ಮನೆಗೆ ಬಂದ್ಯಾ ಅಂತ ಕೇಳಲು ಯಾರಿಲ್ಲ..2 ನಾಯಿ ಮಾತ್ರ ಇವೆ; ಬಿಕ್ಕಿ ಬಿಕ್ಕಿ ಅತ್ತ ವಿನೋದ್​ ರಾಜ್

blank

ಬೆಂಗಳೂರು: ವಿನೋದ್ ರಾಜ್​​ ಅವರಿಗೆ ತಾಯಿ ಲೀಲಾವತಿ ಎಂದರೆ ಎಲ್ಲಿಲ್ಲದ ಪ್ರೀತಿ. ಅಮ್ಮನ ಕಳೆದುಕೊಂಡ ನೋವಿನಲ್ಲಿಯೇ ಇದ್ದಾರೆ. ವಿನೋದ್ ಅಮ್ಮನ ನೆನೆದು ಕಣ್ಣೀರು ಹಾಕುತ್ತಾರೆ. ಅದೇ ರೀತಿನೇ ವಿನೋದ್ ರಾಜ್ ಖಾಸಗಿವಾಹಿನಿಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಎಮೋಷನಲ್ ಆಗಿದ್ದಾರೆ. ಈ ವೇಳೆ ತಮ್ಮ ತಾಯಿ ನಟಿ ಲೀಲಾವತಿ ಅವರನ್ನು ನೆನೆದು ಕಣ್ಣಿರು ಹಾಕಿದ್ದಾರೆ.

ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಮಹಾನಟಿ ಸ್ಪರ್ಧಿಗಳು ಲೀಲಾವತಿ ಅವರ ಸಿನಿಮಾ ಜರ್ನಿಯನ್ನ ಕೂಡ ನೆನಪಿಸಿಕೊಂಡರು. ಅದನ್ನ ಕಂಡ ನಟ ವಿನೋದ್ ರಾಜ್ ಎಮೋಷನಲ್ ಆದ್ರು. ಅದಕ್ಕೂ ಮೊದಲು ಸ್ವಾಗತದ ಸಮಯದಲ್ಲೂ ಅಮ್ಮನ ನೆನೆದು ವಿನೋದ್ ರಾಜ್ ಕಣ್ಣೀರು ಹಾಕಿದ್ದರು.

ವಿನೋದ್​​ ರಾಜ್​ ​ಅವರು ಮಾತನಾಡಿ, ಎಷ್ಟು ಮರೆತು ಜೀವನ ನಡೆಸುಬೇಕು ಎಂದು ಪ್ರತ್ನಿಸಿದರು ಕಷ್ಟವಾಗುತ್ತದೆ. ನನಗೆ ಅವರ ಫೋಟೋಗಳನ್ನು ನೋಡಿದಾಗ ತಡೆದುಕೊಳ್ಳು ಆಗುವುದಿಲ್ಲ. ಅಮ್ಮ ನಮ್ಮನ್ನು ಬಿಟ್ಟು ಹೋಗಿದ್ದಾರೆ ಎನ್ನುವುದು ಮಾತ್ರ ಅರ್ಥವಾಗುತ್ತದೆ. ಆದರೆ ನಾನು ಹೇಗೆ 4 ತಿಂಗಳು ಕಳೆದಿದ್ದೇನೆ ಎನ್ನುವುದು ತಿಳಿಯುವುದಿಲ್ಲ. ಅದೆಲ್ಲವನ್ನು ನೆನಪಿಸಿಕೊಂಡಾಗ ನನ್ನ ಹೃದಯ ಹಿಂಡಿ ಹೋಗುತ್ತದೆ ಎಂದು ಕಣ್ಣೀರಿಟ್ಟಿದ್ದಾರೆ.

ಯಾಕೆ ದೇವರು ನಮ್ಮಿಬ್ಬರಲ್ಲಿ ಒಬ್ಬರನ್ನು ಬೇಗ ಯಾಕೆ ಕರೆದುಕೊಂಡು ಬಿಟ್ಟ. ಹಾರ್ಟ್​​ಅಟ್ಯಾಕ್​ನಲ್ಲಿ ಇಬ್ಬರು ಉಳಿದಿದ್ದೇವು. ಆದರೆ ಅಮ್ಮನನ್ನು ಕರೆದುಕೊಳ್ಳಲೇ ಬೇಕು ಅಂತಾ ಕರೆದುಕೊಂಡ ಬಿಟ್ಟ. ಕೆಲವು ಕಾರ್ಯಕ್ರಮಗಳಿಗೆ ಹೋದಾಗ ಅಮ್ಮ ತುಂಬಾ ನೆನಪು ಆಗುತ್ತಾರೆ. ಏನು ಹೇಳಬೇಕು ಅಂತಾ ನನಗೆ ಗೊತ್ತಾಗ್ತಿಲ್ಲ. ಅಮ್ಮನ ಜತೆ 56 ವರ್ಷ ಕಾಲ ಕಳೆದಿದ್ದೇನೆ ಎಲ್ಲವನ್ನು ಮರೆಯಲು ಸಾಧ್ಯವಿಲ್ಲ ಎಂದು ಭಾವುಕರಾಗಿದ್ದಾರೆ.

ಅವರು ನನಗೆ ಶಕ್ತಿ ಆಗಿದ್ರು.. ಅವರು ಮಲಗಿದ್ರು ವೀನು ಬಂದನ್ನಾ? ಕೇಳಿ ಎಲ್ಲೋಗಿದ್ದಾನೆ ಎಂದು ಹೇಳುತ್ತಲೇ ಇದ್ದರು. ಆದ್ರೆ ಇಂದು ಕೇಳಲು ಯಾರು ಇಲ್ಲ? ಎರಡು ನಾಯಿ ಮಾತ್ರ ನನ್ನ ಜತೆಗೆ ಇದೆ. ಎಷ್ಟು ನಗ್ತಾ ಇರಬೇಕು ಎಂದರು ಸಾಧ್ಯವಾಗುವುದಿಲ್ಲ. ನಿಮ್ಮೆಲ್ಲರ ಮುಂದೆ ಡಾನ್ಸ್ ಮಾಡಿದೆ ಆದರೆ ಅಮ್ಮನ ನೆನಪು ಬಂದ್ರೆ ತುಂಬಾ ಕಷ್ಟವಾಗುತ್ತದೆ ಎಂದು ಹೇಳುತ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

 ತಾಯಿ  ಮಕ್ಕಳಿಗೆ ಇಷ್ಟು ಪ್ರೀತಿಯನ್ನು ಮಾಡಬಾರದು. ಒಂದು ಮಗುಗೆ ಇಬ್ಬರು ಇರಬೇಕು. ಆದ್ರೆ ಇವರು ಒಬ್ಬರೆ ನನಗೆ ಎಲ್ಲಾ ಆಗಿದ್ರು, ಬೇಜಾರು ಆಗಬೇಡಿ, ನಾನು ನಿಮ್ಮನೆಲ್ಲ ನೋಯಿಸಿದೆ. ನನಗೆ 56 ವರ್ಷ ಆಗಿದೆ. ನೋಡಿ ನನಗೆ ವಯಸ್ಸು ಆಯ್ತು ಎನ್ನುವ ಅರಿವು ಇಲ್ಲದೆ ಕಣ್ಣೀರು ಹಾಕುತ್ತಿದ್ದೇನೆ ಎಂದಿದ್ದಾರೆ.

ಅದೆಂಥ ಸಮಸ್ಯೆ ಬಂದ್ರೂ ಮೆಟ್ಟಿನಿಂತ ಮಹಾನಟಿ ಜಯಮಾಲಾ; 11 ವರ್ಷ ಚಿಕ್ಕ ನಟನ ಜತೆ 2ನೇ ಮದುವೆಯಾಗಿದ್ರಾ? ಈ ನಟಿ…

Share This Article

ನಿಂಬೆ ಸಿಪ್ಪೆಗಳನ್ನು ಎಸೆಯುವ ತಪ್ಪನ್ನು ಮಾಡಬೇಡಿ!  ಅವುಗಳನ್ನು ಹೀಗೂ ಮರುಬಳಕೆ ಮಾಡಬಹುದು.. lemon peels

lemon peels: ಬೇಸಿಗೆಯಲ್ಲಿ ನಿಂಬೆ ರಸವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ನಿಂಬೆ ರಸದ ಜೊತೆಗೆ, ನಿಂಬೆ…

ಪಾರ್ಲರ್‌ ಹೋಗದೆ ಮನೆಯಲ್ಲಿಯೇ ಮುಖ ಪಳ ಪಳ ಹೊಳೆಯುವಂತೆ ಮಾಡಬೇಕಾ? ಹಾಗಾದ್ರೆ ಹೀಗೆ ಮಾಡಿ..Glow Skin

Glow Skin: ಮುಖ ನೋಡಲು ಪಳಪಳ ಹೊಳೆಯಬೇಕು ಎನ್ನುವ ಆಸೆ ಮಹಿಳೆಯರಿಗೆ ಇರುತ್ತದೆ. ಯಾವುದೇ ಪಾರ್ಟಿ…

ಮೀನು ಖರೀದಿಸುವಾಗ ತಾಜಾ ಮೀನುಗಳನ್ನು ಗುರುತಿಸುವುದು ಹೇಗೆ ಗೊತ್ತಾ? Fish

Fish: ಮೀನು ತಿನ್ನಲು ಬಲು ರುಚಿ ಹಾಗೆ ನಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಆದರೆ ಹಳೆಯ…