VIDEO VIRAL | ಗಾಳಿ ರಭಸಕ್ಕೆ ಮಗುಚಿ ಬಿತ್ತು ಮೊಬೈಲ್​ ಟವರ್!

tower
Published on

ರಾಜಸ್ಥಾನ: ರಾಜಸ್ಥಾನದ ನಗೌರ್ ಜಿಲ್ಲೆಯಲ್ಲಿ ಪ್ರಬಲವಾದ ಚಂಡಮಾರುತದಿಂದಾಗಿ ಮೊಬೈಲ್ ಟವರ್ ಕುಸಿದು ಬಿದ್ದಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

16 ಸೆಕೆಂಡ್‌ಗಳ ವಿಡಿಯೋ ಕ್ಲಿಪ್ ಮೊಬೈಲ್ ಟವರ್ ಎತ್ತರವಾಗಿ ನಿಂತಿರುವುದನ್ನು ತೋರಿಸುತ್ತಿದ್ದು, ಪ್ರಬಲವಾದ ಚಂಡಮಾರುತದ ರಭಸಕ್ಕೆ ಮೊಬೈಲ್‌ ಟವರ್ ಬೀಳುತ್ತದೆ. ಜಿಲ್ಲೆಯಲ್ಲಿ ಭೀಕರ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು.

ಈ ಕುರಿತಾಗಿ ನಾನಾ ರೀತಿಯ ಕಾಮೆಂಟ್​ಗಳನ್ನು ಜನರು ಬರೆದಿದ್ದಾರೆ.
ಒಬ್ಬರು ಈ ಘಟನೆಗೆ ಕಾರಣ ಏನು ಎಂದು ಊಹಿಸಲು ಪ್ರಯತ್ನಿಸಿದ್ದು "ಇದು ಸುಳಿಗಾಳಿಯಿಂದಾಗಿ ಉಂಟಾದ ಕಂಪನಗಳಿಂದಾಗಿ ನಡೆದಿದೆ. ಗಾಳಿಯ ವೇಗವು ಗೋಪುರವು ಅದರ ನೈಸರ್ಗಿಕ ಫ್ರೀಕ್ವೆನ್ಸಿಯಲ್ಲಿ ಕಂಪಿಸುವಂತೆ ಮಾಡಿದೆ. ಇದರಿಂದಾಗಿ ಟವರ್ ಅಲುಗಾಡಲು ಪ್ರಾರಂಭಿಸಿದ್ದು ಬೀಳುವವರೆಗೂ ಅದೇ ಫ್ರೀಕ್ವೆನ್ಸಿಯಲ್ಲಿ ಅದುರಿದೆ" ಎಂದು ಬರೆದಿದ್ದಾರೆ.

ಇನ್ನೊಬ್ಬರು "ಟವರ್ ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಬರೆದಿದ್ದಾರೆ.

ಮತ್ತೊಬ್ಬರು "ಟವರ್​, ತನ್ನ ಕಳಪೆ ಡಿಸೈನ್​ ಹಾಗೂ ನಿರ್ಮಾಣದ ಕ್ವಾಲಿಟಿಯಿಂದಾಗಿ ಬಿದ್ದಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net