More

    ಬಿಎಸ್​ಇ ಸೂಚ್ಯಂಕವು 270 ಅಂಕ ಏರಿಕೆ: ರಿಲಯನ್ಸ್, ಐಸಿಐಸಿಐ ಬ್ಯಾಂಕ್ ಷೇರುಗಳಿಗೆ ಉತ್ತಮ ಲಾಭ

    ಮುಂಬೈ: ಬುಧವಾರದ ವಹಿವಾಟಿನಲ್ಲಿ ತಡವಾದ ಖರೀದಿಯು ಬಿಎಸ್​ಇ ಸೂಚ್ಯಂಕವು 270 ಅಂಕಗಳ ಏರಿಕೆಗೆ ನೆರವಾಗಿದೆ. ರಿಲಯನ್ಸ್, ಐಸಿಐಸಿಐ ಬ್ಯಾಂಕ್ ಷೇರುಗಳ ಬೆಲೆಗಳು ಬುಧವಾರ ಸಾಕಷ್ಟು ಏರಿಕೆ ಕಂಡಿವೆ.

    ಈಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳಾದ ಬಿಎಸ್​ಇ ಮತ್ತು ನಿಫ್ಟಿ ಬುಧವಾರದಂದು ಇಂಟ್ರಾ-ಡೇ ವಹಿವಾಟಿನಲ್ಲಿ ಕೆಳಗೆ ಕುಸಿದ ನಂತರ ಪುಟಿದೆದ್ದಿತು, ಮಾರುಕಟ್ಟೆಯ ಪ್ರಮುಖ ಷೇರುಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್‌ಗಳಲ್ಲಿನ ಕೊನೆ ಹಂತದ ಖರೀದಿಯು ಸೂಚ್ಯಂಕ ಹೆಚ್ಚಳಕ್ಕೆ ನೆರವಾಯಿತು.

    ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕವು 271.50 ಅಂಕಗಳು ಅಥವಾ ಶೇಕಡಾ 0.38ರಷ್ಟು ಹೆಚ್ಚಳ ಕಂಡು 71,657.71 ನಲ್ಲಿ ನೆಲೆಗೊಂಡಿತು. ದಿನದ ವಹಿವಾಟಿನ ಮಧ್ಯದಲ್ಲಿ ಸೂಚ್ಯಂಕವು ಕನಿಷ್ಠ 71,110.98 ಮತ್ತು ಗರಿಷ್ಠ 71,733.84 ಅಂಕಗಳನ್ನು ಮುಟ್ಟಿತ್ತು.

    ನಿಫ್ಟಿ ಸೂಚ್ಯಂಕವು 73.85 ಅಂಕಗಳು ಅಥವಾ ಶೇಕಡಾ 0.34ರಷ್ಟು ಹೆಚ್ಚಳ ಕಂಡು 21,618.70ಕ್ಕೆ ಏರಿತು.

    “ಗಳಿಕೆಯ ಬೆಳವಣಿಗೆಯು ಕಡಿಮೆಯಾಗುವ ಸಾಧ್ಯತೆಯಿದೆ, ಆದರೆ ವಾಹನ, ಬಂಡವಾಳ ಸರಕುಗಳು ಮತ್ತು ಸಿಮೆಂಟ್ ನಿರೀಕ್ಷೆಗಳು ಬಲವಾಗಿ ಮುಂದುವರಿಯಬಹುದು” ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

    ಬುಧವಾರದ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇಕಡಾ 2.69ರಷ್ಟು ಏರಿಕೆಯಾಗಿದೆ. ಎಚ್‌ಸಿಎಲ್ ಟೆಕ್, ಐಸಿಐಸಿಐ ಬ್ಯಾಂಕ್, ಟಾಟಾ ಮೋಟಾರ್ಸ್, ವಿಪ್ರೋ, ಇಂಡಸ್‌ಇಂಡ್ ಬ್ಯಾಂಕ್, ಜೆಎಸ್‌ಡಬ್ಲ್ಯೂ ಸ್ಟೀಲ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟೈಟಾನ್ ಷೇರುಗಳು ಕೂಡ ಏರಿಕೆ ಕಂಡಿವೆ.
    ಇದಕ್ಕೆ ವ್ಯತಿರಿಕ್ತವಾಗಿ, ಎನ್‌ಟಿಪಿಸಿ, ಪವರ್ ಗ್ರಿಡ್, ಅಲ್ಟ್ರಾಟೆಕ್ ಸಿಮೆಂಟ್, ಆಕ್ಸಿಸ್ ಬ್ಯಾಂಕ್, ಇನ್ಫೋಸಿಸ್ ಮತ್ತು ನೆಸ್ಲೆ ಷೇರುಗಳು ಪ್ರಮುಖವಾಗಿ ಹಿನ್ನಡೆ ಅನುಭವಿಸಿವೆ.

    ಏಷ್ಯಾದ ಮಾರುಕಟ್ಟೆಗಳಲ್ಲಿ, ಟೋಕಿಯೊ ಲಾಭ ಮಾಡಿದ್ದರೆ ಸಿಯೋಲ್, ಶಾಂಘೈ ಮತ್ತು ಹಾಂಗ್ ಕಾಂಗ್ ಕುಸಿತ ಅನುಭವಿಸಿವೆ.

    ಐರೋಪ್ಯ ಮಾರುಕಟ್ಟೆಗಳು ಲಾಭದಲ್ಲಿ ವಹಿವಾಟು ನಡೆಸಿವೆ. ಮಂಗಳವಾರ ಅಮೆರಿಕದ ಮಾರುಕಟ್ಟೆಗಳು ಬಹುತೇಕ ನಷ್ಟ ಅನುಭವಿಸಿವೆ.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಂಗಳವಾರ 990.90 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿವೆ.

    ಮಂಗಳವಾರ ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕವು 30.99 ಅಂಕ ಅಥವಾ 0.04 ರಷ್ಟು ಏರಿಕೆಯಾಗಿ 71,386.21 ಕ್ಕೆ ತಲುಪಿತ್ತು. ನಿಫ್ಟಿ ಸೂಚ್ಯಂಕವು 31.85 ಅಂಕ ಅಥವಾ 0.15 ರಷ್ಟು ಏರಿಕೆಯಾಗಿ 21,544.85 ಕ್ಕೆ ಮುಟ್ಟಿತ್ತು.

    ಇತರ ಸೂಚ್ಯಂಕಗಳು:

    ಬಿಎಸ್​ಇ ಮಿಡ್​​ ಕ್ಯಾಪ್​: 37,490.53 (86.21 ಅಂಕ ಹೆಚ್ಚಳ)
    ಬಿಎಸ್​ಇ ಸ್ಮಾಲ್​ ಕ್ಯಾಪ್​: 43,972.73 (151.57 ಅಂಕ ಹೆಚ್ಚಳ)
    ನಿಫ್ಟಿ ಮಿಡ್​ ಕ್ಯಾಪ್​ 100: 47,107.15 (137.2 ಅಂಕ ಹೆಚ್ಚಳ)
    ನಿಫ್ಟಿ ಸ್ಮಾಲ್​ ಕ್ಯಾಪ್​ 100: 15,386.70 (23 ಅಂಕ ಕುಸಿತ)
    ನಿಫ್ಟಿ ಸ್ಮಾಲ್​ ಕ್ಯಾಪ್​ 250: 14,379.85 (28.95 ಅಂಕ ಹೆಚ್ಚಳ)

    ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಸೋನಿಯಾ, ಖರ್ಗೆ: ಆಹ್ವಾನ ತಿರಸ್ಕರಿಸಿದ್ದಕ್ಕೆ ಕಾಂಗ್ರೆಸ್​ ನೀಡಿದ ಕಾರಣಗಳು ಹೀಗಿವೆ…

    ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಬಿಗ್​ ರಿಲೀಫ್: 3 ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು

    ಹೆಚ್ಚು ಮಕ್ಕಳಿಗೆ ಜನ್ಮ ನೀಡಿ, ಮೋದಿ ಮನೆ ಕಟ್ಟಿಕೊಡುತ್ತಾರೆ: ಹೀಗೆ ಹೇಳಿದ ಇಬ್ಬರು ಹೆಂಡಂದಿರು, 8 ಮಕ್ಕಳಿರುವ ಸಚಿವ ಯಾರು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts