More

    ‘ಸನ್​ಸ್ಕ್ರೀನ್​​ ಮರೆಯಬೇಡಿ, ತಣ್ಣೀರು ಉತ್ತಮ’ ಇದು ದೀಪಿಕಾ ಸೌಂದರ್ಯದ ಗುಟ್ಟು!

    ಮುಂಬೈ: ಬಾಲಿವುಡ್‌ನ ಜನಪ್ರಿಯ ನಟಿ, ಕರ್ನಾಟಕದ ಕರಾವಳಿ ಮೂಲದ ಬೆಡಗಿ ದೀಪಿಕಾ ಪಡುಕೋಣೆ ಸೌಂದರ್ಯದ ರಹಸ್ಯವೇನು? ಎಂದು ಯಾರಿಗಾದರೂ ಕಾಡದಿರದು. ಅವರನ್ನು ನೋಡೊದಾಗಲೆಲ್ಲ ಸಪುರ ಮೈಕಟ್ಟು, ಹೊಳೆಯುವ ಚರ್ಮ ಹೊಂದಲು ನಿತ್ಯ ಏನು ಮಾಡುತ್ತಾರೆ ಎಂಬ ಪ್ರಶ್ನೆ ಮೂಡದಿರದು. ಹಾಗಾದರೆ ದೀಪಿಕಾರಂತಹ ಹೊಳೆಯುವ ತ್ವಚೆಯನ್ನು ಪಡೆಯಲು ನೀವೂ ಬಯಸುತ್ತೀರಾ? ಈಗ ಸ್ವತಃ ದೀಪಿಕಾ ತಮ್ಮ ಅಭಿಮಾನಿಗಳಿಗೆ ಉತ್ತರವನ್ನು ಸಾಮಾಜಿಕ ಜಾಲತಾಣದ ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ‘ಹಿಂದೆ ಸರಿಯದಿದ್ದರೆ ನಿಮ್ಮನ್ನು ಯಾರೂ ಕಾಪಾಡಲಾರರು’: ರಾಹುಲ್ ಗಾಂಧಿಗೆ ಪ್ರಶಾಂತ್ ಕಿಶೋರ್ ಹೀಗೆ ಹೇಳಿದ್ದೇಕೆ?

    ದೀಪಿಕಾ ಪ್ರಕಾರ ಪ್ರಕೃತಿದತ್ತವಾದ ಆ ಎರಡು ವಸ್ತುಗಳು ನಿತ್ಯ ಬಳಕೆ ಮಾಡಿದರೆ ಸಾಕು. ತ್ವಚೆ ಕನ್ನಡಿಯಂತೆ ಹೊಳೆಯುತ್ತದೆಯಂತೆ. ಹಾಗಾದರೆ ಆ ವಸ್ತುಗಳು ಯಾವುವು ಎಂದು ನೋಡೋಣ.

    ಮಲಗುವ ಮುನ್ನ ಮೇಕಪ್ ತೆಗೆಯುತ್ತೇನೆ: ದೀಪಿಕಾ ಹೊಳೆಯುವ ತ್ವಚೆಗೆ ಪ್ರಮುಖ ಅಂಶವೆಂದರೆ ಮಲಗುವ ಮುನ್ನ ಮೇಕಪ್ ತೆಗೆಯುವುದು. ದಿನವಿಡೀ ಎಷ್ಟೇ ಬ್ಯುಸಿ ಇದ್ದರೂ ಮಲಗುವ ಮುನ್ನ ಮುಖವನ್ನು ಚೆನ್ನಾಗಿ ಕ್ಲೀನ್ ಮಾಡಿಕೊಳ್ಳುವುದನ್ನು ರೂಢಿ ಮಾಡಿಕೊಂಡಿದ್ದಾಳೆ.

    ನಾವು ಮುಖಕ್ಕೆ ಮೇಕಪ್ ಹಾಕಿಕೊಂಡು ಮಲಗಿದಾಗ ನಮ್ಮ ರಂಧ್ರಗಳಲ್ಲಿ ಕಲ್ಮಶಗಳು ಶೇಖರಣೆಗೊಂಡು ಮೊಡವೆ ಮತ್ತು ಕಪ್ಪು ಕಲೆಗಳಂತಹ ಚರ್ಮದ ಸಮಸ್ಯೆಗಳು ಉಂಟಾಗುತ್ತದೆ. ನಿತ್ಯ ಮುಖವನ್ನು ಸ್ವಚ್ಛಗೊಳಿಸುವುದರಿಂದ ಕಾಂತಿ ಹೆಚ್ಚಾಗುವಂತೆ ಮಾಡಬಹುದು.

    ಸನ್‌ಸ್ಟೀನ್ ಅತ್ಯಗತ್ಯ: ದೀಪಿಕಾ ಪಡುಕೋಣೆ ಅವರು ಸೂರ್ಯರಶ್ಮಿಯ ಪ್ರಾಮುಖ್ಯತೆ ಮತ್ತು ಪ್ರಯೋಜನಗಳನ್ನು ಸ್ಪಷ್ಟವಾಗಿ ಬಹಿರಂಗಪಡಿಸಿದ್ದಾರೆ. ಮುಂಜಾನೆ ಎಳೆಬಿಸಿಲು ಚರ್ಮದ ಕಾಂತಿಗೆ ಅತ್ಯಗತ್ಯ. ಆದರೆ ಚರ್ಮವನ್ನು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸಲು ಸನ್‌ಸ್ಟೀನ್ ಕ್ರೀಮ್ ಬಳಕೆ ಅತ್ಯಗತ್ಯ ಎನ್ನುತ್ತಾರೆ.

    ಇದು ಅಕಾಲಿಕ ವಯಸ್ಸಾದ ಅಪಾಯವನ್ನು ಕಡಿಮೆ ಮಾಡುತ್ತದೆ, ಚರ್ಮದ ಕ್ಯಾನ್ಸ‌ರ್ ಅನ್ನು ಕಡಿಮೆ ಮಾಡುತ್ತದೆ. ಮೈಬಣ್ಣವನ್ನು ಸುಧಾರಿಸುತ್ತದೆ. ಬೇಸಿಗೆ ಮತ್ತು ಚಳಿಗಾಲದಲ್ಲಿ ದೀಪಿಕಾ ಅವರು ಒಳಾಂಗಣ ಅಥವಾ ಹೊರಾಂಗಣವನ್ನು ಲೆಕ್ಕಿಸದೆ ದಿನಕ್ಕೆ ಎರಡು ಬಾರಿ ಸನ್‌ಸ್ಟೀನ್ ಬಳಸುತ್ತಾರೆ. ದೀಪಿಕಾ ಅವರ ದಿನಚರಿಯಲ್ಲಿ ಸನ್‌ಸ್ಟೀನ್ ಪ್ರಮುಖ ವಸ್ತುವಾಗಿದೆ.

    ತಣ್ಣೀರಲ್ಲಿ ಮುಖ ತೊಳೆಯಬೇಕು: ತಣ್ಣೀರಿನಲ್ಲಿ ನಿಮ್ಮ ಮುಖವನ್ನು ನೆನೆಸಿ ತೊಳೆಯುವುದು ದೀಪಿಕಾ ಸೌಂದರ್ಯದ ಕಟ್ಟುಪಾಡುಗಳ ಭಾಗವಾಗಿದೆ. ಇದು ರಕ್ತನಾಳಗಳನ್ನು ಸಂಕುಚಿತಗೊಳಿಸಲು, ಪಫಿನೆಸ್ ಅನ್ನು ಕಡಿಮೆ ಮಾಡಲು, ರಂಧ್ರಗಳನ್ನು ಬಿಗಿಗೊಳಿಸಲು ಮತ್ತು ಚರ್ಮವನ್ನು ಪುನರ್ಯೌವನಗೊಳಿಸಲು ಸಹಾಯ ಮಾಡುತ್ತದೆ. ಐಸ್ ವಾಟರ್ ಥೆರಪಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ನಿಮಗೆ ಹೊಳಪಿನ ಮೈಬಣ್ಣವನ್ನು ನೀಡುತ್ತದೆ ಎಂದು ಅವರು ವಿವರಿಸಿದ್ದಾರೆ.

    ಇನ್ನು ದೀಪಿಕಾ ಪ್ರತಿ ಎರಡು ಗಂಟೆಗೊಮ್ಮೆ ಏನಾದರೂ ತುಸು ತಿನ್ನುವ ಅಭ್ಯಾಸ ಮಾಡಿಕೊಂಡಿದ್ದಾರೆ. ಸ್ವಲ್ಪ ಪ್ರಮಾಣದಲ್ಲಿ ಚಾಕೋಲೇಟ್‌ ತಿನ್ನುತ್ತಾರೆ. ಡಯೆಟ್‌ ಮತ್ತು ವರ್ಕೌಟ್‌ ನಡುವೆ ಸಮತೋಲನ ಆಹಾರ, ಸೂರ್ಯರಶ್ಮಿ, ತಣ್ಣೀರು ಬಳಸುವುದು ಸೌಂದರ್ಯದ ಗುಟ್ಟು ಎಂದು ಅವರು ವಿವರಿಸಿದ್ದಾರೆ.

    ಭಾರತದಿಂದ ಅಗತ್ಯ ವಸ್ತುಗಳ ರಫ್ತು ನಂತರ ತೀವ್ರ ಟೀಕಾಪ್ರಹಾರಕ್ಕೆ ಗುರಿಯಾದ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts