More

    ಪ್ರಯಾಣಿಕರ ದೇಹದೊಳಗಿತ್ತು ಕೋಟಿ ಕೋಟಿ ರೂ.ಮೌಲ್ಯದ ಚಿನ್ನಾಭರಣ! ಕಸ್ಟಮ್ಸ್ ಅಧಿಕಾರಿಗಳು ಪತ್ತೆಹಚ್ಚಿದ್ದೇಗೆ?

    ಮುಂಬೈ: ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಮಾರ್ಚ್ 20 ರಿಂದ ಮಾರ್ಚ್ 22 ರವರೆಗೆ ಎಂಟು ವಿವಿಧ ಪ್ರಕರಣಗಳಲ್ಲಿ ಒಟ್ಟು 10.60 ಕೋಟಿ ಮೌಲ್ಯದ ವಿದೇಶಿ ಕರೆನ್ಸಿ, ವಜ್ರಾಭರಣ, ಮತ್ತು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಮುಂಬೈ ಪೊಲೀಸರ ವಶಕ್ಕೆ 35 ಸೋಮಾಲಿಯನ್​ ಕಡಲ್ಗಳ್ಳರು!

    ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನ ಪ್ರದೇಶದಲ್ಲಿ ವಿದೇಶಿ ಕರೆನ್ಸಿ ಮತ್ತು ವಜ್ರಗಳ ಚಲನವಲನದ ಬಗ್ಗೆ ಗುಪ್ತಚರ ವರದಿ ಆಧಾರದ ಮೇಲೆ ಮಾ.20ರಂದು ಕಸ್ಟಮ್ಸ್ ಅಧಿಕಾರಿಗಳು ಬ್ಯಾಂಕಾಕ್‌ ನಿಂದ ಬಂದಿಳಿದ ಇಬ್ಬರು ಪ್ರಯಾಣಿಕರನ್ನು ತಡೆದು ಪರಿಶೀಲಿಸಿದಾಗ ವಿದೇಶಿ ಕರೆನ್ಸಿ(ಯುಎಸ್​ಡಾಲರ್​, ಯುಕೆ ಪೌಂಡ್, ಯೂರೋ ಮತ್ತು ನ್ಯೂಜಿಲೆಂಡ್​ನ ಡಾಲರ್‌ಗಳನ್ನು ವಶಪಡಿಸಿಕೊಂಡರು.

    ಈ ಖದೀಮರು ತೊಟ್ಟಿದ್ದ ಬಟ್ಟೆಗಳ ಒಳಗೆ ಅನುಮಾನ ಬಾರದಂತೆ ಒಲಿಗೆ ಹಾಕಿದ ಬ್ಯಾಕ್ ಪ್ಯಾಕ್‌ಗಳಲ್ಲಿ ಒಟ್ಟು 5.36 ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ಅಕ್ರಮವಾಗಿ ತಂದಿದ್ದರು ಎಂದು ಕಸ್ಟಮ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅನುಮಾನದ ಆಧಾರದ ಮೇಲೆ ಅದೇ ವಿಮಾನದಲ್ಲಿದ್ದ ಮತ್ತೊಬ್ಬ ಪ್ರಯಾಣಿಕನ ಕೈಚೀಲವನ್ನು ಪರಿಶೀಲಿಸಲಾಗಿದ್ದು, ಅದರಲ್ಲಿ ಮತ್ತು ಪ್ಯಾಂಟ್‌ನ ಜೇಬಿನಲ್ಲಿ ಬಚ್ಚಿಟ್ಟಿದ್ದ ಕಪ್ಪು ಬಣ್ಣದ ಅಂಟುಪಟ್ಟಿ ಸುತ್ತಿದ ಮೂರು ಪೌಚ್‌ಗಳು ಪತ್ತೆಯಾಗಿವೆ. ಇವುಗಳಲ್ಲಿ 3.75 ಕೋಟಿ ರೂ.ಮೌಲ್ಯದ ವಜ್ರಗಳನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಲಾಗಿದೆ.
    ಪ್ರಯಾಣಿಕನ ಹೊಟ್ಟೆಯಲ್ಲಿ ಚಿನ್ನ ಪತ್ತೆ:

    ಮತ್ತೆರಡು ಪ್ರಕರಣಗಳಲ್ಲಿ ದುಬೈನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಅವರ ಹೊಟ್ಟೆಯಲ್ಲಿದ್ದ 1589 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಇನ್ನೊಂದು ಪ್ರಕರಣದಲ್ಲಿ, ಜೆಡ್ಡಾದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಭಾರತೀಯ ಪ್ರಜೆಯನ್ನು ತಡೆದು ಹೊಟ್ಟೆಯಲ್ಲಿ ಬಚ್ಚಿಟ್ಟಿದ್ದ 255 ಗ್ರಾಂ ತೂಕದ ಚಿನ್ನ, ಅದೇ ರೀತಿ ಮಸ್ಕತ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದವನ ದೇಹದಿಂದ 267 ಗ್ರಾಂ ತೂಕದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಏಳನೇ ಪ್ರಕರಣದಲ್ಲಿ, ಕುವೈತ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಭಾರತೀಯ ಪ್ರಜೆಯನ್ನು ತಡೆದು, ಪ್ರಯಾಣಿಕರು ಧರಿಸಿದ್ದ ಬಟ್ಟೆಯಲ್ಲಿ ಬಚ್ಚಿಟ್ಟಿದ್ದ 250 ಗ್ರಾಂ (ನಿವ್ವಳ) ತೂಕದ ಚಿನ್ನಾಭರಣಗಳು ಪತ್ತೆಯಾಗಿವೆ. ಎಂಟು ಪ್ರಕರಣಗಳಲ್ಲಿ, ದುಬೈನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಭಾರತೀಯ ಪ್ರಜೆಯೊಬ್ಬರನ್ನು ತಡೆಹಿಡಿಯಲಾಗಿದ್ದು, ಪ್ರಯಾಣಿಕನ ದೇಹದಲ್ಲಿ 231 ಗ್ರಾಂ (ನಿವ್ವಳ) ತೂಕದ ಚಿನ್ನಾಭರಣಗಳನ್ನು ಬಚ್ಚಿಟ್ಟಿರುವುದು ಪತ್ತೆಯಾಗಿದೆ.

    ‘ಹನುಮಾನ್’ ಬರೆಯಿತು ಓಟಿಟಿಯಲ್ಲೂ ದಾಖಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts