More

    ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ

    ಚಿಂಚೋಳಿ: ನರೇಗಾ ಯೋಜನೆಯಡಿ ನಿರಂತರವಾಗಿ ಉದ್ಯೋಗ ಕಲ್ಪಿಸಲಾಗುವುದು. ಮೂಲ ಸೌಕರ್ಯಗಳೊಂದಿಗೆ ಕೂಲಿ ಕೆಲಸ ಮಾಡಿ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು. ಚುನಾವಣೆ ಪ್ರಜಾಪ್ರಭುತ್ವದ ಬಹು ದೊಡ್ಡ ಹಬ್ಬವಾಗಿದ್ದು, ಪ್ರತಿಯೊಬ್ಬರೂ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್‌ಸಿಂಗ್ ಮೀನಾ ಕರೆ ನೀಡಿದರು.

    ಕುಂಚಾವರಂ ಭಾಗದಲ್ಲಿನ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಯಾರು ಗುಳೆ ಹೋಗುಬಾರದು. ನರೇಗಾ ಯೋಜನೆಯಡಿ ನಿಮ್ಮೂರಿನಲ್ಲೇ ಕೆಲಸ ಮಾಡಿ, ಉತ್ತಮ ಬದುಕು ನಡೆಸಿ. ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಹೇಳಿದರು.

    ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್‌ಕುಮಾರ್ ಪಾಟೀಲ್, ತಾಪಂ ಇಒ ಶಂಕರ ರಾಠೋಡ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹ್ಮದ್ ಮುನೀರ್ ಅಹ್ಮದ್, ತಾಪಂ ಸಹಾಯಕ ನಿರ್ದೇಶಕ ಶಿವಶಂಕ್ರಯ್ಯ ಸ್ವಾಮಿ, ಅರಣ್ಯ ಅಧಿಕಾರಿ ಸಿದ್ದಾರೂಢ, ತಾಪಂ ಯೋಜನಾಧಿಕಾರಿ ಮಲ್ಲಿಕಾರ್ಜುನ ಕಟ್ಟಿಮನಿ, ಗ್ರಾಪಂ ಪಿಡಿಒ ದಶರಥ ಪಾತ್ರೆ, ಪ್ರಮುಖರಾದ ಭೀಮಾಶಂಕರ ಕಮಕನೂರ, ಅನೀಲ್ ರಾಠೋಡ್, ಶ್ರೀಕಾಂತ, ಅಂಬರೀಷ, ಮಲ್ಲೇಶಂ, ಜನಾರ್ಧನ, ಬಸವರಾಜ, ಅಂಬಿಕಾ ಇತರರಿದ್ದರು.

    ಶೇರಿಭೀಕನಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಐನೋಳ್ಳಿ, ಚಂದ್ರಂಪಳ್ಳಿಯಲ್ಲಿ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು.

    ಶೇರಿಭೀಕನಳ್ಳಿ ತಾಂಡಾ ಅರಣ್ಯ ಒಡಲಲ್ಲಿದ್ದು, ಸುಮಾರು ೬ ಕಿಮೀ ಸಂಚರಿಸಿ ಮತದಾನ ಮಾಡುವ ಸ್ಥಿತಿಯಿದೆ. ಈ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು, ಇದೊಂದು ಬಾರಿ ದೂರ ಹೋಗಿ ವೋಟಿಂಗ್ ಮಾಡಿ. ಮುಂದಿನ ಬಾರಿ ನಿಮ್ಮೂರಿನಲ್ಲೇ ಮತದಾನ ಕೇಂದ್ರ ಸ್ಥಾಪಿಸಲಾಗುವುದು.
    | ಭಂವರ್‌ಸಿಂಗ್ ಮೀನಾ, ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts