More

    ಶಿಬಿರದ ಜತೆಗೆ ಮಕ್ಕಳಲ್ಲಿ ನೈಜ ಸಂಸ್ಕಾರ – ಭಾರತಿ ವಿ.ಮಯ್ಯ

    ವಿಜಯವಾಣಿ ಸುದ್ದಿಜಾಲ ಕೋಟ

    ಮಕ್ಕಳು ಶಿಬಿರಗಳಲ್ಲಿ ಪಾಲ್ಗೊಳ್ಳುವುದರ ಜತೆಗೆ ಪಾಲಕರು ಮನೆಯಲ್ಲಿ ನೈಜ ಸಂಸ್ಕಾರ ನೀಡುವಂತಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಮಣೂರು ಭಾರತಿ ವಿ.ಮಯ್ಯ ಹೇಳಿದರು.

    ಕೋಟ ಗ್ರಾಪಂ ಸಭಾಂಗಣದಲ್ಲಿ ಇಂಡಿಕಾ ಕಲಾ ಬಳಗ ಮಣೂರು ಪಡುಕರೆ, ಕೋಟ ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲ, ಕೋಟ ಗ್ರಾಪಂ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಸಹಯೋಗದೊಂದಿಗೆ ಮೂರು ದಿನಗಳ ಬೇಸಿಗೆ ಶಿಬಿರ ‘ಚಿತ್ತಾರ ಚಿಣ್ಣರ ಚಿಲಿಪಿಲಿ-2024’ ಸಮಾರೋಪದಲ್ಲಿ ಮಾತನಾಡಿದರು.

    ಇಂಡಿಕಾ ಕಲಾ ಬಳಗದ ಸಂತೋಷ್ ಕುಮಾರ್ ಕೋಟ ಅಧ್ಯಕ್ಷತೆ ವಹಿಸಿದ್ದರು. ಕೋಟ ಗ್ರಾಪಂ ಕಾರ್ಯದರ್ಶಿ ಶೇಖರ್ ಮರವಂತೆ, ಉಡುಪಿ ಪೋಲಿಸ್ ಇಲಾಖೆಯ ರವಿ ಕುಮಾರ್, ಪಂಚವರ್ಣ ಯುವಕ ಮಂಡಲ ಸದಸ್ಯ ಮಹೇಶ್ ಕುಮಾರ್ ಬೆಳಗಾವಿ, ಪಂಚವರ್ಣ ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲ ಸಂಚಾಲಕಿ ಸುಜಾತಾ ಬಾಯರಿ ಸ್ವಾಗತಿಸಿ, ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು.

    ಅಭಿನಂದನೆ, ಪರಿಕರ ವಿತರಣೆ

    ಮಹಿಳಾ ಮತ್ತು ಮಕ್ಕಳ ಹೋರಾಟಗಾರ್ತಿ ತಿಲೋತ್ತಮೆ ನಾಯಕ್ ಪಾಲಕರಿಗೆ ಹಾಗೂ ಮಕ್ಕಳಿಗೆ ಉಪಯುಕ್ತ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾದ ಕುಮಾರ್ ವಕ್ವಾಡಿ, ಜಯಲಕ್ಷ್ಮೀ ಕೋಟತಟ್ಟು ಅವರನ್ನು ಅಭಿನಂದಿಸಲಾಯಿತು. ಗೀತಾನಂದ ಫೌಂಡೇಶನ್‌ನಿಂದ ಮಕ್ಕಳಿಗೆ ಸರ್ಟಿಫಿಕೆಟ್, ಬಹುಮಾನ ಹಾಗೂ ಡ್ರಾಯಿಂಗ್ ಪರಿಕರ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts