More

    ಕಣ್ಣೂರಿನಲ್ಲಿ ಸೆರೆ ಸಿಕ್ಕ ಹುಲಿ ಮೃತ್ಯು..

    ಕಣ್ಣೂರು(ಕೇರಳ): ಕೇರಳದ ಕಣ್ಣೂರಿನಲ್ಲಿ ಗುರುವಾರ ರಾತ್ರಿ ಅರಣ್ಯ ಅಧಿಕಾರಿಗಳು ಸೆರೆ ಹಿಡಿದಿದ್ದ ಹುಲಿ ಕೆಲ ಗಂಟೆಗಳ ನಂತರ ಸಾವನ್ನಪ್ಪಿದೆ.

    ಇದನ್ನೂ ಓದಿ: ಪ್ರಯಾಣಿಕರ ದೇಹದೊಳಗಿತ್ತು ಕೋಟಿ ಕೋಟಿ ರೂ.ಮೌಲ್ಯದ ಚಿನ್ನಾಭರಣ! ಕಸ್ಟಮ್ಸ್ ಅಧಿಕಾರಿಗಳು ಪತ್ತೆಹಚ್ಚಿದ್ದೇಗೆ?

    ಒಂದು ವಾರದಿಂದ ಕಣ್ಣೂರು ಜಿಲ್ಲೆಯ ಅಡಕ್ಕಾಥೋಡ್ ನಲ್ಲಿ ಕಾಣಿಸಿಕೊಂಡು ಜನರನ್ನು ಭಯಭೀತರನ್ನಾಗಿಸಿದ್ದ ಎರಡು ವರ್ಷದ ಗಂಡು ಹುಲಿಯನ್ನು ಪಶುವೈದ್ಯರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ಪಂಜರದಲ್ಲಿ ಬಂಧಿಸಿ ಕನ್ನವಂನಲ್ಲಿರುವ ಅರಣ್ಯ ಕಚೇರಿಗೆ ಕರೆದೊಯ್ದಿತ್ತು.

    ಆದರೆ ರಾತ್ರಿ 9 ಗಂಟೆ ಸುಮಾರಿಗೆ ಹುಲಿ ಸಾವನ್ನಪ್ಪಿದೆ. ಈ ಹಿಂದೆ ಕೊಟ್ಟಿಯೂರಿನಲ್ಲಿ ಸಿಕ್ಕಿಬಿದ್ದಿದ್ದ ಹುಲಿ ಕೂಡ ಇದೇ ರೀತಿ ಸಾವನ್ನಪ್ಪಿತ್ತು.

    ಮಾರ್ಚ್ 12 ರಂದು ಅಡಕ್ಕಾಥೋಡ್‌ನಲ್ಲಿ ಮೊದಲ ಬಾರಿಗೆ ಹುಲಿ ಕಾಣಿಸಿಕೊಂಡಿತ್ತು. ಹುಲಿ ಪ್ರದೇಶದಲ್ಲಿ ಸಾಕು ನಾಯಿಗಳನ್ನು ಬೇಟೆಯಾಡುವುದನ್ನು ಅಭ್ಯಾಸ ಮಾಡಿಕೊಂಡಿತ್ತು. ಜನರು ಮನೆಗಳಿಂದ ಹೊರಬರಲು ಹೆದರುತ್ತಿದ್ದರು. ಅಡಕ್ಕಾಥೋಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರ್ಪ್ಯೂ ಹೇರಲಾಗಿತ್ತು.

    ಗುರುವಾರ ಮಧ್ಯಾಹ್ನ ಬಾಬು ಎಂಬುವವರ ಜಮೀನಿನಲ್ಲಿ ಹುಲಿ ಕಾಣಿಸಿಕೊಂಡಿತ್ತು. ಅರಣ್ಯಾಧಿಕಾರಿಗಳು ಕೂಡಲೇ ಆ ಪ್ರದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಹುಲಿಯನ್ನು ಹುಡುಕುವ ಪ್ರಯತ್ನ ಆರಂಭಿಸಿದರು.

    ಆರಂಭದಲ್ಲಿ ಹುಲಿ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿ ಜನರ ಮೇಲೆ ದಾಳಿ ಮಾಡಲು ಯತ್ನಿಸಿತು. ಗೊಂದಲದ ನಡುವೆಯೇ ಪಟಾಕಿ ಸಿಡಿಸಲಾಗಿದ್ದು, ಹುಲಿ ಸ್ಥಳದಿಂದ ಓಡಿ ಹೋಗಿದೆ. ಹುಲಿ ಸೆರೆಹಿಡಿಯುವ ಉಸ್ತುವಾರಿ ವಹಿಸಿದ್ದ ಡಾ.ರಾಜಾ ಮತ್ತು ಡಾ.ಅರುಣ್ ಸತ್ಯನ್ ಅವರು ಹುಲಿಯನ್ನು ಹಿಂಬಾಲಿಸಿದರು. ಡಾ ರಾಜಾ ಹುಲಿಗೆ ಮತ್ತುಬರುವ ಔಷಧಿ ನೀಡುತ್ತಿದ್ದಂತೆ 20 ನಿಮಿಷದಲ್ಲಿ ಪ್ರಜ್ಞೆ ತಪ್ಪಿತು. ನಂತರ ಅಧಿಕಾರಿಗಳು ಪ್ರಾಣಿಯನ್ನು ಬಲೆಗೆ ಬೀಳಿಸಿ ವಾಹನಕ್ಕೆ ಸ್ಥಳಾಂತರಿಸಿದರು.

    ನಾಯಿಯ ಅಂತ್ಯಸಂಸ್ಕಾರ.. ಇಡೀ ಊರೇ ಸ್ಪಂದಿಸಿತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts