ಹಜ್​ ಯಾತ್ರೆಗೆ ತೆರಳಿದ್ದ ಬೆಂಗಳೂರು ಮೂಲದ ಇಬ್ಬರು ಮೃತ್ಯು

1 Min Read
Haj Yatra

ಬೆಂಗಳೂರು: ಮುಸ್ಲಿಮರ ಪ್ರಮುಖ ಧಾರ್ಮಿಕ ಸ್ಥಳ ಮೆಕ್ಕಾದಲ್ಲಿ ತಾಪಮಾನ ಏರಿಕೆಯಿಂದಾಗಿ ಹಜ್​ ಯಾತ್ರೆಗೆ ತೆರಳಿದ್ದ 600ಕ್ಕೂ ಅಧಿಕ ಯಾತ್ರಿಕರು ಮೃತಪಟ್ಟಿದ್ದು, ಈ ಪೈಕಿ ಭಾರತ ಮೂಲದ 60ಕ್ಕೂ ಹೆಚ್ಚು ಮಂದಿ ಬಿಸಿಲಿನ ತಾಪಕ್ಕೆ ಅಸುನೀಗಿದ್ದಾರೆ. ಈ ಪೈಕಿ ಬೆಂಗಳೂರು ಮೂಲದ ಇಬ್ಬರು ಯಾತ್ರಿಕರು ಮೃತಪಟ್ಟಿದ್ದು, ಈ ಬಗ್ಗೆ ಸಚಿವ ರಹೀಂ ಖಾನ್​ ಮಾತನಾಡಿದ್ದಾರೆ.

ಮೃತರನ್ನು ಕೌಸರ್​ ರುಕ್ಸಾನ್​ (69) ಮತ್ತು ಮೊಹಮ್ಮದ್​ ಇಲಿಯಾಸ್​ (50) ಎಂದು ಗುರುತಿಸಲಾಗಿದ್ದು, ಇವರು ಮೆಕ್ಕಾದಿಂದ 8 ಕಿ.ಮೀ ದೂರವಿರುವಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಬಕ್ರೀದ್​ ಹಬ್ಬ ಪ್ರಯುಕ್ತ ಹಜ್​ ಯಾತ್ರೆಗೆ ಹೋಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ರೇಣುಕಸ್ವಾಮಿ ಹತ್ಯೆ ಕೇಸ್​; ಮೊದಲ ಬಾರಿಗೆ ಪ್ರತಿಕ್ರಿಯಿಸಿದ ದರ್ಶನ್​ ಪತ್ನಿ ವಿಜಯಲಕ್ಷ್ಮೀ

ಈ ಕುರಿತು ಮಾತನಾಡಿರುವ ಸಚಿವ ರಹೀಂ ಖಾನ್​, ಹಜ್ ಯಾತ್ರೆಗೆ ತೆರಳಿದ್ದ ಬೆಂಗಳೂರು ಮೂಲದ ಇಬ್ಬರು ಸಾವನ್ನಪ್ಪಿದ್ದಾರೆ. ದುರಂತದ ಬಗ್ಗೆ ಮಾಹಿತಿ ಬಂದಿದೆ. ಸಚಿವ ಸಂಪುಟ ಸಭೆಯ ಬಳಿಕ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಮೃತದೇಹ ತರಲು ಎಲ್ಲಾ ಪ್ರಯತ್ನ ಮಾಡುತ್ತೇವೆ. ಈ ಭಾರಿ ಹಜ್​ ಯಾತ್ರೆಗೆ ಕರ್ನಾಟಕದಿಂದ 10,300 ಮಂದಿ ತೆರಳಿದ್ದಾರೆ. ಮಹಾರಾಷ್ಟ್ರ ಹಜ್ ಕಮಿಟಿಯಿಂದ ಇನ್ನೂ ಮಾಹಿತಿ ಬರಬೇಕಿದೆ.

ಕೇಂದ್ರ ಸರ್ಕಾರ, ಸ್ಥಳೀಯ ಸರ್ಕಾರದಿಂದಲೂ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ಇಂತಹ ದುರಂತ ಇದೇ ಮೊದಲ ಬಾರಿಗೆ ಆಗಿರೋದು. ಸಮರೋಪಾದಿಯಲ್ಲಿ ನಾವು ಪರಿಹಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ರಹೀಂ ಖಾನ್​ ತಿಳಿಸಿದ್ದಾರೆ.

See also  ಮೇವು ಬ್ಯಾಂಕ್ ಸ್ಥಾಪಿಸಲು ಒತ್ತಾಯ
Share This Article