More

    ನಾಯಿಯ ಅಂತ್ಯಸಂಸ್ಕಾರ.. ಇಡೀ ಊರೇ ಸ್ಪಂದಿಸಿತು!

    ಅಮರಾವತಿ(ಆಂಧ್ರಪ್ರದೇಶ)​: ಮಾನವ ಅನಾದಿ ಕಾಲದಿಂದಲೂ ಕೆಲವು ಸರಳ ಪ್ರಾಣಿಗಳೊಂದಿಗೆ ಆಳವಾದ ಬಾಂಧವ್ಯವನ್ನು ಹೊಂದಿದ್ದಾನೆ. ನಾಯಿ, ಬೆಕ್ಕು, ಹಸು, ಗೂಳಿ, ಆಡು, ಕುರಿ, ಮೊಲ ಮತ್ತು ಕೋಳಿ ಸೇರಿದಂತೆ ಕೆಲವು ಬಗೆಯ ಪಕ್ಷಿಗಳನ್ನು ಮನೆಯಲ್ಲಿ ಸಾಕುತ್ತಾನೆ. ಇವೆಲ್ಲವುಗಳಲ್ಲಿ ವಿಶ್ವಾಸಕ್ಕೆ ಹೆಸರಾದ ನಾಯಿಗೆ ವಿಶೇಷ ಸ್ಥಾನವಿದೆ. ನಾಯಿಗಳು ಮನುಷ್ಯರನ್ನು ತುಂಬಾ ನಂಬುತ್ತವೆ. ಸ್ವಲ್ಪ ಪ್ರೀತಿಯಿಂದ ನೋಡಿಕೊಂಡು ಊಟ ನೀಡಿದರೆ ಸಾಕು ಬಾಲ ಅಲ್ಲಾಡಿಸುತ್ತಾ ಹಿಂಬಾಲಿಸುತ್ತವೆ. ಅವು ತನ್ನ ಯಜಮಾನನಿಗಾಗಿ ಪ್ರಾಣ ಕೊಡಲು ಸಹ ಸಿದ್ಧವಾಗಿಬಿಡುತ್ತವೆ.

    ಇದನ್ನೂ ಓದಿ: ಪ್ರಯಾಣಿಕರ ದೇಹದೊಳಗಿತ್ತು ಕೋಟಿ ಕೋಟಿ ರೂ.ಮೌಲ್ಯದ ಚಿನ್ನಾಭರಣ! ಕಸ್ಟಮ್ಸ್ ಅಧಿಕಾರಿಗಳು ಪತ್ತೆಹಚ್ಚಿದ್ದೇಗೆ?

    ಇನ್ನು ನಾಯಿ ಮನೆ, ತೋಟಕ್ಕೆ ಯಾವಾಗಲೂ ಕಾವಲು ಕಾಯುತ್ತವೆ. ಅದಕ್ಕಾಗಿಯೇ ಮನೆಗಳಲ್ಲಿ ಅನೇಕ ರೀತಿಯ ನಾಯಿಗಳನ್ನು ಸಾಕಲಾಗುತ್ತದೆ. ಅವುಗಳ ಪ್ರೀತಿ-ವಿಶ್ವಾಸಕ್ಕೆ ಮಾರುಹೋಗಿ ಅನೇಕರು ಜನ್ಮದಿನದ ಆಚರಣೆ ಮತ್ತು ಅಂತ್ಯಕ್ರಿಯೆಗಳನ್ನು ಸಹ ನಡೆಸುತ್ತಾರೆ. ಇಂತಹದ್ದೇ ಘಟನೆ ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

    ಪೆಂಟಪಲ್ಲಿಯಲ್ಲಿ ಪೆನುಗುಲ ರವೀಂದ್ರ ಮತ್ತು ಬೇಬಿ ಕುಟುಂಬದವರು ಪ್ರೀತಿಯಿಂದ ಸಾಕುತ್ತಿದ್ದ ಆರು ವರ್ಷದ ಭೀಮ್ ಎಂಬ ನಾಯಿ ಸಾವನ್ನಪ್ಪಿದೆ. ಇದರಿಂದ ಕುಟುಂಬಸ್ಥರು ಏಕಾಎಕಿ ಶೋಕಸಾಗರದಲ್ಲಿ ಮುಳುಗಿದ್ದಾರೆ. ಅವನ(ನಾಯಿ)ನ್ನು ಬಹಳ ಪ್ರೀತಿಯಿಂದ ನೋಡಿಕೊಂಡು ಬಂದಿದ್ದೇವೆ. ಭೀಮ ನಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬನಾಗಿ ಬೆಳೆಸಿದ್ದೇವೆ ಎಂದು ಕಣ್ಣೀರಿಟ್ಟರು.

    ಈ ದಂಪತಿಯ ಪುತ್ರ ನೂತನ್ ನಾಯಿಯೊಂದಿಗೆ ಕಳೆದ ಕ್ಷಣಗಳನ್ನು ನೆನೆದು ಕಣ್ಣೀರಿಟ್ಟ. ಪ್ರಾಣಿಪ್ರೀತಿಯಿಂದ ಆರು ವರ್ಷದ ಹಿಂದೆ ಭೀಮನನ್ನು ಕರೆತಂದು ಸಾಕಿದ್ದೇನೆ. ಪ್ರತಿ ವರ್ಷ ಭೀಮನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದೆವು ಎನ್ನುತ್ತಾನೆ ನೂತನ್.

    ಭೀಮ ನಾಯಿ ಅಂತ್ಯಸಂಸ್ಕಾರವನ್ನು ಈ ಕುಟುಂಬ ಮಾನವನ ಮೃತದೇಹಕ್ಕೆ ನೆರವೇರಿಸುವ ಮಾದರಿಯಲ್ಲೇ ಮಾಡಲಾಯಿತು. ಚಿತೆಯಲ್ಲಿ ಸುಡಲಾಯಿತು. ಕುಟುಂಬಸ್ಥರು, ಪುಟಾಣಿಗಳು ಹಾಗೂ ಗ್ರಾಮಸ್ಥರೆಲ್ಲ ಸೇರಿ ನಾಯಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ನಾಯಿ ಮೃತದೇಹವನ್ನು ಹೂವುಗಳೊಂದಿಗೆ ಅಲಂಕರಿಸಿ ಹೊತ್ತು ತರುವಾಗ ದಾರಿಯುದ್ದಕ್ಕೂ ಪಟಾಕಿ ಸಿಡಿಸಿ ಸ್ಮಶಾನಕ್ಕೆ ತಂದು ಅಂತ್ಯಸಂಸ್ಕಾರ ಮಾಡಲಾಯಿತು.

    ಇನ್ನೆರಡು ದಿನಗಳಲ್ಲಿ ಭೀಮನ ತಿಥಿ(ಪುಣ್ಯಸ್ಮರಣೆ) ನಡೆಸುವುದಾಗಿ ಕುಟುಂಬಸ್ಥರು ತಿಳಿಸಿದರು. ನೆರೆದವರೆಲ್ಲರ ಕಣ್ಣಾಲಿಗಳಲ್ಲಿ ಭೀಮನ ಅಗಲಿಕೆಗೆ ಕಣ್ಣೀರು ಬಂದಿತ್ತು. ಎಲ್ಲರೂ ಭೀಮನ ಆತ್ಮಕ್ಕೆ ಶಾಂತಿ ಸಿಗಲಿ ದೇವರಲ್ಲಿ ಮೊರೆಯಿಟ್ಟರು. ಇಷ್ಟೆಲ್ಲಾ ನಂಬಿಕೆ ಇಟ್ಟಿದ್ದ ನಾಯಿಯ ಕುಟುಂಬಸ್ಥರ ಪ್ರೀತಿ ಕಂಡು ಗ್ರಾಮಸ್ಥರು ಭಾವುಕರಾದರು.

    ‘ಹನುಮಾನ್’ ಬರೆಯಿತು ಓಟಿಟಿಯಲ್ಲೂ ದಾಖಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts