More

    ‘ಈವರೆಗಿನ ಬೆಳವಣಿಗೆ ಏನೇ ಆಗಿರಲಿ, ಎಲ್ಲವೂ ಸುಖಾಂತ್ಯ ಕಾಣಲಿದೆ’: ವಿಜಯೇಂದ್ರ ವಿಶ್ವಾಸ

    ಬೆಂಗಳೂರು: ಸಣ್ಣಪುಟ್ಟ ವ್ಯತ್ಯಾಸಗಳು ಶೀಘ್ರವೇ ಬಗೆಹರಿದು ಬಿಜೆಪಿ-ಜೆಡಿಎಸ್ ಮೈತ್ರಿ ಅಬಾಧಿತವಾಗಿ ಮುಂದುವರಿಯಲಿದೆ. ಈವರೆಗಿನ ಬೆಳವಣಿಗೆ ಏನೇ ಆಗಿರಲಿ, ಎಲ್ಲವೂ ಸುಖಾಂತ್ಯ ಕಾಣಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು‌.

    ಡಾಲರ್ಸ್ ಕಾಲೊನಿಯ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ನಾಯಕರ ಜತೆಗೆ ನಿನ್ನೆ ರಾತ್ರಿಯೇ ಮೊಬೈಲ್ ನಲ್ಲಿ ಸಂಪರ್ಕಿಸಿರುವೆ. ನಂತರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಇಂದು ಬೆಳಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜತೆಗೂ ಚರ್ಚಿಸಿರುವೆ. ಜೆಡಿಎಸ್ ನ ಭಾವನೆಗಳಿಗೆ ಪಕ್ಷದ ರಾಷ್ಟ್ರೀಯ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ ಎಂದರು.

    ಜೆಡಿಎಸ್ ಜತೆಗೆ ಮೈತ್ರಿ ನಾಯಕರೊಂದಿಗೆ ಬಿಜೆಪಿ ರಾಷ್ಟ್ರೀಯ ನಾಯಕರು ಮಾತ್ರ ಚರ್ಚಿಸಿ, ಪಕ್ಷದ ರಾಜ್ಯ ನಾಯಕರನ್ನು ದೂರವಿಟ್ಟಿರುವುದು ಈಗಿನ ಸಮಸ್ಯೆಗೆ ಕಾರಣವೆ ? ಎಂಬ ಪ್ರಶ್ನೆಗೆ ವಿಜಯೇಂದ್ರ ಉತ್ತರಿಸಿ, ಅಷ್ಟು ದೂರ ಹೋಗಬೇಕಾದ ಅಗತ್ಯವಿಲ್ಲ. ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ. ಎಷ್ಟು ಸೀಟು, ಯಾವ ಕ್ಷೇತ್ರಗಳು ಎನ್ನುವುದು ವರಿಷ್ಠರ ಹಂತದಲ್ಲಿ ನಿರ್ಧಾರವಾಗಲಿದೆ. ಎನ್ ಡಿಎ ಒಕ್ಕೂಟ ಸುಸೂತ್ರವಾಗಿ ಮುಂದುವರಿಯಲಿದೆ ಎಂದು ವಿಜಯೇಂದ್ರ ಹೇಳಿದರು.

    ಡಿವಿಎಸ್ ಪಕ್ಷ ಬಿಡಲ್ಲ
    ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗುವುದಿಲ್ಲ. ನಮ್ಮ ಪಕ್ಷದ ಹಲವು ಮುಖಂಡರ ಬಗ್ಗೆ ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿದರೆ, ಅವರ ಪಕ್ಷದ ಮುಖಂಡರಿಗಿಂತ ನಮ್ಮ ಪಕ್ಷದ ಮುಖಂಡರ ಮೇಲೆ ಹೆಚ್ಚು ಪ್ರೀತಿ, ವಿಶ್ವಾಸವಿರುವುದು ಎದ್ದು ಕಾಣುತ್ತದೆ ಎಂದು ವ್ಯಂಗ್ಯವಾಡಿದರು.

    ಪಕ್ಷದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪನವರಿಗೆ ತಪ್ಪು ಮಾಹಿತಿ ರವಾನೆಯಾಗಲಿದೆ. ಸತ್ಯ ಗೊತ್ತಾದ ಮೇಲೆ ಪರಿಸ್ಥಿತಿ ತಿಳಿಯಲಾಗಿದೆ. ಪಕ್ಷದಿಂದ ಅವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಸಮಸ್ಯೆ ಶೀಘ್ರ ಬಗೆಹರಿಯಲಿದೆ ಎಂದ ವಿಜಯೇಂದ್ರ, ಈಶ್ವರಪ್ಪನವರಿಗೆ ರಾಜ್ಯಪಾಲರ ಹುದ್ದೆ ಆಫರ್ ನೀಡಲಾಗಿದೆಯೆ? ಎಂಬ ಪತ್ರಕರ್ತರ ಮತ್ತೊಂದು ಪ್ರಶ್ನೆಗೆ ಉತ್ತರಿಸಲಿಲ್ಲ.

    ಒಳ್ಳೆಯ ವಾತಾವರಣ
    ಪ್ರಧಾನಿ ನರೇಂದ್ರ ಮೋದಿಯವರ ಕಲಬುರಗಿ ಹಾಗೂ ಶಿವಮೊಗ್ಗ ಕಾರ್ಯಕ್ರಮಗಳು ಅಲ್ಪಾವಧಿಯಲ್ಲಿ ನಿಗದಿಯಾಗಿದ್ದರೂ ಯಶಸ್ವಿಯಾಗಿವೆ. ಸ್ವತಃ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದಿನೇ ದಿನೆ ಮೋದಿ ಪರ ಅಲೆ ಹೆಚ್ಚುತ್ತಿದೆ. ಪಕ್ಷದ ಪರ ಒಳ್ಳೆಯ ವಾತಾವರಣ ಸೃಷ್ಟಿಯಾಗಿದೆ ಎಂದು ರಣಕಣದಲ್ಲಿ ದುಡಿಯಲು ಸಜ್ಜಾಗಿರುವ ಕಾರ್ಯಕರ್ತರು ಉತ್ಸಾಹದಿಂದ ಹೇಳುತ್ತಿದ್ದಾರೆ ಎಂದರು.

    ಬೆಳಗಾವಿಗೆ ಜಗದೀಶ ಶೆಟ್ಟರ್ ಬೇಡವೆಂಬ ಕೂಗಿನ ಬಗ್ಗೆ ವಿಜಯೇಂದ್ರ ಉತ್ತರಿಸಲು ನಿರಾಕರಿಸಿ, ವರಿಷ್ಠರ ಹಂತದಲ್ಲಿ ಎಲ್ಲ ನಿರ್ಧಾರವಾಗಲಿದೆ‌. ಪಕ್ಷದ ಕೇಂದ್ರೀಯ ಚುನಾವಣೆ ಸಮಿತಿ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳುತ್ತಿರುವೆ. ಎರಡನೇ ಪಟ್ಟಿ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ಹೇಳಿದರು.

    ಸಿಎಎ ಕುರಿತು ಇಂದು ಮಹತ್ವದ ನಿರ್ಧಾರ; ಸುಪ್ರೀಂ ಕೋರ್ಟ್‌ನಲ್ಲಿ 230 ಅರ್ಜಿಗಳ ವಿಚಾರಣೆ, ಅರ್ಜಿದಾರರ ಬೇಡಿಕೆಯೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts