ ತಂಡದಿಂದ ಲಖನೌಗೆ ವರ್ಗಾವಣೆಗೊಂಡಿದ್ದಾರೆ. ದ.ಆಫ್ರಿಕಾದ ವಿಕೆಟ್ ಕೀಪರ್ -ಬ್ಯಾಟರ್ ಕ್ವಿಂಟನ್ ಡಿ ಕಾಕ್, ವಿಂಡೀಸ್‌ನ ನಿಕೋಲಸ್ ಪೂರನ್, ಮಾರ್ಕಸ್ ಸ್ಟೋಯಿನಿಸ್, ಕೃನಾಲ್ ಪಾಂಡ್ಯ ಅಂಥ ಸ್ಟಾರ್ ಆಟಗಾರರ ಬಲವಿದೆ. ಆದರೆ ಬೌಲಿಂಗ್‌ನಲ್ಲಿ ಅನುಭವಿ ವೇಗಿಗಳ ಕೊರತೆ ಕಾಡಲಿದೆ. ವೆಸ್ಟ್ ಇಂಡೀಸ್ ಸೆನ್ಸೇಷನ್ ಶಮರ್ ಜೋಸೆಫ್ ಪದಾರ್ಪಣೆ ನಿರೀಕ್ಷೆಯಲ್ಲಿದ್ದು,ದೇಶಿಯ ಪ್ರತಿಭೆಗಳಾದ ಮಯಾಂಕ್ ಯಾದವ್ ಮತ್ತು ಮೊಹ್ಸಿನ್ ಖಾನ್ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.

    ಮುಖಾಮುಖಿ: 3
    ಲಖನೌ: 1
    ರಾಜಸ್ಥಾನ: 2
    ಆರಂಭ: ಮಧ್ಯಾಹ್ನ 3.30

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts