ಬೆಕ್ಕನ್ನು ರಕ್ಷಿಸಲು ಬಾವಿಗೆ ಹಾರಿದ ಐವರು ದಾರುಣ ಸಾವು!

FotoJet
Published on

ಮುಂಬೈ: ಪಾಳುಬಿದ್ದ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋದ ಐವರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ ನಡೆದಿದ್ದು, ಬೆಕ್ಕನ್ನು ರಕ್ಷಿಸಲು ಒಬ್ಬರಾದ ಬಳಿಕ ಒಬ್ಬರು ಬಾವಿಗೆ ಹಾರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪಾಳುಬಿದ್ದ ಬಾವಿಯನ್ನು ಜೈವಿಕ ಅನಿಲ ಪಿಟ್ ಆಗಿ ಬಳಸಲಾಗುತ್ತಿದ್ದು, ಇದರ ಜತೆಗೆ ಬಾವಿಗೆ ಕಸ ಸುರಿಯಲಾಗುತ್ತಿತ್ತು. ಇದರಿಂದ ಬಾಯಿಯಲ್ಲಿ ಜೈವಿಕ ಅನಿಲ ಉತ್ಪತ್ತಿಯಾಗುತ್ತಿತ್ತು. ಇದರಿಂದಲೇ ವಿಷಾನಿಲ ಸೋಕಿ ಬಾವಿಗೆ ಹಾರಿದ್ದವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾವಿಗೆ ಒಟ್ಟು 6 ಮಂದಿ ಹಾರಿದ್ದರು. ಓರ್ವ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗೆ ಇಳಿದಿದ್ದ. ಆತನನ್ನು ರಕ್ಷಿಸಲಾಗಿದೆ. ಅಹ್ಮದ್ ನಗರದ ವಾಡ್ಕಿ ಗ್ರಾಮದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಬೆಕ್ಕಿನ ಪ್ರಾಣ ಉಳಿಸಲು ಮುಂದಾಗಿ ಐದು ಜನರ ಪ್ರಾಣ ಹೋಗಿರುವುದು ಗ್ರಾಮಸ್ಥರಿಗೆ ಆಘಾತವನ್ನುಂಟು ಮಾಡಿದೆ.

ಇನ್ನೂ ಪಾಳು ಬಾವಿಯನ್ನು ತ್ಯಾಜ್ಯ ಸಂಗ್ರಹಕ್ಕೆ ಬಳಸಿರುವುದರ ವಿರುದ್ಧ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net