More

    3 ವರ್ಷಗಳಲ್ಲಿ ಶೇ. 4,000 ಆದಾಯ ಗಳಿಸಿದ ಷೇರು: ಈಗ ಎರಡೇ ದಿನಗಳಲ್ಲಿ ಶೇಕಡಾ 10 ಹೆಚ್ಚಳ

    ಮುಂಬೈ: ನವೀಕರಿಸಬಹುದಾದ ಇಂಧನ ಮತ್ತು ಎಲೆಕ್ಟ್ರಿಕ್ ಮೊಬಿಲಿಟಿ ವಲಯದ ಪ್ರಮುಖ ಕಂಪನಿಯಾಗಿರುವ ಜೆನ್ಸೋಲ್ ಇಂಜಿನಿಯರಿಂಗ್ ಲಿಮಿಟೆಡ್, ಗುಜರಾತ್ ಸರ್ಕಾರದೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

    ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಸಮ್ಮುಖದಲ್ಲಿ ಸಹಿ ಮಾಡಿದ ಪ್ರಮುಖ ಒಪ್ಪಂದದಿಂದ ಗುರುತಿಸಲ್ಪಟ್ಟ ಈ ರೂ 2,000 ಕೋಟಿಯ ಬೃಹತ್​ ಮೈತ್ರಿಯಿಂದಾಗಿ ಅತ್ಯಾಧುನಿಕ ಜೆನ್ಸೋಲ್ ಇವಿ ಉತ್ಪಾದನಾ ಘಟಕ ಸ್ಥಾಪನೆಯಾಗುತ್ತದೆ, ಹಸಿರು ಉದ್ಯೋಗಗಳ ಮೂಲಕ 1,500 ವ್ಯಕ್ತಿಗಳಿಗೆ ಉದ್ಯೋಗ ನೀಡುತ್ತದೆ. ಅಲ್ಲದೆ, ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳ ಉತ್ಪಾದನೆಯ ವೈವಿಧ್ಯಮಯ ಬಂಡವಾಳವು ಗುಜರಾತ್‌ನ ಇವಿ ಪರಿಸರ ವ್ಯವಸ್ಥೆಯನ್ನು ಸಮೃದ್ಧಗೊಳಿಸುತ್ತದೆ.

    ಈ ಕಾರ್ಯತಂತ್ರದ ಜೋಡಣೆಯು ನಾವೀನ್ಯತೆ ಮತ್ತು ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವುದಲ್ಲದೆ, ಭಾರತದ ಹಸಿರು ದೃಷ್ಟಿಗೆ ಉಭಯ ಪಕ್ಷಗಳ ಅಚಲವಾದ ಬದ್ಧತೆಯನ್ನು ಪುನರುಚ್ಚರಿಸುತ್ತದೆ,

    ಈ ಹಿಂದೆ, ಜೆನ್ಸೋಲ್​ (Gensol) ಇಂಜಿನಿಯರಿಂಗ್ ಕಂಪನಿಯು ಭಾರತದ ಪ್ರಮುಖ ಉಕ್ಕು ಉತ್ಪಾದಕ ಮತ್ತು ಉನ್ನತ ಫೆರೋ ಮಿಶ್ರಲೋಹ ರಫ್ತುದಾರ ಎಸ್​ಇಎಂಎಲ್​ (SEML) ಜತೆ ಪಾಲುದಾರಿಕೆ ಹೊಂದಿತ್ತು. ಎಸ್​ಇಎಂಎಲ್​ನ ಛತ್ತೀಸ್‌ಗಢ ಸ್ಥಾವರಕ್ಕಾಗಿ 33 ಮೆವಾ ವಾಟ್​ ಕ್ಯಾಪ್ಟಿವ್ ಸೌರ ವಿದ್ಯುತ್ ಸ್ಥಾವರವನ್ನು ನಿರ್ಮಿಸಲು ಒಪ್ಪಂದವನ್ನು ಮಾಡಿಕೊಂಡಿದೆ, 138.72 ಕೋಟಿ ರೂ.ಗಳ ಈ ಯೋಜನೆಯನ್ನು 6 ತಿಂಗಳೊಳಗೆ ಪೂರ್ಣಗೊಳಿಸಲು ನಿಗದಿಪಡಿಸಲಾಗಿದೆ, ಇದು ಜೆನ್ಸೋಲ್‌ಗೆ ಮಹತ್ವದ ಮೈಲಿಗಲ್ಲಾಗಿದೆ.

