More

    ಕೈ ಜಾರಿದ ವಿಲ್ ಸ್ಮಿತ್​ಗೆ 10 ವರ್ಷ ಬ್ಯಾನ್! ಬಾಯಿ ಜಾರಿದ ಕ್ರಿಸ್ ರಾಕ್​ಗೆ ಶಿಕ್ಷೆ ಯಾಕಿಲ್ಲ?

    ಅಮೆರಿಕ: ಇತ್ತೀಚೆಗೆ, ಹಾಲಿವುಡ್ ನಟ ವಿಲ್ ಸ್ಮಿತ್ ಅವರು ಹಾಸ್ಯನಟ ಕ್ರಿಸ್ ರಾಕ್‌ಗೆ ಆಸ್ಕರ್‌ ವೇದಿಕೆಯ ಮೇಲೆ ಕಪಾಳ ಮೋಕ್ಷ ಮಾಡಿ ಇಡೀ ವಿಶ್ವದ ಗಮನ ಸೆಳೆದರು. ಹೌದು, ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಕಾಮಿಡಿಯನ್ ಕ್ರಿಸ್ ರಾಕ್ ಅವರು ನಟ ವಿಲ್ ಸ್ಮಿತ್ ಪತ್ನಿ ಜಡಾ ಪಿಂಕೆಟ್ ಸ್ಮಿತ್ ತಮ್ಮ ತಲೆ ಬೋಳಿಸಿಕೊಂಡಿರುವ ವಿಷಯದ ಬಗ್ಗೆ ಅಪಹಾಸ್ಯ ಮಾಡಿದರು. ಕೂಡಲೇ, ವೇದಿಕೆ ಏರಿದ ನಟ ವಿಲ್ ಸ್ಮಿತ್ ಅವರು ಕ್ರಿಸ್ ರಾಕ್ ಕಪಾಳಕ್ಕೆ ಬಾರಿಸಿದರು. ಈ ವಿಷಯ ವಿಶ್ವಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಇನ್ನು, ಈ ಘಟನೆಯಿಂದ ಸ್ಮಿತ್ ಅವರಿಗೆ ಶಿಕ್ಷೆಯಾಗಿ ಅವರ ಆಸ್ಕರ್ ಪ್ರಶಸ್ತಿ ಹಿಂಪಡೆಯಲಾಗುತ್ತದೆ ಎನ್ನುವ ಸುದ್ದಿಗಳ ಕೇಳಿಬಂದಿದ್ದವು
    ಆದರೆ, ಆಸ್ಕರ್ ಮಂಡಳಿ ಈಗ ಯಾರೂ ಊಹಿಸದ ನಿರ್ಧಾರ ತೆಗೆದುಕೊಂಡಿದೆ. ಹೌದು, ಘಟನೆ ನಡೆದ ಎರಡು ವಾರಗಳ ಬಳಿಕ ಆಸ್ಕರ್ ಮಂಡಳಿ ನಟ ವಿಲ್ ಸ್ಮಿತ್ ನಡೆಗೆ ಕ್ರಮ ಜರುಗಿಸಿದೆ. ವಿಲ್ ಸ್ಮಿತ್‌ರನ್ನು ಮುಂಬರುವ 10 ವರ್ಷಗಳಿಗೆ ಆಸ್ಕರ್‌ನಿಂದ ಬ್ಯಾನ್ ಮಾಡಿದೆ. ಹೌದು, ಮುಂದಿನ 10 ವರ್ಷಗಳ ಕಾಲ ಆಸ್ಕರ್‌ಗೆ ಹಾಜರಾಗದಂತೆ ನಿಷೇಧಿಸಿ ವಿಲ್ ಸ್ಮಿತ್‌ ವಿರುದ್ಧ ತೀರ್ಮಾನ ಹೊರಡಿಸಲಾಗಿದೆ. ಇದರ ಜತೆಗೆ, ಮುಂದಿನ ಒಂದು ದಶಕದಲ್ಲಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ನಡೆಸುವ ಯಾವುದೇ ಇತರ ಕಾರ್ಯಕ್ರಮಗಳಿಗೆ ಹಾಜರಾಗಲು ಸಹ ಸ್ಮಿತ್‌ಗೆ ಅನುಮತಿ ಇಲ್ಲ ಎಂದು ತಿಳಿದುಬಂದಿದೆ.
    ಆಸ್ಕರ್ ಅಕಾಡೆಮಿಯ ಮುಖ್ಯಸ್ಥರು ಬರೆದ ಒಂದು ಪತ್ರದಲ್ಲಿ ಮಂಡಳಿಯ ಈ ನಿರ್ಧಾರ ಪ್ರಕಟವಾಗಿದೆ. ಅಂದಹಾಗೆ, ‘ಕಿಂಗ್ ರಿಚರ್ಡ್ಸಿನಿಮಾಗಾಗಿ ಸ್ಮಿತ್ ಗೆದ್ದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಿಂತೆಗೆದುಕೊಂಡಿಲ್ಲ ಅಥವಾ ಮುಂದೆ ಭವಿಷ್ಯದಲ್ಲಿ ಆಸ್ಕರ್ ನಾಮನಿರ್ದೇಶನಗಳ ಮೇಲೆಯೂ ಯಾವುದೇ ನಿಷೇಧವನ್ನು ಆಸ್ಕರ್ ಅಕಾಡೆಮಿ ಈ ಪತ್ರದಲ್ಲಿ ಉಲ್ಲೇಖಿಸಲಿಲ್ಲ. ಸ್ಮಿತ್ ವಿರುದ್ಧದ ಕ್ರಮಗಳನ್ನು ಕೈಗೊಳ್ಳಲು ಅಕಾಡೆಮಿ ಗೌರ್ನರ್‌ಗಳು ಶುಕ್ರವಾರ ಅಂದರೆ ಏಪ್ರಿಲ್ 8 ರಂದು ಬೆಳಿಗ್ಗೆ ಒಂದು ಸಭೆ ನಡೆಸಿದ್ದು, ನಟನ ಮೇಲೆ ಹತ್ತು ವರ್ಷಗಳ ಕಾಲ ನಿಷೇಧ ಹೇರುವುದಾಗಿ ತಿಳಿಸಿದ್ದಾರೆ.
    ಹೀಗಿದ್ದರೂ, ನಟ ವಿಲ್ ಸ್ಮಿತ್ ಅವರನ್ನು ಬೆಂಬಲಿಸುವವರು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಕೆನ್ನೆಗೆ ಬಾರಿಸದ ವಿಲ್ ಸ್ಮಿತ್​ಗೆ ಶಿಕ್ಷೆ ಕೊಟ್ಟರೆ, ಅದಕ್ಕೆ ಕಾರಣವಾದ ಕಾಮಿಡಿಯನ್ ಕ್ರಿಸ್ ರಾಕ್​ಗೆ ಯಾವುದೇ ಶಿಕ್ಷೆ ಇಲ್ಲವೇ ಎಂದು ಪ್ರಶ್ನಿಸಲು ಆರಂಭಿಸಿದ್ದಾರೆ. ಅದರಲ್ಲಿಯೂ, ತಾನು ಮಾಡಿದ ತಪ್ಪಿಗೆ ನಟ ವಿಲ್ ಸ್ಮಿತ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಹಾಗಾಗಿ, ಹಲವು ನೆಟ್ಟಿಗರು ವಿಲ್ ಸ್ಮಿತ್ ಬ್ಯಾನ್ ವಿಚಿರದ ಕುರಿತು ಅಸಮಾಧಾನ ಹೊರಹಾಕಿದ್ದಾರೆ. ಒಂದು ವಿಶ್ವ ಮಟ್ಟದ ವೇದಿಕಯಲ್ಲಿ ಒಂದು ಮಹಿಳೆಯನ್ನು ಅಗೌರವಿಸಿದ ಕಾಮಿಡಿಯನ್ ಕ್ರಿಸ್ ರಾಕ್​ಗೂ ಶಿಕ್ಷೆ ನೀಡಬೇಕು ಎಂದು ಕೇಳುತ್ತಿದ್ದಾರೆ

    50 ಸ್ನೇಹಿತರ ಜತೆ ಯುರೋಪ್​ನಲ್ಲಿ 40ನೇ ಬರ್ತಡೇ ಆಚರಣೆ ಮಾಡಿಕೊಂಡ ನಟ ಅಲ್ಲು ಅರ್ಜುನ್!

    ಚಿತ್ರಮಂದಿರಗಳ ಮಾಲೀಕರಿಂದಲೂ ತಿರಸ್ಕರಿಸಲ್ಪಟ್ಟ RGV ಸಿನಿಮಾ! ‘ಡೇಂಜರಸ್’ಗೆ ನೋ ರಿಲೀಸ್; ಕಾರಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts