More

    ನಿಮ್ಮ ದೇಹದೊಳಗಿನ ತ್ಯಾಜ್ಯ, ವಿಷವನ್ನು ಕಂಪ್ಲೀಟ್​ ಹೊರಗಾಕಲು ಈ ಪಾನೀಯಗಳು ಸಹಕಾರಿ!

    ನಮ್ಮ ದೇಹವನ್ನು ಸ್ವಚ್ಛವಾಗಿ ಇಡುವುದು ತುಂಬಾ ಮುಖ್ಯ. ಹೀಗಾಗಿ ನಾವು ದೇಹದಲ್ಲಿರುವ ಕಲ್ಮಶಗಳನ್ನು ತೆಗೆದುಹಾಕುತ್ತೇವೆ. ಅಲ್ಲದೆ, ದೇಹದ ಆಂತರಿಕ ತ್ಯಾಜ್ಯವನ್ನು ತೆಗೆದುಹಾಕುವುದರಿಂದ ನಾವು ಆರೋಗ್ಯವಂತರಾಗುತ್ತೇವೆ. ತ್ಯಾಜ್ಯವನ್ನು ಹೊರಹಾಕದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಹೀಗಾಗಿ ಕೆಲವು ಪಾನೀಯಗಳು ನಮ್ಮ ದೇಹದಿಂದ ತ್ಯಾಜ್ಯ ಮತ್ತು ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

    ದೇಹದ ತ್ಯಾಜ್ಯವನ್ನು ತೆಗೆದು ಹಾಕಲು ಕೆಲವು ರೀತಿಯ ಜ್ಯೂಸ್‌ಗಳು ನಮಗೆ ತುಂಬಾ ಉಪಯುಕ್ತವಾಗಿವೆ. ಈ ಜ್ಯೂಸ್​ಗಳನ್ನು ಪ್ರತಿದಿನ ಸೇವಿಸುವುದರಿಂದ ನಾವು ಆರೋಗ್ಯವಾಗಿರುತ್ತೇವೆ. ಇದಲ್ಲದೆ, ಬೇಸಿಗೆಯಲ್ಲಿ ಇವುಗಳನ್ನು ತೆಗೆದುಕೊಳ್ಳುವುದರಿಂದ, ಸೂರ್ಯನಿಂದ ಉಂಟಾಗುವ ಹಾನಿಕಾರಕ ಪರಿಣಾಮದಿಂದ ಬಚಾವ್​ ಆಗಬಹುದು. ಅಲ್ಲದೆ, ಈ ಪಾನೀಯಗಳಲ್ಲಿ ಕಂಡುಬರುವ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ದೇಹವನ್ನು ಹೈಡ್ರೀಕರಿಸುವಲ್ಲಿ ಅವು ಪ್ರಮುಖ ಪಾತ್ರವಹಿಸುತ್ತವೆ. ಹಾಗಾದರೆ ಆ ಜ್ಯೂಸ್​ ಯಾವುವು ಎಂಬುದನ್ನು ನಾವೀಗ ತಿಳಿಯೋಣ.

    1. ನೀರು: ದೇಹವನ್ನು ಹೈಡ್ರೇಟ್ ಮಾಡಲು ಮತ್ತು ತ್ಯಾಜ್ಯವನ್ನು ಹೊರಹಾಕಲು ಸಹಾಯ ನೀರು ಮಾಡುತ್ತದೆ. ದಿನಕ್ಕೆ ಕನಿಷ್ಠ 8 ಲೋಟ ನೀರು ಕುಡಿಯುವುದು ತುಂಬಾ ಪ್ರಯೋಜನಕಾರಿ.

    2. ಎಳನೀರು: ಎಳನೀರು ದೇಹಕ್ಕೆ ಎಲೆಕ್ಟ್ರೋಲೈಟ್‌ಗಳನ್ನು ಒದಗಿಸುತ್ತದೆ. ತ್ಯಾಜ್ಯವನ್ನು ತೊಡೆದುಹಾಕಲು ಇದು ಸಹಾಯ ಮಾಡುತ್ತದೆ. ದಿನಕ್ಕೆ ಒಂದು ಅಥವಾ ಎರಡು ಎಳನೀರು ಕುಡಿಯುವುದು ತುಂಬಾ ಒಳ್ಳೆಯದು.

    3. ಕಲ್ಲಂಗಡಿ ಜ್ಯೂಸ್​: ಕಲ್ಲಂಗಡಿ ಜ್ಯೂಸ್​ ದೇಹವನ್ನು ಹೈಡ್ರೇಟ್ ಮಾಡಲು ಮತ್ತು ತ್ಯಾಜ್ಯವನ್ನು ಹೊರಹಾಕಲು ಸಹಾಯ ಮಾಡುತ್ತದೆ. ದಿನಕ್ಕೆ ಒಂದು ಲೋಟ ಕಲ್ಲಂಗಡಿ ಜ್ಯೂಸ್ ಕುಡಿಯುವುದು ತುಂಬಾ ಪ್ರಯೋಜನಕಾರಿ.

    4. ಟೊಮ್ಯಾಟೋ ಜ್ಯೂಸ್​: ಟೊಮ್ಯಾಟೋದಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇವು ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತವೆ. ದಿನಕ್ಕೆ ಒಂದು ಗ್ಲಾಸ್ ಜ್ಯೂಸ್​ ನಿಮ್ಮನ್ನು ಆರೋಗ್ಯಕರವಾಗಿ ಇರಿಸುತ್ತದೆ.

    5. ಗ್ರೀನ್​ ಟೀ: ಗ್ರೀನ್ ಟೀಯಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹದಿಂದ ತ್ಯಾಜ್ಯವನ್ನು ಹೊರಹಾಕಲು ಇದು ತುಂಬಾ ಪ್ರಯೋಜನಕಾರಿಯಾಗಿದೆ. (ಏಜೆನ್ಸೀಸ್​)

    ಅಪ್ಪಿತಪ್ಪಿ ಈ ಆಹಾರಗಳ ಜತೆ ಬಾಳೆಹಣ್ಣು ತಿನ್ನಬೇಡಿ… ತಿಂದ್ರೆ ಆರೋಗ್ಯಕ್ಕೆ ತುಂಬಾ ಡೇಂಜರ್​!

    ಒಬ್ಬ ಟೀ ವ್ಯಾಪಾರಿ 1 ವರ್ಷಕ್ಕೆ ಎಷ್ಟು ದುಡಿತಾರೆ ಗೊತ್ತಾ? ಈ ಲೆಕ್ಕಾಚಾರ ನೋಡಿದ್ರೆ ತಲೆ ತಿರುಗೋದು ಪಕ್ಕಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts