More

    ಖರ್ಚು ಮಾಡಿದ್ದು 6 ಲಕ್ಷ ಗಳಿಸಿದ್ದು 800 ಕೋಟಿ ರೂ.! ವಿಶ್ವದ ಅತ್ಯಂತ ಲಾಭದಾಯಕ ಚಿತ್ರವಿದು…

    ಮುಂಬೈ: ಪ್ರಸ್ತುತ ಕಾಲಘಟ್ಟದಲ್ಲಿ ಸಿನಿಮಾಗಳ ಬಜೆಟ್ ಎಷ್ಟರಮಟ್ಟಿಗೆ ಹೆಚ್ಚಾಗುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಒಂದು ಚಿತ್ರ ಬಿಡುಗಡೆ ಮಾಡಬೇಕೆಂದರೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಬೇಕು. ಆರ್​ಆರ್​ಆರ್​, ಜವಾನ್, ಪಠಾಣ್ ಹಾಗೂ ಕೆಜಿಎಫ್​ ಸಿನಿಮಾಗಳನ್ನು ನೋಡಿದರೆ ಇದು ಅರ್ಥವಾಗುತ್ತದೆ. ಆದರೆ, ಎಲ್ಲ ಬಿಗ್ ಬಜೆಟ್ ಚಿತ್ರಗಳು ಸಹ ಯಶಸ್ಸು ಕಾಣುತ್ತಿವೆಯೇ? ಇಲ್ಲ. ಕೆಲವೊಂದು ಸಿನಿಮಾಗಳು ಸೋತಿವೆ. ಉದಾಹರಣೆಗೆ ಪ್ರಭಾಸ್​ ನಟನೆಯ ಆದಿಪುರುಷ ಸಿನಿಮಾ ಇದಕ್ಕೆ ಉದಾಹರಣೆ, ಇದೇ ಸಮಯದಲ್ಲಿ, ಕಡಿಮೆ ಬಜೆಟ್‌ನಲ್ಲಿ ಮಾಡಿದ ಚಿತ್ರಗಳು ಅಸಾಧಾರಣವಾಗಿ ಯಶಸ್ವಿಯಾಗುತ್ತಿವೆ. ಕಾಂತಾರ, ಹನುಮಾನ್ ಚಿತ್ರಗಳು ಈ ವರ್ಗಕ್ಕೆ ಸೇರಿವೆ. ಅತ್ಯಂತ ಕಡಿಮೆ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾಗಳು ವಿಶ್ವದಾದ್ಯಂತ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆದರೆ, ವಿಶ್ವದಲ್ಲೇ ಅತ್ಯಂತ ಲಾಭದಾಯಕ ಸಿನಿಮಾ ಯಾವುದು ಗೊತ್ತಾ? ಈ ಸಿನಿಮಾಗೆ ಖರ್ಚು ಮಾಡಿದ್ದು ಕೇವಲ 6 ಲಕ್ಷ ರೂ. ಆದರೆ, ಗಳಿಸಿದ್ದು ಮಾತ್ರ 800 ಕೋಟಿ ರೂಪಾಯಿ. ಯಾವುದು ಆ ಸಿನಿಮಾ ಅಂತೀರಾ? ಮುಂದೆ ಓದಿ.

    ಶೂನ್ಯ ನಿರೀಕ್ಷೆಯೊಂದಿಗೆ ಬಂದ ಈ ಸಿನಿಮಾ ಶೇ.133,000 ರಷ್ಟು ಲಾಭ ಗಳಿಸಿದೆ. ಆ ಸಿನಿಮಾ ಯಾವುದೆಂದರೆ, “ಪ್ಯಾರನಾರ್ಮಲ್ ಆಕ್ಟಿವಿಟಿ” ಸಿನಿಮಾ. ಇದು ಒಂದು ಹಾಲಿವುಡ್​ನ ಹಾರರ್ ಸಿನಿಮಾ ಆಗಿದೆ. 2007ರಲ್ಲಿ ನಿರ್ದೇಶಕ ಓರೆನ್ ಪೆಲಿ ಈ ಭಯಾನಕ ಚಲನಚಿತ್ರವನ್ನು ನಿರ್ದೇಶಿಸಿದರು. 1999ರ ಹಿಟ್ ಸಿನಿಮಾ ದಿ ಬ್ಲೇರ್ ವಿಚ್ ಪ್ರಾಜೆಕ್ಟ್‌ನಲ್ಲಿ ಬಳಸಲಾದ ಫೌಂಡ್​ ಫುಟೇಜ್​ ಮಾದರಿಯನ್ನು ಬಳಸಿತು. ಅಂದರೆ, ಈ ಸಿನಿಮಾವನ್ನು ಕೇವಲ ಸಿಸಿಟಿವಿ ಕ್ಯಾಮೆರಾಗಳು ಮತ್ತು ಹ್ಯಾಂಡ್‌ಹೆಲ್ಡ್ ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಿಸಲಾಗಿದೆ. ಎರೆನ್ ಪೆಲಿ ಸ್ವತಃ ಚಿತ್ರಕಥೆ, ನಿರ್ದೇಶನ, ಚಿತ್ರೀಕರಣ, ನಿರ್ಮಾಣ ಮತ್ತು ಸಂಕಲನವನ್ನು ಮಾಡಿದ್ದಾರೆ. ಈ ಚಿತ್ರದಲ್ಲಿ ಕೇವಲ ನಾಲ್ಕೇ ಮಂದಿ ನಟಿಸಿದ್ದರಿಂದ ಬಜೆಟ್ ಸಹ ಕೇವಲ 15,000 ಡಾಲರ್​ಗೆ ಸೀಮಿತಗೊಂಡಿತು.

    ಗಳಿಸಿದ್ದ 800 ಕೋಟಿ ರೂಪಾಯಿ
    ವರದಿಗಳ ಪ್ರಕಾರ, ಪ್ಯಾರನಾರ್ಮಲ್ ಆ್ಯಕ್ಟಿವಿಟಿ ಸಿನಿಮಾವನ್ನು 15 ಸಾವಿರ ಡಾಲರ್ (ಆಗಿನ ಭಾರತೀಯ ಕರೆನ್ಸಿಯಲ್ಲಿ 6 ಲಕ್ಷ ರೂಪಾಯಿ) ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಈ ಸಿನಿಮಾವನ್ನು ಸ್ಟುಡಿಯೋಗಳಿಗೆ ಮಾರಾಟ ಮಾಡಿದ ನಂತರ, ಪೋಸ್ಟ್-ಪ್ರೊಡಕ್ಷನ್ ಮತ್ತು ಮಾರ್ಕೆಟಿಂಗ್​ಗೆ 2 ಲಕ್ಷ ಡಾಲರ್ (ರೂ. 85 ಲಕ್ಷ) ಖರ್ಚಾಯಿತು. ಆದರೆ ಈ ಸಿನಿಮಾ ಬಿಡುಗಡೆಯಾದ ಬಳಿಕ ಬಾಕ್ಸ್​ಆಫೀಸ್​ನಲ್ಲಿ ಸುನಾಮಿಯನ್ನೇ ಸೃಷ್ಟಿಸಿತ್ತು. ಪ್ಯಾರಾನಾರ್ಮಲ್ ಆಕ್ಟಿವಿಟಿ ಚಿತ್ರವು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 194 ಮಿಲಿಯನ್ ಡಾಲರ್ ಗಳಿಸಿತು, ಅಂದರೆ 800 ಕೋಟಿ ರೂ. ಸಂಗ್ರಹಿಸಿತು.

    ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ
    ಸಿನಿಮಾ ಇತಿಹಾಸದಲ್ಲೇ ಪ್ಯಾರನಾರ್ಮಲ್​ ಆ್ಯಕ್ಟಿವಿಟಿ ಸಿನಿಮಾ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಹೆಗ್ಗಳಿಕೆಯನ್ನು ಹೊಂದಿದೆ. ಈ ಸಿನಿಮಾ ಬರೋಬ್ಬರಿ 133,000 ರಷ್ಟು ಲಾಭ ಗಳಿಸಿತು. ಇದಾದ ನಂತರ ಈ ಚಿತ್ರದ ಹಲವು ಸೀಕ್ವೆಲ್‌ಗಳು ಬಂದವು. ಈ ಪ್ಯಾರಾನಾರ್ಮಲ್ ಆಕ್ಟಿವಿಟಿ ಫ್ರಾಂಚೈಸಿಯಲ್ಲಿ ಇದುವರೆಗೆ ಒಟ್ಟು 7 ಚಿತ್ರಗಳು ಬಂದಿವೆ. ಒಟ್ಟಾರೆಯಾಗಿ ಈ ಪ್ಯಾರಾನಾರ್ಮಲ್ ಆಕ್ಟಿವಿಟಿ ಚಲನಚಿತ್ರಗಳು ಪ್ರಪಂಚದಾದ್ಯಂತ 890 ಮಿಲಿಯನ್ ಡಾಲರ್​ ಗಳಿಸಿವೆ. ಅಂದರೆ, 4600 ಕೋಟಿ ರೂ. ಸಂಗ್ರಹವಾಗಿದೆ ಎನ್ನಲಾಗಿದೆ.

    ಚಿತ್ರಮಂದಿರದ ಜೊತೆಗೆ ಡಿಜಿಟಲ್ ರೈಟ್ಸ್, ಟೆಲಿವಿಷನ್ ರೈಟ್ಸ್ ಸೇರಿದಂತೆ ಫ್ರಾಂಚೈಸಿಯು ಸುಮಾರು 5000 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಆಗಿದೆ ಎಂದು ಡಿಎನ್‌ಎ ಇಂಡಿಯಾ ಮೀಡಿಯಾ ತಿಳಿಸಿದೆ. ಕೇವಲ 6 ಲಕ್ಷದ ಬಜೆಟ್‌ನಲ್ಲಿ ತಯಾರಿಸಲಾಗಿದ್ದರೂ (ಪೋಸ್ಟ್ ಪ್ರೊಡಕ್ಷನ್ ನಂತರ 1 ಕೋಟಿ ರೂ.ಗಿಂತ ಕಡಿಮೆ) ಪ್ಯಾರನಾರ್ಮಲ್ ಆಕ್ಟಿವಿಟಿ ಭಾರಿ ಯಶಸ್ಸನ್ನು ಕಂಡಿತು. (ಏಜೆನ್ಸೀಸ್​)

    ಎಂದಿಗೂ ಮದ್ವೆಯಾಗುವುದಿಲ್ಲ ಎಂದು ಯೋಚಿಸಿದ್ದ ಅನಂತ್​ ಅಂಬಾನಿ ಮನಸ್ಸು ಬದಲಿಸಿದ್ದೇಕೆ?

    ನಿಮ್ಮ ದೇಹದೊಳಗಿನ ತ್ಯಾಜ್ಯ, ವಿಷವನ್ನು ಕಂಪ್ಲೀಟ್​ ಹೊರಗಾಕಲು ಈ ಪಾನೀಯಗಳು ಸಹಕಾರಿ!

    ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಮತ್ತೆ ಏರಿಕೆ; ಯಾವ ನಗರದಲ್ಲಿ ಎಷ್ಟಿದೆ? ಮಾಹಿತಿ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts