ಈ ವೇಳೆ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಭಾವಚಿತ್ರಕ್ಕೆ ಹಾಸ್ಯ ನಟರು ನಮನ ಸಲ್ಲಿಸಿ, ಅವರನ್ನು ಸ್ಮರಿಸಿಕೊಂಡರು. ನಟ ಪುನೀತ್ ರಾಜ್ಕುಮಾರ್ ಅವರ ನಿಧನದ ಹಿನ್ನೆಲೆ ಅಪ್ಪು ಮನೆಗೆ ಭೇಟಿ ನೀಡಿದ ನಟರು, ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ನಟ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಧೈರ್ಯದ ಮಾತುಗಳನ್ನು ಹೇಳಿದ್ದಾರೆ. ಬಳಿಕ, ಅಪ್ಪು ಅವರ ಕುಟುಂಬದ ಜತೆಗೆ ಟಾಲಿವುಡ್ನ ಹಾಸ್ಯ ನಟರು ಕ್ಲಿಕಿಸಿಕೊಂಡ ಫೋಟೋಗಳು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ನಟ ಯುವ ರಾಜ್ಕುಮಾರ್ ಅವರ ಸಿನಿಮಾದ ತಯಾರಿಯನ್ನು ಕುರಿತು ಕಾಳಜಿಯಿಂದ ಈ ನಟರು ಚರ್ಚೆ ಮಾಡಿರುವುದು ವಿಶೇಷವಾಗಿತ್ತು.