More

    ಬಿಸಿಲಿಗೂ ಕರಗದ ಈ ಐಸ್​ ಕ್ರೀಮ್​ ಹಿಂದಿನ ರಹಸ್ಯ ತಿಳಿದ್ರೆ ನೀವು ಬೆರಗಾಗೋದು ಖಚಿತ!

    ಐಸ್​ ಕ್ರೀಮ್​ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ. ಇದರ ಟೇಸ್ಟ್​ಗೆ ಪ್ರತಿಯೊಬ್ಬರು ಸೋಲುತ್ತಾರೆ. ಐಸ್​ ಕ್ರೀಮ್​ ಸವಿಯುವಾಗ ಬೇಸರದ ಸಂಗತಿ ಏನೆಂದರೆ, ಅದು ಬೇಗ ಮೆಲ್ಟ್​ ಆಗಿಬಿಡುತ್ತದೆ. ಇದರಿಂದ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಆದಾಗ್ಯೂ, ಸೂರ್ಯೋದಯದ ನಾಡು ಜಪಾನ್‌ನಲ್ಲಿ ಬೇಸಿಗೆಯ ಶಾಖದಲ್ಲಿಯೂ ಕರಗದ ಐಸ್ ಕ್ರೀಮ್ ಇದೆ. ಈ ಐಸ್ ಕ್ರೀಮ್​ನ ಹೆಸರು “ಕನಜವಾ”.

    ಕನಜವಾ ಐಸ್ ಕ್ರೀಂನಲ್ಲಿ ಪಾಲಿಫಿನಾಲ್ (ಪಾಲಿಫಿನಾಲ್​ಗಳು ಅನೇಕ ಸಸ್ಯಗಳಲ್ಲಿ ನೈಸರ್ಗಿಕವಾಗಿ ಕಂಡುಬರುವ ಸಂಯುಕ್ತಗಳ ಒಂದು ದೊಡ್ಡ ಗುಂಪು) ಎಂಬ ಬೈಂಡಿಂಗ್ ಏಜೆಂಟ್ ಇರುತ್ತದೆ. ಈ ಪಾಲಿಫಿನಾಲ್ ಐಸ್ ಕ್ರೀಮ್ ತ್ವರಿತವಾಗಿ ಕರಗದಂತೆ ಸಹಾಯ ಮಾಡುತ್ತದೆ ಮತ್ತು ಐಸ್ ಕ್ರೀಮ್​ ಆಕಾರವನ್ನು ಗಂಟೆಗಳವರೆಗೆ ಹಿಡಿದಿಟ್ಟುಕೊಳ್ಳುತ್ತದೆ. ಈ ಆವಿಷ್ಕಾರದ ಹಿಂದೆ ಜಪಾನ್​ನ ಬಯೋಥೆರಪಿ ಅಭಿವೃದ್ಧಿ ಕೇಂದ್ರದ ಕೈಚಳಕವಿದೆ.

    ಈ ಐಸ್ ಕ್ರೀಮ್ ಸಂಪೂರ್ಣವಾಗಿ ಆಕಸ್ಮಿಕವಾಗಿ ತಯಾರಿಸಲ್ಪಟ್ಟಿದೆ ಎಂದು ಬಯೋಥೆರಪಿ ಅಭಿವೃದ್ಧಿ ಕೇಂದ್ರ ತಿಳಿಸಿದೆ. ಸ್ಟ್ರಾಬೆರಿಯಿಂದ ಹೊರತೆಗೆಯಲಾದ ಪಾಲಿಫಿನಾಲ್ ದ್ರವವು ಐಸ್ ಕ್ರೀಮ್ ತಯಾರಿಕೆಯ ಸಮಯದಲ್ಲಿ ಐಸ್ ಕ್ರೀಮ್ ಅನ್ನು ದಪ್ಪವಾಗಿಸುವುದು ಕಂಡುಬಂದಿದೆ. ಈ ಐಸ್ ಕ್ರೀಮ್​​ಗಳು ಕರಗದೆ ಮೂರು ಗಂಟೆಗಳವರೆಗೆ ಇರುತ್ತದೆ ಎಂದು ಹೇಳಲಾಗುತ್ತದೆ.

    ಇದೇ ಸಂದರ್ಭದಲ್ಲಿ ಬೇಸಿಗೆಯ ಶಾಖದಲ್ಲಿ ಬೇಗ ಕರಗದ ಇನ್ನೊಂದು ರೀತಿಯ ಐಸ್ ಕ್ರೀಮ್ ಕಳೆದ ವರ್ಷ ಮಧ್ಯ ಜಪಾನಿನ ನಗರಗಳಲ್ಲಿ ಮಾರಾಟವಾಯಿತು. ‘ಒಟ್ಟೇಗಿ ಐಸ್ ಕ್ರೀಮ್​’ ತಯಾರಿಕೆಯ ಸಮಯದಲ್ಲಿ ಕೊನೆಯ ಹಂತದಲ್ಲಿ ಅಕ್ಕಿ ಹಿಟ್ಟನ್ನು ಸೇರಿಸಲಾಗುತ್ತದೆ. ಇದು ಶಾಖದಿಂದ ಐಸ್​ ಕ್ರೀಮ್​ ಕರಗುವುದನ್ನು ತಡೆಯುತ್ತದೆ. (ಏಜೆನ್ಸೀಸ್​)

    ಅದನ್ನು ದಪ್ಪ ಮಾಡಿಕೊಳ್ಳಲು ಹೇಳುತ್ತಿದ್ದರು! ಸಿನಿ ಇಂಡಸ್ಟ್ರಿಯ ಕರಾಳತೆ ಬಿಚ್ಚಿಟ್ಟ ನಟಿ ಸಮೀರಾ ರೆಡ್ಡಿ

    ಈ ಒಂದು ಗಿಫ್ಟ್​ ಕೊಟ್ಟರೆ ನಾನು ನಿಮ್ಮವಳು! ಅಭಿಮಾನಿಗಳಿಗೆ ಬಂಪರ್​ ಆಫರ್​ ಕೊಟ್ಟ ಅನುಪಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts