More

    ಹೆಚ್ಚು ಮಕ್ಕಳಿಗೆ ಜನ್ಮ ನೀಡಿ, ಮೋದಿ ಮನೆ ಕಟ್ಟಿಕೊಡುತ್ತಾರೆ: ಹೀಗೆ ಹೇಳಿದ ಇಬ್ಬರು ಹೆಂಡಂದಿರು, 8 ಮಕ್ಕಳಿರುವ ಸಚಿವ ಯಾರು ಗೊತ್ತೆ?

    ಜೈಪುರ: ಹೆಚ್ಚು ಮಕ್ಕಳಿಗೆ ಜನ್ಮ ನೀಡಿ. ಇದರಿಂದ ಯಾವುದೇ ತೊಂದರೆಯಾಗದು. ಎಲ್ಲರಿಗೂ ಪ್ರಧಾನಿ ನರೇಂದ್ರ ಮೋದಿ ಅವರು ಮನೆಗಳನ್ನು ನಿರ್ಮಿಸಿಕೊಡುತ್ತಾರೆ….

    ಹೀಗೆ ಜನರನ್ನು ಹುರುದುಂಬಿಸಿದ್ದಾರೆ ರಾಜಸ್ಥಾನದ ರಾಜ್ಯದ ಬುಡಕಟ್ಟು ಪ್ರದೇಶ ಅಭಿವೃದ್ಧಿ ಸಚಿವ ಬಾಬುಲಾಲ್ ಖರಾಡಿ.

    ಮಂಗಳವಾರ ಉದಯಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಖಾರಾಡಿ ಅವರು, “ಯಾರೂ ಹಸಿವಿನಿಂದ ಮಲಗಬಾರದು ಮತ್ತು ತಲೆಯ ಮೇಲೆ ಸೂರು ಇಲ್ಲದೆ ಮಲಗಬಾರದು ಎಂಬುದು ಪ್ರಧಾನಿಯವರ ಕನಸಾಗಿದೆ. ನೀವು ಸಾಕಷ್ಟು ಮಕ್ಕಳಿಗೆ ಜನ್ಮ ನೀಡಿರಿ. ಪ್ರಧಾನ ಮಂತ್ರಿಯವರು ನಿಮಗೆ ಮನೆಗಳನ್ನು ನಿರ್ಮಿಸುತ್ತಾರೆ, ಆಗ ಸಮಸ್ಯೆ ಏನು?” ಎಂದು ಪ್ರಶ್ನಿಸಿದರು.

    ಖಾರಾಡಿ ಹೇಳಿಕೆ ನೀಡುತ್ತಿದ್ದಂತೆಯೇ ಸಭಿಕರು ನಗೆಗಡಲಲ್ಲಿ ತೇಲಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜನಪ್ರತಿನಿಧಿಗಳು ಪರಸ್ಪರ ಮುಖ ನೋಡಿಕೊಂಡಿದ್ದು ಕಂಡುಬಂತು.

    ಬಿಜೆಪಿ ನೇತೃತ್ವದ ಕೇಂದ್ರವು ವಿವಿಧ ಸಾರ್ವಜನಿಕ ಕಲ್ಯಾಣ ಕ್ರಮಗಳನ್ನು ಪ್ರಾರಂಭಿಸುತ್ತಿದೆ ಎಂದು ಹೇಳಿದ ಖಾರಾಡಿ ಅವರು, 2024 ರ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರಧಾನಿ ಮೋದಿಗೆ ಮತ ನೀಡುವಂತೆ ಜನರನ್ನು ಕೋರಿದರು.

    ಕೇಂದ್ರವು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 200 ರೂಪಾಯಿ ಕಡಿತಗೊಳಿಸಿದೆ. ರಾಜಸ್ಥಾನದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರ ಈಗ ಉಜ್ವಲ ಯೋಜನೆಯಡಿ ಜನರಿಗೆ 450 ರೂಪಾಯಿಗೆ ಸಿಲಿಂಡರ್‌ಗಳನ್ನು ಲಭ್ಯವಾಗುವಂತೆ ಮಾಡುತ್ತಿದೆ ಎಂದು ಅವರು ಹೇಳಿದರು.

    ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ಕೂಡ ವೇದಿಕೆಯಲ್ಲಿದ್ದರು. ಉದಯಪುರದ ನೈ ಗ್ರಾಮದಲ್ಲಿ “ವಿಕಸಿತ ಭಾರತ್ ಸಂಕಲ್ಪ ಯಾತ್ರೆ”ಯ ಕಾರ್ಯಕ್ರಮ ಇದಾಗಿತ್ತು.

    ಯಾರು ಖಾರಾಡಿ?:

    ಖಾರಾಡಿ ಅವರಿಗೆ ಎಂಟು ಮಕ್ಕಳಿದ್ದಾರೆ. ನಾಲ್ವರು ಗಂಡು ಮತ್ತು ಹೆಚ್ಚು ಹೆಣ್ಣು ಮಕ್ಕಳು. ಇಬ್ಬರು ಹೆಂಡತಿಯರಿದ್ದಾರೆ. ಇಡೀ ಕುಟುಂಬವು ಉದಯಪುರದ ಕೋಟ್ಡಾ ತಹಸಿಲ್‌ನಿಂದ ಅಂದಾಜು 3 ಕಿಲೋಮೀಟರ್ ದೂರದಲ್ಲಿರುವ ನೀಚಲಾ ತಾಲಾ ಗ್ರಾಮದಲ್ಲಿ ವಾಸಿಸುತ್ತಿದೆ.

    2023 ರ ವಿಧಾನಸಭೆ ಚುನಾವಣೆಯಲ್ಲಿ ಝಾಡೋಲ್‌ನಿಂದ ಖಾರಾಡಿ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. 15ನೇ ರಾಜಸ್ಥಾನ ವಿಧಾನಸಭೆಯಲ್ಲಿ 2022ರಲ್ಲಿ ಅತ್ಯುತ್ತಮ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಖಾರಾಡಿ ಅವರು ಇತ್ತೀಚೆಗೆ ರಾಜ್ಯದಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇರ್ಪಡೆಗೊಂಡರು.

    ಭಾರತವಾಗಲಿದೆ 35 ಟ್ರಿಲಿಯನ್ ಡಾಲರ್ ಆರ್ಥಿಕತೆ: ಮುಕೇಶ್ ಅಂಬಾನಿ ಹೇಳಿದ್ದರ ಅರ್ಥವೇನು?

    ಅವನನ್ನು ಕೊಲ್ಲಲಿಲ್ಲ, ನಾನು ಎಚ್ಚರವಾದಾಗ ಮಗು ಸತ್ತಿತ್ತು: ಪೊಲೀಸರ ಮುಂದೆ ಬೆಂಗಳೂರಿನ ಸಿಇಒ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts