More

    ರಾಷ್ಟ್ರೀಯ ಹೆದ್ದಾರಿ ಬದಿ ಕಾಡಾನೆ ಪ್ರತ್ಯಕ್ಷ

    ಬೆಳ್ತಂಗಡಿ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ಮಂಗಳವಾರ ಮುಂಜಾನೆ ರಸ್ತೆ ಬದಿ ಕಾಡಾನೆ ಕಂಡುಬಂದಿದೆ. ಮುಂಡಾಜೆಯಿಂದ ಕಕ್ಕಿಂಜೆ ಕಡೆ ತೆರಳುತ್ತಿದ್ದ ಬೈಕ್ ಮೆಕಾನಿಕ್ ಒಬ್ಬರು ಬೆಳಗ್ಗೆ 9 ಗಂಟೆ ಸುಮಾರಿಗೆ ಮುಂಡಾಜೆಯ ಕಾಪು ಬಳಿ ಹೆದ್ದಾರಿ ಬದಿಯ ಪೊದೆಯಲ್ಲಿ ನಿಂತುಕೊಂಡಿದ್ದ ಕಾಡಾನೆಯನ್ನು ಕಂಡಿದ್ದಾರೆ. ತಕ್ಷಣ ಈ ವಿಚಾರವನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದು ಚಿಬಿದ್ರೆ ವಿಭಾಗದ ಡಿಆರ್‌ಎಫ್‌ಒ ಭವಾನಿ ಶಂಕರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

    ಕಾಡಾನೆ ರಸ್ತೆಯ ಇನ್ನೊಂದು ಬದಿ ಇರುವ ಅರಣ್ಯ ಇಲಾಖೆಯ ಹಳೇ ನರ್ಸರಿ ಮೂಲಕ ಪ್ರವೇಶಿಸಿ ಮೃತ್ಯುಂಜಯ ನದಿಯನ್ನು ದಾಟಿ ದುಂಬೆಟ್ಟು ಕಡೆ ಹೋಗಿರುವ ಗುರುತುಗಳು ಪತ್ತೆಯಾಗಿವೆ. ಎರಡು ದಿನಗಳ ಹಿಂದೆ ಪುದುವೆಟ್ಟು ಸಮೀಪ ರಾತ್ರಿ ಕಾರು ಚಾಲಕನಿಗೆ ಕಂಡುಬಂದಿದ್ದ ಕಾಡಾನೆ ಬಳಿಕ ನೇರ್ತನೆ, ಕಲ್ಮಂಜದಲ್ಲಿ ಸುಳಿದಾಡಿತ್ತು. ಅದೇ ಆನೆ ಮುಂಡಾಜೆಯಲ್ಲಿ ಕಂಡುಬಂದಿರುವ ಶಂಕೆ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts