More

  ಚಿನ್ನ, ಬೆಳ್ಳಿ ಪಾನಿ ಪುರಿ..! ಮೋದಿ ತವರಲ್ಲಿ ಇದೇ ಚರ್ಚೆ; ವಿಡಿಯೋ ನೋಡಿ

  ನವದೆಹಲಿ: ಪಾನಿ ಪುರಿ ಎಂಬ ಪದ ಕೇಳಿದರೆ ಹಲವರ ಬಾಯಲ್ಲಿ ನೀರೂರಿಸುತ್ತದೆ. ಪಾನಿ ಪುರಿಯ ಹಲವು ವಿಧಗಳ ಬಗ್ಗೆ ನೀವು ಕೇಳಿರಬಹುದು. ಆದರೆ ನೀವು ಎಂದಾದರೂ ಚಿನ್ನ ಮತ್ತು ಬೆಳ್ಳಿಯ ಪಾನಿ ಪೂರಿಗಳನ್ನು ತಿಂದಿದ್ದೀರಾ? ಇಲ್ಲ ಅಲ್ವಾ? ನಾವು ಇಂದು ನಿಮಗೆ ಚಿನ್ನ ಮತ್ತು ಬೆಳ್ಲಿಯಿಂದ ತಯಾರಾಗುವ ಪಾನಿಪುರಿ ಕುರಿತಾಗಿ ಇಂದು ನಿಮಗೆ ತಿಳಿಸಿಕೊಡಲಿದ್ದೇವೆ.

  ಚಿನ್ನ ಬೆಳ್ಳಿಯ ಪಾನಿ ಪುರಿ ಹೇಗಿರುತ್ತೆ ಅಂತ ಯೋಚಿಸುತ್ತಿರಬಹುದು ಅಲ್ವಾ..? ಆದರೆ, ಇಲ್ಲಿ ಅಂತಹ ಪಾನಿಪುರಿ ಮಾರಾಟವಾಗುತ್ತದೆ. ಎಂಬುದರ ಬಗ್ಗೆ ವಿವರಗಳನ್ನು ತಿಳಿಯಬೇಕಾದರೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಲೇಬೇಕು.

  ಗುಜರಾತ್‌ನ ಅಹಮದಾಬಾದ್‌ನ ಮಾರಾಟಗಾರರೊಬ್ಬರು ಪಾನಿ ಪುರಿಯ ಹೊಸ ಆವೃತ್ತಿಯನ್ನು ಕಂಡುಹಿಡಿದಿದ್ದಾರೆ. ಈ ಪಾನಿ ಪುರಿಯನ್ನು ಚಿನ್ನ ಮತ್ತು ಬೆಳ್ಳಿಯ ಲೇಪನದಿಂದ ಅಲಂಕರಿಸಲಾಗುತ್ತದೆ ಮತ್ತು ಚಿನ್ನದ ತಟ್ಟೆಯಲ್ಲಿ ಬಡಿಸಲಾಗುತ್ತದೆ. ಸದ್ಯ ಈ ಪಾನಿಪುರಿ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಕೆಲವರು ಈ ಸೃಜನಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.

  ಈ ವೈರಲ್ ವಿಡಿಯೋದಲ್ಲಿ, ಬಾದಾಮಿ, ಗೋಡಂಬಿ ಮತ್ತು ಪಿಸ್ತಾಗಳನ್ನು ಸಹ ಪಾನಿ ಪುರಿಗೆ ಸೇರಿಸಲಾಗುತ್ತದೆ. ಅದರ ನಂತರ ಜೇನುತುಪ್ಪವನ್ನು ಕೂಡ ಸೇರಿಸಲಾಗುತ್ತದೆ. ಕೊನೆಗೆ ಆ ಪೂರಿಗಳನ್ನೆಲ್ಲ ತಟ್ಟೆಗೆ ಹಾಕಿ ಬಡಿಸಲು ಸಿದ್ಧ. ಅದಕ್ಕಾಗಿ ಪ್ರತಿ ಪಾನಿಪುರಿಯನ್ನು ಚಿನ್ನ ಮತ್ತು ಬೆಳ್ಳಿಯ ಲೇಪನದಿಂದ ಅಲಂಕರಿಸಲಾಗುತ್ತದೆ. ಈ ಪಾನಿ ಪುರಿಯನ್ನು ಚಿನ್ನದ ತಟ್ಟೆಯಲ್ಲಿ ಬಡಿಸಲಾಗುತ್ತದೆ. ಈ ಪಾನಿ ಪುರಿಯ ಹೆಸರು ಶರೀತ್. ಸದ್ಯ ಈ ಪಾನಿ ಪುರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. “ನಾವು ಹತ್ತು ರೂಪಾಯಿಗೆ ನಾಲ್ಕು ಪಾನಿ ಪೂರಿ ತಿನ್ನುತ್ತಿದ್ದೆವು. ಅಣ್ಣ, ಇದರ ಬೆಲೆ ಹೇಳು. ಈ ರೀತಿಯ ಪಾನಿ ಪೂರಿ ಇಷ್ಟವಿಲ್ಲ, ನಮ್ಮ ಮನೆ ಮಗಳಿಗೆ ಸಾದಾ ಪಾನಿಪುರಿನೆ ಕೊಡಿಸಲು ಆಗ್ತಿಲ್ಲ ಇನ್ನು ಬಂಗಾರ, ಬೆಳ್ಳಿ ಲೇಪಿತ ಪಾನಿಪುರಿ ಯಾರಿಗೆ ಬೇಕು ಎಂದು ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದಾರೆ.

  ಈ ಹೀರೋಗಾಗಿ ಏನು ಬೇಕಾದರೂ ಬಿಟ್ಟು ಹೋಗುತ್ತೇನೆಂದ್ರು ಪ್ರಿಯಾಮಣಿ

  ಮಾಜಿ ಪ್ರಿಯಕರನ ಹೆಸರಿನ ಟ್ಯಾಟೂವನ್ನು ಶಾಶ್ವತವಾಗಿ ತೆಗೆದ್ರಾ ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ

  ಅದೆಂಥ ಸಮಸ್ಯೆ ಬಂದ್ರೂ ಮೆಟ್ಟಿನಿಂತ ಮಹಾನಟಿ ಜಯಮಾಲಾ; 11 ವರ್ಷ ಚಿಕ್ಕ ನಟನ ಜತೆ 2ನೇ ಮದುವೆಯಾಗಿದ್ರಾ? ಈ ನಟಿ…

  ಮನೆಗೆ ಬಂದ್ಯಾ ಅಂತ ಕೇಳಲು ಯಾರಿಲ್ಲ..2 ನಾಯಿ ಮಾತ್ರ ಇವೆ; ಬಿಕ್ಕಿ ಬಿಕ್ಕಿ ಅತ್ತ ವಿನೋದ್​ ರಾಜ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts