More

    ರಸ್ತೆ ಸಮಸ್ಯೆ | ಮಗುವಿನ ಮೃತದೇಹವನ್ನು 10 ಕಿಮೀ ದೂರದ ತನಕ ಹೊತ್ತೊಯ್ದ ಪೋಷಕರು!

    ವೆಲ್ಲೂರು: ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ 18 ತಿಂಗಳ ಮಗುವಿಗೆ ಹಾವು ಕಡಿದಿದ್ದು ಮೃತಪಟ್ಟಿದೆ. ಆಸ್ಪತ್ರೆಯಲ್ಲಿ ಮರಣ ಖಚಿತಗೊಂಡಿದ್ದು ಪೋಷಕರು ಅಂತ್ಯಸಂಸ್ಕಾರಕ್ಕಾಗಿ ವಾಪಸ್​ ತೆರಳುವಾಗ ಹೃದಯವಿದ್ರಾವಕ ಘಟನೆ ನಡೆದಿದೆ.

    ಗ್ರಾಮದಲ್ಲಿ ಸರಿಯಾದ ರಸ್ತೆ ಇಲ್ಲದ ಹಿನ್ನೆಲೆಯಲ್ಲಿ ಪೋಷಕರು ಆಸ್ಪತ್ರೆಗೆ ತಲುಪಲು ಸಮಯ ತೆಗೆದುಕೊಂಡಿದ್ದರಿಂದ ಧನುಷ್ಕಾ ಎಂಬ ಮಗು ಸಾವಿಗೀಡಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಆಕೆಯ ಶವವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ನಂತರ ಮಗುವಿನ ಮೃತದೇಹವನ್ನು ಅಂತ್ಯಸಂಸ್ಕಾರ ನೆರವೇರಿಸಲು ಆಕೆಯ ಪೋಷಕರು ಮನೆಗೆ ನಡೆದೇ ಕೊಂಡೊಯ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಇದನ್ನೂ ಓದಿ: ಸಕಾಲಕ್ಕೆ ಸಿಗದ ಆ್ಯಂಬುಲೆನ್ಸ್​; ಆಟೋದಲ್ಲಿ ಪ್ರಯಾಣಿಸಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಗರ್ಭಿಣಿ

    ಹಾವು ಕಚ್ಚಿದ ಘಟನೆಯ ನಂತರ ಪೋಷಕರು ಮತ್ತು ಸಂಬಂಧಿಕರು ಆಕೆಯನ್ನು ವೆಲ್ಲೂರಿನ ಆಸ್ಪತ್ರೆಗೆ ಕರೆದೊಯ್ದರು, ಆದರೆ ಮಾರ್ಗ ಮಧ್ಯೆ ಬಾಲಕಿ ಸಾವನ್ನಪ್ಪಿದ್ದಾಳೆ.

    ಮೃತರ ಪೋಷಕರನ್ನು ವಿಜಯ್ ಮತ್ತು ಪ್ರಿಯಾ ಎಂದು ಗುರುತಿಸಲಾಗಿದೆ.

    ಇದನ್ನೂ ಓದಿ: ನನಗೆ ಮಗು ಬೇಕು… ಗಂಡನನ್ನು ಮನೆಗೆ ಕಳುಹಿಸಿಕೊಡಿ! ಜೈಲು ಅಧಿಕಾರಿಗೆ ಪತ್ರ ಬರೆದ ಕೈದಿಯ ಪತ್ನಿ

    ಈ ಘಟನೆಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ಎನ್‌ಸಿಡಬ್ಲ್ಯೂ ಸದಸ್ಯೆ ಮತ್ತು ಬಿಜೆಪಿ ನಾಯಕಿ ಖುಷ್ಬು, “ಈ ಸುದ್ದಿಯನ್ನು ನೋಡಿ ನಾನು ಆಘಾತಕ್ಕೊಳಗಾಗಿದ್ದೇನೆ. ಪೋಷಕರಿಗೆ ಆಘಾತವಾಗಿದೆ. ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎನ್ನುವ ಭಾವನೆ ಎಲ್ಲೋ ಆಳದಲ್ಲಿ ಹೂತುಹೋಗಿದೆ ಎಂದು ತೋರುತ್ತದೆ. ಕೂಡಲೇ ಆಂಬ್ಯುಲೆನ್ಸ್ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ವಿಳಂಬ ಮಾಡದೆ ಈ ಬಗ್ಗೆ ಗಮನಹರಿಸುವಂತೆ ಒತ್ತಾಯಿಸಿ” ಎಂದು ಬರೆದುಕೊಂಡಿದ್ದಾರೆ.

    ರಸ್ತೆ ಸರಿಯಿಲ್ಲದ ಕಾರಣ ಆಸ್ಪತ್ರೆಗೆ ತಲುಪಲು ವಿಳಂಬವಾಗಿದೆ, ಇದರಿಂದಾಗಿ ಮಗುವಿಗೆ ಸಮಯಕ್ಕೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಮಗುವಿನ ಸಂಬಂಧಿಕರು ಆರೋಪಿಸಿದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts