More

    ಥಾಮಸ್ ಕಪ್‌ನಲ್ಲಿ ನಾಕೌಟ್‌ಗೇರಿದ ಭಾರತ

    ಚೆಂಗ್‌ಡು (ಚೀನಾ): ಹಾಲಿ ಚಾಂಪಿಯನ್ ಭಾರತ ಪುರುಷರ ತಂಡ ತನ್ನ ಅಂತಿಮ ಲೀಗ್ ಪಂದ್ಯಕ್ಕೂ ಮುನ್ನ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ೈನಲ್ ಪ್ರವೇಶ ಖಾತ್ರಿಪಡಿಸಿಕೊಂಡಿದೆ. ಸೋಮವಾರ ನಡೆದ ಸಿ ಗುಂಪಿನ ಪಂದ್ಯದಲ್ಲಿ 5-0 ಅಂತರದಿಂದ ಇಂಗ್ಲೆಂಡ್ ವಿರುದ್ಧ ಗೆಲುವು ದಾಖಲಿಸುವ ಮೂಲಕ ನಾಕೌಟ್‌ಗೇರಿದೆ. ಭಾರತ ತಂಡ ಆರಂಭಿಕ ಪಂದ್ಯದಲ್ಲಿ ಥಾಯ್ಲೆಂಡ್ ಎದುರು 4-1 ಅಂತರದಿಂದ ಗೆಲುವು ಸಾಧಿಸಿತ್ತು.
    ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಎಚ್‌ಎಸ್ ಪ್ರಣಯ್ 21-15, 21-15 ರಿಂದ ಹ್ಯಾರಿ ಹುವಾಂಗ್ ಅವರನ್ನು ಮಣಿಸಿ ಗೆಲುವಿನ ಹಾದಿಗೆ ಮರಳಿದರು. ಮೊದಲ ಡಬಲ್ಸ್‌ನಲ್ಲಿ ವಿಶ್ವ ನಂ.3 ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ 21-17, 19-2, 21-15ರಿಂದ ಮೂರು ಗೇಮ್‌ಗಳ ಹೋರಾಟದಲ್ಲಿ ಬೆನ್ ಲೇನ್-ಸೀನ್ ವೆಂಡಿ ಜೋಡಿಯನ್ನು ಪರಾಭವಗೊಳಿಸಿದರು.

    ನಂತರ ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ ಮಾಜಿ ನಂ.1 ಆಟಗಾರ ಕಿಡಂಬಿ ಶ್ರೀಕಾಂತ್ 21-16, 21-11 ಅಂತರದಿಂದ ನದೀಮ್ ದಳವಿ ಜಯ ದಾಖಲಿಸಿ ಭಾರತಕ್ಕೆ 3-0 ಮುನ್ನಡೆ ತಂದುಕೊಟ್ಟರು.ಎರಡನೇ ಡಬಲ್ಸ್ ಜೋಡಿ ಎಂಆರ್ ಅರ್ಜುನ್ ಮತ್ತು ಧ್ರುವ ಕಪಿಲಾ 21-17, 21-19 ರಿಂದ ರೋರಿ ಈಸ್ಟನ್-ಅಲೆಕ್ಸೃ್ ಗ್ರೀನ್ ಅವರನ್ನು ಸೋಲಿಸಿದರೆ, ಅಂತಿಮ ಸಿಂಗಲ್ಸ್ ಪಂದ್ಯದಲ್ಲಿ 24 ವರ್ಷದ ಕಿರಣ್ ಜಾಜರ್ 21-18, 21-12 ರಿಂದ ಚೋಳನ್ ಕಯಾನ್ ವಿರುದ್ಧ ಮೇಲುಗೈ ಸಾಧಿಸಿ ಗೆಲುವಿನ ಅಂತರವನ್ನು ವಿಸ್ತರಿಸಿದರು. ಭಾರತ ಬುಧವಾರ ತನ್ನ ಗುಂಪಿನ ಅಂತಿಮ ಪಂದ್ಯದಲ್ಲಿ ಗುಂಪಿನ ಅಗ್ರಸ್ಥಾನಿ ಹಾಗೂ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು ಎದುರಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts