ಅಂದಹಾಗೆ, ಸಿನಿಮಾ ರಿಲೀಸ್ಗೂ ಮುಂಗಡವಾಗಿ UK ನಲ್ಲಿ ಇಷ್ಟು ಟಿಕೆಟ್‌ಗಳನ್ನು ಬಿಕ್ಕಿಂಗ್ ಪಡೆದಿರುವ ಮೊದಲ ಭಾರತದ ಸಿನಿಮಾ ‘ಕೆಜಿಎಫ್: ಚಾಪ್ಟರ್ 2′ ಎನ್ನಲಾಗಿದೆ. ಬಳಿಕ ಚಿತ್ರ ನೋಡಲು ಆನ್ಲೈನ್ನಲ್ಲಿ ಟಿಕೆಟ್ ಬುಕ್ಕಿಂಗ್ ಅನ್ನು ಏಪ್ರಿಲ್ 7 ರಂದು BookMyShow ನಲ್ಲಿ ಉತ್ತರ ಭಾರತದ, ತಮಿಳುನಾಡಿನ, ಕೇರಳದ ಅಭಿಮಾನಿಗಳಿಗೆ ತೆರೆಯಲಾಗಿತ್ತು. ಉತ್ತರ ಭಾರತ, ತಮಿಳುನಾಡು, ಕೇರಳದಲ್ಲು ಈ ಸಿನಿಮಾದ ಟಿಕೆಟ್ ಸೇಲ್ ಭರ್ಜರಿಯಾಗಿಯೇ ನಡೆಯುತ್ತಿದೆ. ಸಿನಿಮಾ ಉತ್ತರ ಭಾರತದಲ್ಲಿಯೂ ದಾಖಲೆ ಬರೆದಿದೆ. ಹೌದು, ಟಿಕೆಟ್ ಬುಕ್ಕಿಂಗ್ ಆರಂಭವಾದ ಕೇವಲ 12 ಗಂಟೆಗಳಲ್ಲಿ 1 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಸೋಲ್ಡ್ಔಟ್ ಆಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಅಂದರೆ, ಕೇವಲ 12 ಗಂಟೆಗಳಲ್ಲಿ ಸಿನಿಮಾ ಬರೋಬ್ಬರಿ 3.35 ಕೋಟಿ ರೂಪಾಯಿ ಪ್ರೀ–ಬಿಸ್ನೆಸ್ ಮಾಡಿದೆಯಂತೆ.