ವಿನೇಶ್​ ಪೋಗಟ್​ ಅನರ್ಹ; ನನ್ನ ಪ್ರಕಾರ ಆಕೆಯದ್ದೆ ತಪ್ಪು ಎಂದ ಸೈನಾ ನೆಹ್ವಾಲ್​

Saina Phogat
Published on

ಹೈದರಾಬಾದ್: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ನಡೆದ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಭಾರತದ ಕುಸ್ತಿಪಟು ವಿನೇಶ್​ ಪೋಗಟ್​ ಅನರ್ಹಗೊಂಡಿದ್ದರು. ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿ ವಿನೇಶ್ ಅವರು ಫೈನಲ್​ ಪ್ರವೇಶಿಸಿದ್ದರು. ಆದರೆ, ಫೈನಲ್​ಗೂ ಮುನ್ನ ನಡೆದ ತೂಕ ಪರೀಕ್ಷೆಯಲ್ಲಿ ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚಿದ್ದರಿಂದ ವಿನೇಶ್​ ಅವರನ್ನು ಅನರ್ಹಗೊಳಿಸಲಾಗಿದೆ. ಒಂದು ವೇಳೆ ಅರ್ಹತೆ ಪಡೆದಿದ್ದರೆ ನಿನ್ನೆ (ಆಗಸ್ಟ್​ 07) ಅಮೆರಿಕದ ಸಾರಾ ಹಿಲ್ಡರ್‌ಬ್ರಾಂಡ್ ವಿರುದ್ಧ ಆಡಬೇಕಿತ್ತು. ಆದರೆ, ಅನರ್ಹಗೊಂಡಿದ್ದರಿಂದ ಪದಕದ ಆಸೆ ಅಂತ್ಯಗೊಂಡಿತು.

ಈ ಕುರಿತು ಮಾತನಾಡಿರುವ ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್​ ಇದು ವಿನೇಶ್​ರ ತಪ್ಪು ಎಂದು ದೂಷಿಸಿದ್ದಾರೆ. ವಿನೇಶ್​ರಿಗೆ ಈ ರೀತಿಯಾಗಿದ್ದನ್ನು ನೋಡಿ ಇಡೀ ದೇಶಕ್ಕೆ ನಿರಾಸೆಯಾಗಿದೆ. ಏಕೆಂದರೆ ಒಲಿಂಪಿಕ್ಸ್​ನಲ್ಲಿ ಭಾಗಿಯಾಗುವ ಪ್ರತಿಯೊಬ್ಬ ಕ್ರೀಡಾಪಟು ಯಾವ ರೀತಿ ಕಠಿಣ ಪರಿಶ್ರಮ ಹಾಗೂ ತರಬೇತಿ ಪಡೆದಿರುತ್ತಾರೆ ಎಂಬುದು ನನಗೆ ಚೆನ್ನಾಗಿ ತಿಳಿದಿದೆ.

ಈ ರೀತಿಯಾದಾಗ ಒಬ್ಬ ಕ್ರೀಡಾಪಟುವಿನ ಭಾವನೆಯನ್ನು ವಿವರಿಸಲು ಯಾರಿಂದಲೂ ಸಾಧ್ಯವಿಲ್ಲ. ಆಕೆ ಅನುಭವಿ ಅಥ್ಲೀಟ್​ ಆಗಿದ್ದು, ನನ್ನ ಪ್ರಕಾರ ವಿನೇಶ್​ ಕಡೆಯಿಂದಲೇ ತಪ್ಪಾಗಿದೆ ಎಂದು ಭಾವಿಸುತ್ತೇನೆ. ಆಕೆ ಈ ತಪ್ಪನ್ನು ಒಪ್ಪಿಕೊಳ್ಳಬೇಕು. ಏಕೆಂದರೆ ಇಂತಹ ದೊಡ್ಡ ಕ್ರೀಡಾಕೂಟಗಳಲ್ಲಿ ಭಾಗಿಯಾಗುವ ಆಟಗಾರರಿಗೆ ಯಾವುದು ತಪ್ಪು, ಸರಿ ಎಂಬುದು ಚೆನ್ನಾಗಿ ತಿಳಿದಿರುತ್ತದೆ.

ನನಗೆ ಕುಸ್ತಿಯ ವಿವರಗಳು ತಿಳಿದಿಲ್ಲ. ಒಲಿಂಪಿಕ್ಸ್‌ನಲ್ಲಿ ಏನಾದರೂ ಗಮನಾರ್ಹವಾದ ಫಲಿತಾಂಶವನ್ನು ತಂದಿದೆಯೇ ಎಂದು ನನಗೆ ತಿಳಿದಿಲ್ಲ. ಆಕೆಗೆ ನಿಯಮ ತಿಳಿದಿದೆ. ನಾನು ಅವಳು ಯಾವ ತಪ್ಪನ್ನು ಮಾಡಿದಳು ಎಂದು ತಿಳಿದಿಲ್ಲ, ಅವಳು ಯಾವಾಗಲೂ 100% ಕಷ್ಟಪಟ್ಟು ಕೆಲಸ ಮಾಡುವುದನ್ನು ನಾನು ನೋಡಿದ್ಧೇನೆ. ಆಕೆಗೆ ಇದು ಮೊಲದ ಒಲಿಂಪಿಕ್ಸ್​ ಅಲ್ಲಾ. ಆಕೆ ಮೂರನೇ ಬಾರಿಗೆ ಭಾಗಿಯಾಗುತ್ತಿದ್ದು, ನಿಯಮಗಳನ್ನು ಚೆನ್ನಾಗಿಯೇ ತಿಳಿದಿದ್ದಾಳೆ. ಆದರೆ, ತೂಕ ಹೇಗೆ ಹೆಚ್ಚಳವಾಯಿತು ಎಂಬುದು ನನಗೆ ಅರ್ಥವಾಗುತ್ತಿಲ್ಲ. ತೂಕದ ವಿಚಾರವಾಗಿ ಕುಸ್ತಿಪಟುಗಳು ಅನರ್ಹಗೊಂಡಿರುವ ವಿಚಾರವನ್ನು ನಾನು ಇದೇ ಮೊದಲ ಬಾರಿಗೆ ಕೇಳುತ್ತಿದ್ದೇನೆ ಎಂದು ಸೈನಾ ನೆಹ್ವಾಲ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net