More

  ಒಬ್ಬ ಟೀ ವ್ಯಾಪಾರಿ 1 ವರ್ಷಕ್ಕೆ ಎಷ್ಟು ದುಡಿತಾರೆ ಗೊತ್ತಾ? ಈ ಲೆಕ್ಕಾಚಾರ ನೋಡಿದ್ರೆ ತಲೆ ತಿರುಗೋದು ಪಕ್ಕಾ!

  ಚಹಾವು ಭಾರತೀಯರ ನೆಚ್ಚಿನ ಪಾನೀಯಗಳಲ್ಲಿ ಒಂದಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಚಹಾ ಕುಡಿಯುವ ಮಂದಿ ನಮ್ಮ ದೇಶದಲ್ಲಿದ್ದಾರೆ. ಬಹುತೇಕರ ದಿನದ ಆರಂಭ ಟೀನಿಂದಲೇ ಶುರುವಾಗುತ್ತದೆ. ಒಂದು ಹೊತ್ತು ಊಟ ಬೇಕಾದರೂ ಬಿಡುತ್ತೇನೆ ಆದರೆ, ಟೀ ಬಿಡುವುದಿಲ್ಲ ಎಂದು ಹೇಳುವ ಜನರು ಕೂಡ ನಮ್ಮ ನಡುವೆ ಇದ್ದಾರೆ. ಅಷ್ಟೊಂದು ಜನಪ್ರಿಯವಾಗಿದೆ ಈ ಪಾನೀಯ.

  ಕೆಲಸದ ಸಮಯದಲ್ಲಿ ಮತ್ತು ಪ್ರಯಾಣದ ಸಮಯದಲ್ಲಿ ಚಹಾ ವಿರಾಮವನ್ನು ಯಾರು ತಾನೇ ಇಷ್ಟಪಡುವುದಿಲ್ಲ? ಅದರಲ್ಲೂ ಚಳಿಯಲ್ಲಿ ಟೀ ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು ಅಂತಾರೆ! ಆದರೆ, ನಾವೀಗ ಹೇಳ ಹೊರಟಿರುವುದು ಚಹಾದ ವಿಶೇಷತೆ ಬಗ್ಗೆ ಅಲ್ಲ, ಇದು ಚಹಾ ಮಾರುವ ಜನರ ಆದಾಯದ ಬಗ್ಗೆ.

  ಕೆಲವು ಟೀ ಸ್ಟಾಲ್‌ಗಳು ಯಾವಾಗಲೂ ಕಾರ್ಯನಿರತವಾಗಿವೆ ಅಂದರೆ, ದಿನದ 24 ಗಂಟೆಯೂ ಓಪನ್​ ಆಗಿರುತ್ತವೆ. ಅಂತಹ ಟೀ ಸ್ಟಾಲ್‌ನ ಮಾಲೀಕರು ಎಷ್ಟು ಸಂಪಾದಿಸುತ್ತಾರೆ ಎಂಬುದನ್ನು ಕೇಳಿ ಆಗಾಗ ಆಶ್ಚರ್ಯ ಪಡುತ್ತೇವೆ. ಕೇರಳದ ಹೆಚ್ಚಿನ ಜನರು ಬಿಳಿ ಕಾಲರ್ ಉದ್ಯೋಗಗಳಿಗೆ ಆದ್ಯತೆ ನೀಡುವುದರಿಂದ, ನೆರೆಯ ರಾಜ್ಯವಾದ ತಮಿಳುನಾಡು, ಕರ್ನಾಟಕ ಸೇರಿದಂತೆ ವಲಸಿಗರು ಕೇರಳದಲ್ಲಿ ಅನೇಕ ಚಹಾ ಅಂಗಡಿಗಳನ್ನು ತೆರೆದಿದ್ದಾರೆ.

  ಟೀ ಮಾರಾಟಗಾರರ ಆದಾಯ
  ಲಿಂಕ್ಡ್‌ಇನ್ ಬಳಕೆದಾರರಾದ ರಾಜ್ವಿ ಅಗರ್‌ವಾಲ್ ಎಂಬುವರು ಈ ಕಡಿಮೆ ಬಂಡವಾಳದ ವ್ಯವಹಾರದಿಂದ ಚಹಾ ಮಾರಾಟಗಾರನು ಎಷ್ಟು ಗಳಿಸುತ್ತಾನೆ ಎಂಬುದರ ಕುರಿತು ಸ್ಥೂಲ ಲೆಕ್ಕಾಚಾರವನ್ನು ಮಾಡಿದ್ದಾರೆ. ದಿನಕ್ಕೆ ಸರಾಸರಿ 1200 ಕಪ್ ಚಹಾ ಅಥವಾ ಕಾಫಿಯನ್ನು ಮಾರಾಟ ಮಾಡುವ ಸಾಕಷ್ಟು ಕಾರ್ಯನಿರತ ಚಹಾ ಅಂಗಡಿಯ ಅಂದಾಜು ಇದಾಗಿದೆ.

  ಈ ಅಂಕಿ ಅಂಶವು ಟೀ ಅಂಗಡಿಯ ಮಾಲೀಕರು ಪ್ರತಿ ತಿಂಗಳ ಕೊನೆಯಲ್ಲಿ 7,50,000 ರೂಪಾಯಿ ಆದಾಯವನ್ನು ಗಳಿಸುತ್ತಾರೆ ಎಂದು ಸೂಚಿಸುತ್ತದೆ. ವಾರ್ಷಿಕವಾಗಿ 90 ಲಕ್ಷ ರೂಪಾಯಿ ಆದಾಯವಾಗುತ್ತದೆ. ಟೀ, ಕಾಫಿಗೆ ಬೇಕಾದ ಸಾಮಾಗ್ರಿಗಳಾದ ಟೀ, ಕಾಫಿ ಪುಡಿ, ಸಕ್ಕರೆ, ಹಾಲು, ನೀರು ಹಾಗೂ ಗ್ಯಾಸ್ ಸಿಲಿಂಡರ್ ಖರ್ಚು ಲೆಕ್ಕ ಹಾಕಿದರೂ ಇದು ಸುಮಾರು 48 ಲಕ್ಷ ರೂ.ಗಳಾದರೂ 42 ಲಕ್ಷ ರೂ. ಲಾಭ ಸಿಗುತ್ತದೆ. ಅಂದರೆ, ವರ್ಷಕ್ಕೆ 42 ಲಕ್ಷ ರೂ. ಲಾಭ.

  ಸಾಮಾನ್ಯವಾಗಿ ಟೀ ಅಂಗಡಿಗಳಲ್ಲಿ ಬಾಸ್ ಮತ್ತು ಕೆಲಸಗಾರ ಎಲ್ಲರೂ ಒಬ್ಬರೇ ಆಗಿರುತ್ತಾರೆ. ಕುಟುಂಬದ ಸದಸ್ಯರು ಸಹ ಸಹಾಯಕ್ಕೆ ಇರುತ್ತಾರೆ. ಈ ಅಂಕಿ ಅಂಶಗಳಲ್ಲಿ ನೀವು ಸಣ್ಣ ತಿಂಡಿಗಳನ್ನು ಸೇರಿಸಿದರೆ, ಲಾಭ ಮಾತ್ರ ಇನ್ನಷ್ಟು ಹೆಚ್ಚಾಗುತ್ತದೆ. ಚಹಾ ಅಂಗಡಿಯನ್ನು ಪ್ರಾರಂಭಿಸಲು ಇದಕ್ಕಿಂತ ಉತ್ತಮ ಪ್ರೇರಣೆ ಇದೆಯೇ? (ಏಜೆನ್ಸೀಸ್)

  ಅದನ್ನು ದಪ್ಪ ಮಾಡಿಕೊಳ್ಳಲು ಹೇಳುತ್ತಿದ್ದರು! ಸಿನಿ ಇಂಡಸ್ಟ್ರಿಯ ಕರಾಳತೆ ಬಿಚ್ಚಿಟ್ಟ ನಟಿ ಸಮೀರಾ ರೆಡ್ಡಿ

  S*x ಎಂಬುದು… ಬೆಡ್​ರೂಮ್​ ಸೀಕ್ರೆಟ್​ ಬಿಚ್ಚಿಟ್ಟ ಅಮೆರಿಕ ಅಧ್ಯಕ್ಷ ಜೋ ಬೈಡೆನ್!​

  ಬಿಸಿಲಿಗೂ ಕರಗದ ಈ ಐಸ್​ ಕ್ರೀಮ್​ ಹಿಂದಿನ ರಹಸ್ಯ ತಿಳಿದ್ರೆ ನೀವು ಬೆರಗಾಗೋದು ಖಚಿತ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts