More

    ಭಾರತದಿಂದ ಅಗತ್ಯ ವಸ್ತುಗಳ ರಫ್ತು ನಂತರ ತೀವ್ರ ಟೀಕಾಪ್ರಹಾರಕ್ಕೆ ಗುರಿಯಾದ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು!

    ಮಾಲೆ(ಮಾಲ್ಡೀವ್ಸ್​ ): ಅಗತ್ಯ ವಸ್ತುಗಳ ರಫ್ತು ನಂತರ ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು ಸಾರ್ವಜನಿಕರು ಮತ್ತು ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

    ಇದನ್ನೂ ಓದಿ: ತಾಜ್ ಮಹಲ್ ಬಳಿ ರೀಲ್ಸ್.. ಯುವತಿಗೆ ಎದುರಾಯ್ತು ಆಘಾತ..!

    ಮಾಲ್ಡೀವ್ಸ್ ಒಂದು ಸಣ್ಣ ದೇಶವಾಗಿರಬಹುದು. ಆದರೆ ಅದರ ಸಾರ್ವಭೌಮತ್ವಕ್ಕೆ ಧಕ್ಕೆ ತಂದರೆ ಸಹಿಸುವುದಿಲ್ಲ. ಹಸ್ತಕ್ಷೇಪ ಮಾಡಲು ಅಥವಾ ಬೆದರಿಕೆ ಹಾಕಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಭಾರತದ ವಿರುದ್ಧ ಮಾಡಿದ ಕಾಮೆಂಟ್‌ಗಳಿಗಾಗಿ ಮುಯಿಝು ಈಗ ಟೀಕೆಗಳನ್ನು ಎದುರಿಸುತ್ತಿದ್ದಾರೆ.

    ಮಾಲೆಯ ಬೇಡಿಕೆಯಂತೆ, ಭಾರತೀಯ ಹೈಕಮಿಷನ್ 2024-25 ನೇ ಸಾಲಿನ ಅಗತ್ಯ ವಸ್ತುಗಳನ್ನು ಮಾಲ್ಡೀವ್ಸ್ ಗೆ ತಲುಪಿಸಿದೆ. ಇದಕ್ಕೆ ಆ ದೇಶದ ವಿದೇಶಾಂಗ ಸಚಿವ ಮಸಾ ಸಮೀರ್ ಭಾರತೀಯ ವಿದೇಶಾಂಗ ಸಚಿವ ಎಸ್.ಜಯಶಂಕರ್ ಅವರಿಗೆ ಎಕ್ಸ್‌ನಲ್ಲಿ ಧನ್ಯವಾದ ತಿಳಿಸಿದ್ದಾರೆ. “ಇದು ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧ ವಿಸ್ತರಿಸಲು ದೀರ್ಘಕಾಲದ ಸ್ನೇಹ ಮತ್ತು ಬದ್ಧತೆಯನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

    ಸಚಿವ ಸಮೀರ್ ಅವರ ಪೋಸ್ಟ್ ನಂತರ ಮುಯಿಝು ಅವರ ಭಾರತ ವಿರೋಧಿ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿದೆ.

    ಮಾಲ್ಡೀವ್ಸ್ ಮಾಜಿ ಸಂಸದ ಇಬ್ರಾಹಿಂ ದೀದಿ ಮಾತನಾಡಿ, ಭಾರತದ ಉದಾರತೆಗೆ ಮಾಲ್ಡೀವ್ಸ್ ಜನರು ಯಾವಾಗಲೂ ಕೃತಜ್ಞರಾಗಿರಬೇಕು ಮತ್ತು ಭಾರತದ ವಿರುದ್ಧ ಮುಯಿಝು ಅವರ ಟೀಕೆಗಳು ಅನಗತ್ಯ. ಇಂದಿರಾಗಾಂಧಿ ಕಾಲದಿಂದಲೂ ಭಾರತ ಮಾಲ್ಡೀವ್ಸ್ ಜತೆ ಸೌಹಾರ್ದ ಧೋರಣೆ ಅನುಸರಿಸುತ್ತಿದ್ದು, ಅದಕ್ಕೆ ಹಾನಿ ಮಾಡಲು ಮುಯಿಝು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

    ಸಮೀರ್ ಅವರ ಪೋಸ್ಟ್‌ಗೆ ವಿದೇಶಾಂಗ ಸಚಿವ ಎಸ್‌.ಜಯಶಂಕ‌ರ್ ಪ್ರತಿಕ್ರಿಯಿಸಿದ್ದು, ಭಾರತವು ತನ್ನ ಎಲ್ಲಾ ನೆರೆಹೊರೆಯವರ ಬಗ್ಗೆ ಇದೇ ರೀತಿಯ ಧೋರಣೆ ಅನುಸರಿಸುತ್ತದೆ ಎಂದು ಹೇಳಿದ್ದಾರೆ.

    ಮಾಲ್ಡೀವ್ಸ್ ನಂತರ ಭಾರತವು ಶ್ರೀಲಂಕಾಗೆ ಟನ್​ಗಳಷ್ಟು ಈರುಳ್ಳಿ ರಫ್ತು ಮಾಡಲು ಯೋಜಿಸುತ್ತಿದೆ. ಏಪ್ರಿಲ್ 3 ರಂದು ಯುಎಇಗೆ 10,ಸಾವಿರ ಮೆಟ್ರಿಕ್‌ ಟನ್ ಈರುಳ್ಳಿ ರಫ್ತು ಮಾಡಲು ಅನುಮತಿ ನೀಡಲಾಯಿತು. ಯುಎಇಗೆ 14,400 ಮೆಟ್ರಿಕ್ ಟನ್ ಈರುಳ್ಳಿ ರಫ್ತು ಮಾಡಲು ಮಾರ್ಚ್‌ನಲ್ಲಿ ಭಾರತ ಅನುಮೋದನೆ ನೀಡುವುದರ ಜೊತೆಗೆ ಇದು ಹೆಚ್ಚುವರಿಯಾಗಿದೆ.

    ಇದು ಕಡ್ಡಾಯವಲ್ಲ.. ಹಿಂದೂ ವಿವಾಹ ಕುರಿತು ಹೈಕೋರ್ಟ್ ಸಂಚಲನ ತೀರ್ಪು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts