ನಾ ಕಂಡಂತೆ ಅಫ್ರಿದಿ ಕ್ರಿಕೆಟ್​ ಆಡಿದ್ದಕ್ಕಿಂತ ರಾಜಕೀಯ ಮಾಡಿದ್ದೆ ಹೆಚ್ಚು; ಕಿಡಿಕಾರಿದ ಮಾಜಿ ಕ್ರಿಕೆಟಿಗ

Afridi Ajmal
Published on

ಲಾಹೋರ್​: ಪಾಕಿಸ್ತಾನ ಕ್ರಿಕೆಟ್​ ತಂಡಕ್ಕೂ ವಿವಾದಗಳಿಗೂ ಎಲ್ಲಿಲ್ಲದ ನಂಟು ಎಂದು ಹೇಳಬಹುದಾಗಿದೆ. ಸದಾ ಒಂದಿಲ್ಲೊಂದು ವಿಚಾರಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗುವ ಪಾಕಿಸ್ತಾನ ಇದೀಗ ತನ್ನ ಆಂತರಿಕ ಕಿತ್ತಾಟದಿಂದ ಸದ್ದು ಮಾಡುತ್ತಿದೆ. ಇದೀಗ ಮಾಜಿ ಕ್ರಿಕೆಟಿಗರ ನಡುವಿನ ತಿಕ್ಕಾಟ ಬಯಲಾಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.

ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರರಾದ ಶಾಹಿದ್​ ಅಫ್ರಿದಿ ಹಾಗೂ ಯೂನಿಸ್​ ಖಾನ್​ ನಡುವಿನ ತಿಕ್ಕಾಟದ ಕುರಿತು ಸಯೀದ್​ ಅಜ್ಮಲ್​ ಮಾತನಾಡಿದ್ದಾರೆ ಎಂಬ ವಿಡಿಯೋ ವೈರಲ್​ ಆಗಿದ್ದು, ಪಾಕಿಸ್ತಾನ ಕ್ರಿಕೆಟ್​ ಮಂಡಳಿಯಲ್ಲಿ ಎಲ್ಲವೂ ಸರಿ ಇಲ್ಲವೆಂಬಂತೆ ಭಾಸವಾಗುತ್ತಿದೆ. ಇದೀಗ ಇವರು ಆಡಿರುವ ಮಾತುಗಳೇ ಇದಕ್ಕೆ ಸಾಕ್ಷಿಯಾಗಿದ್ದು, ವೈರಲ್​ ಆದ ಬಳಿಕ ಇದು ಸುಳ್ಳು ಎಂದು ಅಲ್ಲಗೆಳೆದಿದ್ದಾರೆ.

ನಾ ಕಂಡಂತೆ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ ಶಾಹಿದ್​ ಅಫ್ರಿದಿ ಆಡಿದ್ದಕ್ಕಿಂತ ಹೆಚ್ಚಾಗಿ ರಾಜಕೀಯ ಮಾಡಿದ್ದಾರೆ. ಶಾಹಿದ್​ ಅಫ್ರಿದಿ ಅಂದು ತಂಡದ ನಾಯಕರಾಗಿದ್ದ ಯೂನಿಸ್​ ಖಾನ್​ ವಿರುದ್ಧ ಆಟಗಾರರನ್ನು ಎತ್ತಿಕಟ್ಟಿದ್ದರು ಮತ್ತು ಎಲ್ಲರಿಗೂ ಕುರಾನ್​ ಮೇಲೆ ಪ್ರಮಾಣ ಮಾಡುವಂತೆ ಒತ್ತಾಯಿಸಿದ್ದರು. ಈಗ ಮಾತ್ರ ಹಳೆಯದನ್ನೆಲ್ಲಾ ಮರೆತು ಟ್ವಿಟರ್​ನಲ್ಲಿ ಸಂತನಂತೆ ವರ್ತಿಸುತ್ತಿದ್ದಾರೆ. ಅಫ್ರಿದಿ ತಂಡದಲ್ಲಿದ್ದಾಗ ಆಡಿದ್ದಕ್ಕಿಂತ ಹೆಚ್ಚಾಗಿ ರಾಜಕೀಯ ಮಾಡಿದ್ದೆ ಜಾಸ್ತಿ. ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ವಿಚಾರಗಳಿಗೆ ಸಂಬಂಧಿಸಿದಂತೆ ಅಫ್ರಿದಿಯನ್ನು ಬ್ಯಾನ್​ ಮಾಡುವುದು ಸೂಕ್ತ ಎಂದು ಸಯೀದ್​ ಅಜ್ಮಲ್​ ಕಿಡಿಕಾರಿದ್ದಾರೆ.

ಇತ್ತ ಈ ಹೇಳಿಕೆ ವೈರಲ್​ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಸಯಿದ್​ ಅಜ್ಮಲ್​ ನನ್ನ ನೀಡಿದ ಹೇಳಿಕೆಯನ್ನು ತಿರುಚಲಾಗಿದೆ. ಮೊದಲಿಗೆ ನಾನು ಹೇಳಿದ್ದೆ ಒಂದು ಅಲ್ಲಿ ಪ್ರಸಾರ ಆಗಿರುವುದೇ ಇನ್ನೊಂದು ಇದಕ್ಕೆ ಸಂಬಂಧಿಸಿದಂತೆ ಕೂಡಲೇ ಮಾಧ್ಯಮದವರು ಸ್ಪಷ್ಟನೆ ನೀಡಬೇಕೆಂದು ಸಯಿದ್​ ಅಜ್ಮಲ್​ ಆಗ್ರಹಿಸಿದ್ದಾರೆ. ಇತ್ತ ಈ ಹೇಳಿಕೆ ವೈರಲ್​ ಆಗಿದ್ದು, ಪಾಕಿಸ್ತಾನ ಮತ್ತೊಮ್ಮೆ ವಿಶ್ವದ ಮುಂದೆ ತನ್ನ ಮಾನವನ್ನ ತನ್ನ ಕೈಯಾರೆ ಹರಾಜು ಹಾಕಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net