More

    ವಿರಾಟ್​ ತಂಡಕ್ಕಿಂತ ತನ್ನ ಸ್ವಾರ್ಥಕ್ಕಾಗಿ ಕ್ರಿಕೆಟ್​ ಆಡುತ್ತಾರೆ; ಕೊಹ್ಲಿ ಕುರಿತು ಮತ್ತೊಮ್ಮೆ ನಾಲಿಗೆ ಹರಿಬಿಟ್ಟ ಪಾಕ್​ ಮಾಜಿ ಆಟಗಾರ

    ಲಾಹೋರ್​: ಪಾಕಿಸ್ತಾನ ಕ್ರಿಕೆಟ್​ ತಂಡವು ಇತ್ತೀಚಿನ ವರ್ಷಗಳಲ್ಲಿ ಒಂದಿಲ್ಲೊಂದು ಕಾರಣಕ್ಕೆ ಸದಾ ಟೀಕೆಗೆ ಗುರಿಯಾಗುತ್ತದೆ. ಟಿ-20 ವಿಶ್ವಕಪ್​ ಸೇರಿದಂತೆ ದ್ವಿಪಕ್ಷೀಯ ಸರಣಿಗಳಲ್ಲಿ ಪಾಕಿಸ್ತಾನ ಕ್ರಿಕೆಟ್​ ತಂಡವು ಕಳಪೆ ಪ್ರದರ್ಶನದಿಂದಾಗಿ ಮುಖಭಂಗವನ್ನು ಅನುಭವಿಸುತ್ತಿದ್ದು, ಇಷ್ಟಾದರೂ ಅಲ್ಲಿನ ಮಾಜಿ ಕ್ರಿಕೆಟಿಗರು ಟೀಮ್​ ಇಂಡಿಯಾ ಆಟಗಾರರ ವಿರುದ್ಧ ಆರೋಪ ಅಥವಾ ಟೀಕೆ ಮಾಡುವುದ್ನು ನಿಲ್ಲಿಸದಿರುವುದು ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

    2023ರಲ್ಲಿ ಭಾರತದ ಅತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ರನ್ನರ್​ಅಪ್​ ಆಗಿ ಹೊರಹೊಮ್ಮಿತ್ತು. ಆದರೆ, ಪಾಕಿಸ್ತಾನ ಕ್ರಿಕೆಟ್​ ತಂಡವು ತನ್ನ ಹೀನಾಯ ಪ್ರದರ್ಶನದಿಂದಾಗಿ ಟೂರ್ನಿಯಿಂದ ಹೊರಬಿದ್ದಿತ್ತು. ಇದರ ನಡುವೆಯೇ ಪಾಕ್​ ಕ್ರಿಕೆಟ್​ ತಂಡದ ಮಾಜಿ ಆಟಗಾರ ಮೊಹಮ್ಮದ್​ ಹಫೀಜ್​ ವಿರಾಟ್​ ಕೊಹ್ಲಿ ಕುರಿತು ನೀಡಿರುವ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದು, ಭಾರತೀಯರು ಕಿಡಿಕಾರಿದ್ದಾರೆ.

    ಕಳೆದ ವರ್ಷ ಕಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಭಾರತದ ಪರ ವಿರಾಟ್​ ಕೊಹ್ಲಿ 121 ಎಸೆತಗಳನ್ನು ಎದುರಿಸಿ 101 ರನ್​ ಗಳಿಸುವ ಮೂಲಕ ತಂಡ 50 ಓವರ್​ಗಳಲ್ಲಿ ಐದು ವಿಕೆಟ್​ ನಷ್ಟಕ್ಕೆ 326 ರನ್​ ಗಳಿಸುವಲ್ಲಿ ಸಹಕಾರಿಯಾಗಿದ್ದರು. ಆದರೆ, ಈ ಬಗ್ಗೆ ಮಾತನಾಡಿರುವ ಹಫೀಜ್​ ವಿರಾಟ್​ ತಂಡಕ್ಕಿಂತ ತಮ್ಮ ಸ್ವಾರ್ಥಕ್ಕಾಗಿಯೇ ಶತಕ ಗಳಿಸಿದರು ಎಂದು ಆರೋಪಿಸಿದ್ದಾರೆ.

    ಇದನ್ನೂ ಓದಿ: ಕ್ಲೀನ್​ ಶೇವ್​ ಮಾಡಿಸಿದ್ದಕ್ಕೆ ಮಗನನ್ನು ಹಿಗ್ಗಾಮುಗ್ಗಾ ಥಳಿಸಿದ ತಂದೆ; ವಿಡಿಯೋ ವೈರಲ್

    See also  World Cup; ಭಾರತದ ಗೆಲುವಿಗಾಗಿ 240 ಪ್ಯಾಕೇಟ್ ಅಗರಬತ್ತಿ ಖರೀದಿಸಿದ ಕ್ರಿಕೆಟ್ ಅಭಿಮಾನಿ

    ನಾನು ನೋಡಿದಂತೆ ಆಟಗಾರರು 90 ರನ್​ ಗಳಿಸಿದಾಗ ದೊಡ್ಡ ಹೊಡೆತಗಳಿಗೆ ಮುಂದಾಗುತ್ತಾರೆ ಮತ್ತು ಬೇಗನೆ ತಮ್ಮ ಶತಕವನ್ನು ಪೂರ್ಣ ಮಾಡಿಕೊಳ್ಳುವುದರ ಬಗ್ಗೆ ಯೋಚಿಸುತ್ತಿರುತ್ತಾರೆ ಆದರೆ, ವಿರಾಟ್​ ಕೊಹ್ಲಿ ಯಾವುದೇ ದೊಡ್ಡ ಹೊಡೆತಕ್ಕೆ ಕೈಹಾಕದೆ ನಿಧಾನಕ್ಕೆ ಆಡುವ ಮೂಲಕ ತಮ್ಮ ಸ್ವಾರ್ಥವನ್ನು ಎತ್ತಿ ತೋರಿಸಿದರು ಎಂದು ಮೊಹಮ್ಮದ್​ ಹಫೀಜ್​ ವಿರಾಟ್​ ಕೊಹ್ಲಿ ಮತ್ತೊಮ್ಮೆ ದೂರಿದ್ದಾರೆ.

    ಈ ಹಿಂದೆ ವಿಶ್ವಕಪ್​ ಸಮಯದಲ್ಲಿ ವಿರಾಟ್​ ಕೊಹ್ಲಿ ಕುರಿತು ಲಘುವಾಗಿ ಮಾತನಾಡುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದ ಹಫೀಜ್​ ಆ ನಂತರ ಸ್ಪಷ್ಟನೆ ನೀಡುವ ಭರದಲ್ಲಿ ಮತ್ತಷ್ಟು ಟ್ರೋಲ್​ ಆಗಿದ್ದರು ಇದೀಗ ಹಳೆಯ ವಿಚಾರವಾಗಿ ವಿರಾಟ್​ ಕೊಹ್ಲಿ ಕುರಿತು ಮತ್ತೊಮ್ಮೆ ಮಾತನಾಡುವ ಮೂಲಕ ಸುದ್ದಿಯಾಗಿರುವ ಹಫೀಜ್​ ಹೇಗೆ ಸ್ಪಷ್ಟನೆ ನೀಡಲಿದ್ದಾರೆ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts