ನವದೆಹಲಿ: ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವು ಈ ಹಿಂದೆ ಜಾರಿಗೆ ತರಲು ಉದ್ಧೇಶಿಸಿದ್ದ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಅಕ್ರಮಕ್ಕೆ ಸಂಬಂಧಿಸಿದಂತೆ 17 ತಿಂಗಳು ಸೆರೆವಾಸದಲ್ಲಿದ್ದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ (ಆಗಸ್ಟ್ 09) ಷರತ್ತುಬದ್ಧ ಜಾಮೀನನ್ನು ಮಂಜೂರು ಮಾಡಿದೆ.
ಅಬಕಾರಿ ನೀತಿ ಜಾರಿಗೆ ಸಂಬಂಧಿಸಿದಂತೆ ನಡೆದಿತ್ತು ಎನ್ನಲಾದ ಬಹುಕೋಟಿ ಅಕ್ರಮಕ್ಕೆ ಸಂಬಂಧಿಸಿದಂತೆ 2023ರ ಫೆಬ್ರವರಿ ತಿಂಗಳಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಮನೀಷ್ ಸಿಸೋಡಿಯಾರನ್ನು ಬಂಧಿಸಿತ್ತು. ಸಿಸೋಡಿಯಾ ಬಂಧಮುಕ್ತರಾಗುತ್ತಿದ್ದಂತೆ ಎಎಪಿ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲುಮುಟ್ಟಿದ್ದು, ಮೆರವಣಿಗೆ ನಡೆಸಿ, ಹೂವಿನ ಮಳೆಗೆರೆದು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಇತ್ತ ಸಿಸೋಡಿಯಾ ಮಹಾತ್ಮ ಗಾಂಧಿ ಸಮಾಧಿ ರಾಜ್ಘಾಟ್, ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಇದನ್ನೂ ಓದಿ: ಬಾಂಗ್ಲಾ ನಂತರ ಭಾರತದಲ್ಲೂ ಜನರು ಪ್ರಧಾನಿ ವಿರುದ್ಧ ದಂಗೆ ಏಳುತ್ತಾರೆ: ಕಾಂಗ್ರೆಸ್ ನಾಯಕ ಸಜ್ಜನ್ ಸಿಂಗ್
17-18 ತಿಂಗಳಿಗಿಂತ ಮುಂಚಿತವಾಗಿಯೇ ನಾವು ಈ ಹೋರಾಟವನ್ನು ಮಾಡುತ್ತಿದ್ದೇವೆ. ನಾನು ಜೈಲಿನಲ್ಲಿದ್ದೆ, ಅರವಿಂದ್ ಈಗ ಜೈಲಿನಲ್ಲಿದ್ದಾರೆ. ಈಗಲೂ ನಿವೂ ಹೋರಾಟ ಮಾಡುತ್ತಿದ್ದೀರಿ. ನಮ್ಮ ಪರ ಕೆಲಸ ಮಾಡುತ್ತಿರುವ ವಕೀಲರು ದಣಿವರಿಯದೆ ನ್ಯಾಯಾಲಯಗಳನ್ನು ಸುತ್ತುತ್ತಿದ್ದಾರೆ. ಅಭಿಷೇಕ್ ಮನು ಸಿಂಘ್ವಿ ನನಗೆ ದೇವರಿದ್ದಂತೆ ಅರವಿಂದ್ ಕೇಜ್ರಿವಾಲ್ ಅವರು ಶೀಘ್ರ ಬಂಧಮುಕ್ತರಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಚಿವ ಸೌರಭ್ ಭಾರಧ್ವಾಜ್ ಮಾತನಾಡಿ, ಎಎಪಿ ಸಂಕಷ್ಟದಲ್ಲಿರುವ ಪ್ರತಿಬಾರಿಯೂ ಹನುಮಂತ ನಮ್ಮನ್ನು ಕಾಪಾಡಿದ್ದೇನೆ. ಶೀಘ್ರದಲ್ಲೇ ಸಂಕಷ್ಟಗಳು ದೂರಾಗಲಿವೆ ಎಂದು ಸೌರಭ್ ಹೇಳಿದ್ದಾರೆ.