More

    51ನೇ ವಯಸ್ಸಿಗೆ ಎರಡನೇ ಮಗುವಿಗೆ ಜನ್ಮ ನೀಡಿದ ನಟಿ

    ಅಮೆರಿಕಾ: ಹಾಲಿವುಡ್‌ನ  ನಟಿ ಕ್ಯಾಮೆರಾನ್ ಡಿಯಾಜ್ 51ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿರುವ ಕುರಿತು ನಟಿಯ ಪತಿ ಬೆಂಜಿ ಮ್ಯಾಡೆನ್  ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

    ಕ್ಯಾಮೆರಾನ್ ಡಿಯಾಜ್, ಬೆಂಜಿ ಮ್ಯಾಡೆನ್ ಅವರು 2015ರಲ್ಲಿ ಮದುವೆಯಾಗಿದ್ದರು. 2019ರಲ್ಲಿ ನಟಿ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಎರಡನೇ ಮಗುವಿಗೆ ಕ್ಯಾಮೆರಾನ್ ಡಿಯಾಜ್ ಅವರು ತಾಯಿಯಾಗಿದ್ದಾರೆ.

    ದಂಪತಿಗಳು ಶುಕ್ರವಾರ ಹಂಚಿಕೊಂಡ ಇನ್​ಸ್ಟಾಗ್ರಾಮ್​ ಪೋಸ್ಟ್​ ಮೂಲಕವಾಗಿ  ತಮ್ಮ ಮಗನ ಆಗಮನವನ್ನು ಘೋಷಿಸಿದ್ದಾರೆ. ಅಭಿಮಾನಿಗಳು ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಟಾರ್​ ಜೋಡಿಗೆ ಶುಭಕೋರಿದ್ದಾರೆ.  

    ಕ್ಯಾಮೆರಾನ್ ಡಿಯಾಜ್  ಪತಿ ಬೆಂಜಿ ಮ್ಯಾಡೆನ್ ಇನ್‌ಸ್ಟಾಗ್ರಾಂ ಪೋಸ್ಟ್ ಮಾಡಿದ್ದು, ನಮ್ಮ ಕುಟುಂಬಕ್ಕೆ ಮಗನ ಆಗಮನವಾಗಿದೆ. ನೋಡಲು ತುಂಬ ಮುದ್ದಾಗಿದ್ದಾನೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ನಾವು ಆತನ ಫೋಟೋ ಪೋಸ್ಟ್ ಮಾಡಿಲ್ಲ. ಅವನಿಗೆ ಕಾರ್ಡಿನಲ್ ಮ್ಯಾಡೆನ್ ಎಂಬುದಾಗಿ ಹೆಸರಿಡಲು ತೀರ್ಮಾನಿಸಿದ್ದೇವೆ. ನಿಮ್ಮ ಆಶೀರ್ವಾದ, ಹಾರೈಕೆ ಇರಲಿ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಸ್ನೇಹಿತರ ಜತೆ ಮಲಗು ಅಂತಿದ್ದ ಅದಕ್ಕೆ ಡಿವೋರ್ಸ್ ನೀಡಿದೆ ಎಂದು ಕಣ್ಣೀರಿಟ್ಟ ನಟಿ

    ಶರತ್ ಬಾಬು ಜತೆ ಮಗು ಆಗಬೇಕು ಅಂತ ಆಸೆ ಇತ್ತು..ಆದ್ರೆ ಅದು ಆಗಲಿಲ್ಲ ಎಂದ್ರು ಖ್ಯಾತ ನಟಿ

    ಗರ್ಭಿಣಿ ದೀಪಿಕಾಳ ಆರೈಕೆಗಾಗಿ ಇಂಥಾ ತ್ಯಾಗಕ್ಕೆ ಸಿದ್ಧರಾದ್ರಾ ರಣವೀರ್ ಸಿಂಗ್?

    ಮದುವೆ ಆಮಂತ್ರಣ ಪತ್ರದಲ್ಲಿ ಪ್ರಧಾನಿ ಮೋದಿ ಫೋಟೋ; ಕಾರಣವೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts