More

  ಪ್ರಭಾಸ್​ ಅಭಿನಯದ ‘ಕಲ್ಕಿ’ ಮೇಲೆ ಭಾರಿ ನಿರೀಕ್ಷೆ ! ಕಾರಣ ಇದೇ ನೋಡಿ..

  ಮುಂಬೈ: ‘ಕಲ್ಕಿ 2898’ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಈ ಪ್ರತಿಷ್ಠಿತ ಚಿತ್ರದಲ್ಲಿ ನಟಿಸುತ್ತಿದ್ದು, ಟಾಲಿವುಡ್ ಪ್ರೇಕ್ಷಕರಲ್ಲದೆ ವಿಶ್ವದಾದ್ಯಂತ ಸಿನಿಪ್ರಿಯರು ಚಿತ್ರ ಬಿಡುಗಡೆಗೆ ಕಾಯುತ್ತಿದ್ದಾರೆ. ಮೇ 9 ರಂದು ವಿಶ್ವದಾದ್ಯಂತ ಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಈಗಾಗಲೇ ಘೋಷಿಸಿದ್ದಾರೆ.

  ಇದನ್ನೂ ಓದಿ: ಶಾಲೆಗೆ ಹೋಗುತ್ತಿದ್ದ ಬಾಲಕಿಗೆ ನಡುಬೀದಿಯಲ್ಲೇ ಕಿಸ್​ ಕೊಟ್ಟು ಕಾಲ್ಕಿತ್ತ ಯುವಕ! ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ವೈರಲ್..​

  ಈ ಚಿತ್ರದ ಪ್ರತಿಯೊಂದು ಅಪ್‌ಡೇಟ್‌ಗಳನ್ನು ನೋಡಿದಾಗ, ಅದು ಮನಸ್ಸಿಗೆ ಮುದ ನೀಡುವಂತಿವೆ. ಹೀಗಾಗಿ ಈ ಸಿನಿಮಾದ ಮೇಲಿನ ನಿರೀಕ್ಷೆ ಈಗಾಗಲೇ ಹೆಚ್ಚಾಗಿದೆ. ಇನ್ನು ಇತ್ತೀಚೆಗೆ ನಿರ್ಮಾಪಕಿ ಅಶ್ವಿನಿ ದತ್ ಪುತ್ರಿ ಸ್ವಪ್ನದತ್ ಮತ್ತೊಮ್ಮೆ ಹೈಪ್ ಕ್ರಿಯೇಟ್ ಮಾಡಿದ್ದಾರೆ.

  ‘ಕಲ್ಕಿ 2898’ನ್ನು ಪ್ರತಿಭಾವಂತ ನಿರ್ದೇಶಕ ನಾಗ್ ಅಶ್ವಿನ್ ಹಾಲಿವುಡ್ ರೇಂಜ್ ನಲ್ಲಿ ಚಿತ್ರೀಕರಿಸುತ್ತಿದ್ದಾರೆ. ಪೋಸ್ಟರ್‌ಗಳು ಮತ್ತು ಗ್ಲಿಂಪ್‌ಗಳನ್ನು ನೋಡಿದ ಯಾರಾದರೂ ಅದನ್ನು ಅರ್ಥಮಾಡಿಕೊಳ್ಳಬಹುದು. ಈ ಚಿತ್ರದಿಂದ ಬರುತ್ತಿರುವ ಪ್ರತಿಯೊಂದು ಅಪ್‌ಡೇಟ್‌ಗಳು ಪ್ರೇಕ್ಷಕರು ಹಾಗೂ ಸಿನಿ ಗಣ್ಯರನ್ನು ಅಚ್ಚರಿಗೊಳಿಸುತ್ತಿವೆ.

  ಇತ್ತೀಚೆಗೆ ದಕ್ಷಿಣ ಭಾರತ ಚಲನಚಿತ್ರೋತ್ಸವ ಹೈದರಾಬಾದ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್​ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ವಪ್ನದತ್ ಕಲ್ಕಿ ಬಗ್ಗೆ ಸ್ವಾರಸ್ಯಕರವಾದ ಪ್ರತಿಕ್ರಿಯೆ ನೀಡಿದ್ದಾರೆ. ಆಕೆಯ ಕಾಮೆಂಟ್‌ಗಳು ಚಿತ್ರದ ಮೇಲಿನ ಹೈಪ್ ಅನ್ನು ಮತ್ತಷ್ಟು ಹೆಚ್ಚಿಸಿವೆ.

  ‘ಕಲ್ಕಿಯಲ್ಲಿ ಪ್ರಭಾಸ್ ಅವರ ಭೈರವ ಪಾತ್ರವು ಅಭಿಮಾನಿಗಳ ಹೃದಯದಲ್ಲಿ ದೀರ್ಘಕಾಲ ಉಳಿಯುತ್ತದೆ. ಈ ಚಿತ್ರವು ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಮೇ 9 ರಂದು ಕಲ್ಕಿ ತೆರೆಗೆ ಬರಲಿದೆ. ಥಿಯೇಟರ್ ನಲ್ಲಿ ಸಿನಿಮಾ ನೋಡುವಷ್ಟರಲ್ಲಿ ಪ್ರೇಕ್ಷಕರು ಬೇರೆ ಲೋಕಕ್ಕೆ ಹೋಗುತ್ತಾರೆ’ ಎಂದಿದ್ದಾರೆ.

  ಏತನ್ಮಧ್ಯೆ ನಾಗ್ ಅಶ್ವಿನ್ ಅವರ ಇತ್ತೀಚಿನ ಕಾಮೆಂಟ್‌ಗಳು ಕಲ್ಕಿ ಮೇಲಿನ ನಿರೀಕ್ಷೆಗಳನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ದಿವೆ. ಕಲ್ಕಿ ಚಿತ್ರ ಮಹಾಭಾರತದಲ್ಲಿ ಆರಂಭವಾಗಿ 2898ರಲ್ಲಿ ಕೊನೆಗೊಳ್ಳುತ್ತದೆ ಎಂದು ನಿರ್ದೇಶಕ ನಾಗ್ ಅಶ್ವಿನ್ ಹೇಳಿದ್ದಾರೆ.

  ಹಾಲಿವುಡ್ ಸಿನಿಮಾ ಬ್ಲಡ್ ರನ್ನರ್ ಗೆ ಹೋಲಿಕೆ ಮಾಡದೆ ಎಲ್ಲಾ ಮುನ್ನೆಚ್ಚರಿಕೆ ವಹಿಸಲಾಗಿದೆ. ಅದರಂತೆ ಸೆಟ್ ಹಾಕಲಾಗಿದೆ ಎಂದು ಬಹಿರಂಗಪಡಿಸಿದರು.

  ಕಣ್ಣೂರಿನಲ್ಲಿ ಸೆರೆ ಸಿಕ್ಕ ಹುಲಿ ಮೃತ್ಯು..

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts