More

  ರೇಣುಕಾಸ್ವಾಮಿ ಬರ್ಬರ ಹತ್ಯೆ ಕೇಸ್: ಪವಿತ್ರ ಜೈಲಿಗೆ, ದರ್ಶನ್ ಮತ್ತೆ ಪೊಲೀಸ್ ವಶಕ್ಕೆ

  ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್​ ಹಾಗೂ ಗ್ಯಾಂಗ್​ ಪೊಲೀಸರ ವಶದಲ್ಲಿದ್ದು, ಅಧಿಕಾರಿಗಳು ಎಲ್ಲಾ ಆಯಾಮಾಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್​ ಅವರಿಗೆ ಮತ್ತೊಮ್ಮೆ ಆಘಾತವೊಂದು ಎದುರಾಗಿದ್ದು, ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆ ನ್ಯಾಯಾಲಯದ ಎದುರು ಪೊಲೀಸರು ಆರೋಪಿ ದರ್ಶನ್ & ಗ್ಯಾಂಗ್‌ನ ಹಾಜರುಪಡಿಸಿದೆ.

  ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಳೆದ 10 ದಿನಗಳಿಂದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದು, ದಿನ ಕಳೆದಂತೆ ಹೊಸ ಹೆಸರು ಹಾಗೂ ವಿಚಾರಗಳು ಹೊರಬರುತ್ತಿವೆ. ಇದೀಗ ಪೊಲೀಸರು ದರ್ಶನ್​ ಹಾಗೂ ಸಹಚರರನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸಿದ್ದು, ನ್ಯಾಯಾಲಯ ಕೂಡ ಪೊಲೀಸರ ಮನವಿಯನ್ನು ಪುರಸ್ಕರಿಸಿದೆ.

  ಇದನ್ನೂ ಓದಿ: ಹಜ್​ ಯಾತ್ರೆಗೆ ತೆರಳಿದ್ದ ಬೆಂಗಳೂರು ಮೂಲದ ಇಬ್ಬರು ಮೃತ್ಯು

  ಅದರಂತೆ ನ್ಯಾಯಾಲಯವು ದರ್ಶನ್, ವಿನಯ್, ಪ್ರದೂಶ್, ಲಕ್ಷ್ಮಣ್, ಧನರಾಜ್, ನಾಗರಾಜ್‌ನನ್ನು ಪೊಲೀಸ್​ ಕಸ್ಟಡಿಗೆ ನೀಡಿದ್ದು, ಪ್ರಕರಣದ ಉಳಿದ ಆರೋಪಿಗಳನ್ನು ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಈ 6 ಜನರದ್ದೇ ದೊಡ್ಡ ಪಾತ್ರ ಇದೆ ಎಂದು ಆರೋಪ ಮಾಡಲಾಗಿತ್ತು. ಹೀಗಾಗಿ ಇವರನ್ನ 4 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದ್ದರು. ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಲಯವು ಆರು ಆರೋಪಿಗಳ ಪೊಲೀಸ್​ ಕಸ್ಟಡಿಯನ್ನು ವಿಸ್ತರಿಸಿ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.ಉಳಿದ ಆರೋಪಿಗಳಾದ ಪವಿತ್ರಾ ಗೌಡ, ಪವನ್‌, ರಾಘವೇಂದ್ರ, ನಂದೀಶ್‌, ಜಗದೀಶ್‌, ಅನುಕುಮಾರ್‌, ರವಿಶಂಕರ್‌, ದೀಪಕ್‌, ಕೇಶವಮೂರ್ತಿ, ನಿಖಿಲ್ ನಾಯ್ಕ್‌ ಇವರಿಗೆ ನ್ಯಾಯಾಂಗ ಬಂಧನಕ್ಕೆ ತಕರಾರು ಸಲ್ಲಿಸಿಲ್ಲವಾದ್ದರಿಂದ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

  See also  ಕೇಜ್ರಿವಾಲ್ ಸಿಂಹ, ಹೆಚ್ಚು ಕಾಲ ಜೈಲಿನಲ್ಲಿಡಲು ಸಾಧ್ಯವಿಲ್ಲ: ಸುನೀತಾ ಕೇಜ್ರಿವಾಲ್

  ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿದ್ದ ಪೊಲೀಸ್​ ಕಸ್ಟಡಿ ಅಂತ್ಯವಾದ ಬೆನ್ನಲ್ಲೇ ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಮುಖ ಆರೋಪಿ ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಇತ್ತ ಪವಿತ್ರಾ ಗೌಡರನ್ನು ನೋಡಲು ಅವರ ಮಗಳಾ ಖುಷಿ ಹಾಗೂ ಅವರ ತಾಯಿ ನ್ಯಾಯಾಲಯದ ಬಳಿ ಆಗಮಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts