ಭೋಪಾಲ್: ಮಾಜಿ ಸೈನಿಕರ ಕುಟುಂಬಸ್ಥರಿಗೆ ಉದ್ಯೋಗದಲ್ಲಿ ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಾದ್ಯಂತ ನಡೆದ ಹಿಂಸಾಚಾರದಲ್ಲಿ 300ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ದಿನ ಕಳೆದಂತೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಬಾಂಗ್ಲಾದೇಶದಲ್ಲಿನ ಸದ್ಯದ ಪರಿಸ್ಥಿತಿ ಮುಂದೊಂದು ದಿನ ಭಾರತದಲ್ಲಿ ಉದ್ಭವಿಸಬಹುದು, ಜನರು ಪ್ರಧಾನಿ ಮೋದಿ ನಿವಾಸಕ್ಕೆ ಇದೇ ರೀತಿ ನುಗ್ಗಲಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ನೀಡಿರುವ ಹೇಳಿಕೆ ವಿವಾದದ ಕಿಡಿ ಹೊತ್ತಿಸಿದೆ.
ಮಧ್ಯಪ್ರದೇಶ ಕಾಂಗ್ರೆಸ್ನ ಹಿರಿಯ ನಾಯಕ ಸಜ್ಜನ್ ಸಿಂಗ್ ವರ್ಮಾ ಈ ಹೇಳಿಕೆ ನೀಡಿದ್ದು, ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ನಡೆದಿದೆ ಎನ್ನಲಾದ ಹಗರಣಗಳ ವಿರುದ್ಧ ಪ್ರತಿಭಟನೆಯ ವೇಳೆ ಅವರು ಈ ರೀತಿ ಹೇಳಿದ್ದಾರೆ.
ಪ್ರಧಾನಿ ಮೋದ ಅವರೇ ದಯವಿಟ್ಟು ನೆನಪಿಟ್ಟುಕೊಳ್ಳಿ ನಿಮ್ಮ ಸರ್ಕಾರ ತರುತ್ತಿರುವ ತಪ್ಪು ನೀತಿಗಳಿಂದ ಮುಂದೊಂದು ದಿನ ಜನರು ದಂಗೆ ಎದ್ದು ನಿಮ್ಮ ನಿವಾಸಕ್ಕೆ ಮುತ್ತಿಗೆ ಹಾಕುತ್ತಾರೆ. ಮೊದಲು ಶ್ರೀಲಂಕಾದಲ್ಲಿ ನಡೆಯಿತು, ಈಗ ಬಾಂಗ್ಲಾದೇಶ ಮುಂದಿನ ಸರದಿ ಭಾರತದ್ದು. ಈಗಲೇ ನಿಮ್ಮ ತಪ್ಪುಗಳನ್ನು ತಿದ್ದುಕೊಳ್ಳಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಟಾಕ್ಸಿಕ್’ ಪಯಣ ಶುರು; ಬೆಳ್ಳಂಬೆಳಿಗ್ಗೆಯೇ ಬಿಗ್ ಅಪ್ಡೇಟ್ ನೀಡಿದ ಯಶ್
ಮೇಲ್ನೋಟಕ್ಕೆ ಕಾಶ್ಮೀರದಲ್ಲಿ ಎಲ್ಲವೂ ಸಹಜವಾಗಿದೆ ಎಂದು ಕಾಣಿಸಬಹುದು. ಇಲ್ಲಿ ಎಲ್ಲವೂ ಸರಿಯಿದೆ ಎಂದು ಎಲ್ಲರೂ ಭಾವಿಸಬಹುದು. ಆದರೆ ವಾಸ್ತವ ಬೇರೆಯದ್ದೇ ಇದೆ.. ಬಾಂಗ್ಲಾದೇಶದಲ್ಲಿ ಸಂಭವಿಸಿದ್ದು, ನಮ್ಮ ದೇಶದಲ್ಲಿಯೂ ನಡೆಯಬಹುದು ಎಂದು ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದರು. ಅವರ ನಂತರ ಸಜ್ಜನ್ ಸಿಂಗ್ ಹೇಳಿಕೆ ಬಂದಿದ್ದು, ವಿವಾದದ ಕಿಡಿ ಹೊತ್ತಿಸಿದೆ.
ಕಾಂಗ್ರೆಸ್ ನಾಯಕ ಸಜ್ಜನ್ ಸಿಂಗ್ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ಯುವ ಮೋರ್ಚಾ 140 ಕೋಟಿ ಭಾರತೀಯರ ಭಾವನೆಗೆ ದಕ್ಕೆ ಉಂಟು ಮಾಡಿದ್ದು, ಹೇಳಿಕೆ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.