    ಜೆನ್ಸೋಲ್​ ಇಂಜಿನಿಯರಿಂಗ್ ಲಿಮಿಟೆಡ್​ (Gensol Engineering Ltd) ಕಂಪನಿಯ ಷೇರುಗಳು ಕೇವಲ 1 ವರ್ಷದಲ್ಲಿ 150 ಪ್ರತಿಶತದಷ್ಟು ಹಾಗೂ 3 ವರ್ಷಗಳಲ್ಲಿ 4,000 ಪ್ರತಿಶತದಷ್ಟು ಆದಾಯವನ್ನು ನೀಡಿದೆ.

    ಮಂಗಳವಾರ ಮತ್ತು ಬುಧವಾರ ಕೂಡ ಈ ಕಂಪನಿಯ ಷೇರುಗಳು ಬಿಎಸ್​ಇಯಲ್ಲಿ ಶೇಕಡಾ 5ರಷ್ಟು ಹೆಚ್ಚಳವನ್ನು ಕಂಡವು. ಹಿಂದಿನ ದಿನ ರೂ 803.06 ರಿಂದ ರೂ 843.75 ಕ್ಕೆ ಮಂಗಳವಾರ ತಲುಪಿದವೆ. ಬುಧವಾರ ಕೂಡ 41.70 ರೂಪಾಯಿ ಏರಿಕೆ ಕಂಡಿವೆ.

    ಈ ಕಂಪನಿಯು 3,200 ಕೋಟಿ ರೂ.ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿದ್ದು, ಸೆಪ್ಟೆಂಬರ್ 30, 2023 ರ ಹೊತ್ತಿಗೆ ಕಂಪನಿಯ ಆರ್ಡರ್ ಬುಕ್ 531 ಕೋಟಿ ರೂ.ಗಳಷ್ಟಿದೆ. ಎಫ್‌ಐಐಗಳು (ವಿದೇಶಿ ಸಾಂಸ್ಥಿಕ ಹೂಡಿಕೆದಾರರು ) ತಮ್ಮ ಪಾಲನ್ನು ಶೇಕಡಾ 2.57 ಕ್ಕೆ ಹೆಚ್ಚಿಸಿವೆ. ಪ್ರಮುಖ ಹೂಡಿಕೆದಾರ ಸಂಸ್ಥೆಯಾದ ಮುಕುಲ್ ಅಗರವಾಲ್ ಈ ಕಂಪನಿಯಲ್ಲಿ ಗಮನಾರ್ಹ ಪಾಲನ್ನು (ಶೇ. 1.64) ಹೊಂದಿದೆ.

    ಜೆನ್ಸೋಲ್​ ಇಂಜಿನಿಯರಿಂಗ್ ಲಿಮಿಟೆಡ್​ ನವೀಕರಿಸಬಹುದಾದ ಇಂಧನ ಯೋಜನೆ ಅಭಿವೃದ್ಧಿ ಸೇವೆಗಳನ್ನು ಒದಗಿಸುತ್ತದೆ. ಕಂಪನಿಯು ಸೌರ ಸ್ಥಾವರಗಳನ್ನು ನಿರ್ಮಿಸುತ್ತದೆ. ಜೆನ್ಸೋಲ್ ಇಂಜಿನಿಯರಿಂಗ್ ಭಾರತದಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತದೆ. ಕಂಪನಿಯು ಎಲೆಕ್ಟ್ರಿಕ್ ವಾಹನಗಳನ್ನು ಸಹ ತಯಾರಿಸುತ್ತದೆ.

    ಏಕನಾಥ್ ಶಿಂಧೆ ಬಣವೇ ನೈಜ ಶಿವಸೇನಾ: ಮಹಾರಾಷ್ಟ್ರ ಸ್ಪೀಕರ್ ಮಹಾ ತೀರ್ಪಿಗೆ ಆಧಾರಗಳೇನು?

    ಮೇಲ್ಛಾವಣಿ ಸೌರ ವಿದ್ಯುತ್ ಸಬ್ಸಿಡಿ ಹೆಚ್ಚಳ ; ನಿಮ್ಮ ಮನೆಯಲ್ಲಿ ಅಳವಡಿಸಿಕೊಂಡರೆ ಲಾಭದಾಯಕ

    ಬಿಎಸ್​ಇ ಸೂಚ್ಯಂಕವು 270 ಅಂಕ ಏರಿಕೆ: ರಿಲಯನ್ಸ್, ಐಸಿಐಸಿಐ ಬ್ಯಾಂಕ್ ಷೇರುಗಳಿಗೆ ಉತ್ತಮ ಲಾಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts