ಕನ್ನಡದ 'ಜೊತೆ ಜೊತೆಯಲಿ' ಸೀರಿಯಲ್ ಸದಾ ಕನ್ನಡಿಗರ ನೆಚ್ಚಿನ ಸೀರಿಯಲ್ ಆಗಿದೆ. ಈ ಸೀರಿಯಲ್ನಲ್ಲಿ ನಟ ಅನಿರುದ್ಧ, ನಟಿ ಮೇಘಾ ಶೆಟ್ಟಿ ಅವರ ನಟನೆ ಕಂಡ ಇಡೀ ಕರುನಾಡೇ ಅವರನ್ನು ಮೆಚ್ಚಿಕೊಂಡಿದೆ. ಹಾಗಾಗಿ, ಈ ಸೀರಿಯಲ್ ಬಳಿಕ ಮೇಘಾ ಶೆಟ್ಟಿ ಅವರಿಗೆ ಬೇಡಿಕೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಇನ್ನು, ಮೇಘಾ ಅವರಿಗೆ ಬೆಳ್ಳೆ ತೆರೆಯಲ್ಲಿ ಮಿಂಚಲು ಸಹ ಅವಕಾಶಗಳು ದಿನದಿಂದ ದಿನಕ್ಕೆ ದುಪ್ಪಟ್ಟು ಆಗುತ್ತಿವೆ. ಈಗಾಗಲೇ, ಮೇಘಾ 'ಟ್ರಿಪಲ್ ರೈಡಿಂಗ್' ಎಂಬ ಕನ್ನಡದ ಚಿತ್ರದಲ್ಲಿ ನಟ ಗಣೇಶ್ ಅವರ ಜತೆಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.