More

    ಮೇಲ್ಛಾವಣಿ ಸೌರ ವಿದ್ಯುತ್ ಸಬ್ಸಿಡಿ ಹೆಚ್ಚಳ ; ನಿಮ್ಮ ಮನೆಯಲ್ಲಿ ಅಳವಡಿಸಿಕೊಂಡರೆ ಲಾಭದಾಯಕ

    ನವದೆಹಲಿ: ಸೌರ ಯೋಜನೆಗಳಿಗೆ ಉತ್ತೇಜನ ನೀಡಲು ಮತ್ತು ಸೌರ ಫಲಕಗಳ ಹೆಚ್ಚಿನ ವೆಚ್ಚವನ್ನು ಸರಿದೂಗಿಸಲು ಮೇಲ್ಛಾವಣಿಯ ಸೌರ ಕಾರ್ಯಕ್ರಮದ (ರೂಫ್​ಟಾಪ್​ ಸೋಲಾರ್​ ಪ್ರೊಗ್ರಾಂ) ಅಡಿಯಲ್ಲಿ ವಸತಿ ವಲಯಕ್ಕೆ ಕೇಂದ್ರ ಸರ್ಕಾರವು ಹಣಕಾಸು ನೆರವನ್ನು ಹೆಚ್ಚಿಸಿದೆ.

    ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಅಧಿಸೂಚನೆಯ ಪ್ರಕಾರ, 3 ಕಿಲೋ ವಾಟ್​ಸಾಮರ್ಥ್ಯದವರೆಗೆ ಸಬ್ಸಿಡಿಯನ್ನು ಪ್ರತಿ ಕಿಲೋ ವಾಟ್​ಗೆ ರೂ 18,000ಕ್ಕೆ ಏರಿಸಲಾಗಿದೆ, ಇದು ಶೇಕಡಾ 23.4ರಷ್ಟು ಹೆಚ್ಚಾಗಿದೆ. ಇದುವರೆಗೆ ಈ ನೆರವು 14,588 ರೂಪಾಯಿ ಇದೆ.

    3 ಕಿಲೋ ವಾಟ್​ಗಿಂತ ಹೆಚ್ಚಿನ ಮತ್ತು 10 ಕಿಲೋ ವಾಟ್​ವರೆಗಿನ ಸಾಮರ್ಥ್ಯಕ್ಕೆ ನೆರವನ್ನು ಪ್ರತಿ ಕಿಲೋ ವಾಟ್​ಗೆ 7,294 ರಿಂದ 9,000 ರೂಪಾಯಿಗೆ ಹೆಚ್ಚಿಸಲಾಗಿದೆ.

    ಮೇಲ್ಛಾವಣಿ ಯೋಜನೆಗಳಿಗೆ ಕೇಂದ್ರ ಹಣಕಾಸು ನೆರವು ಮಾನದಂಡದಲ್ಲಿ ಕೊನೆಯ ಪರಿಷ್ಕರಣೆಯನ್ನು ಒಂದು ವರ್ಷದ ಹಿಂದೆ ಮಾಡಲಾಗಿತ್ತು.

    ಹೊಸ ದರಗಳು ಜನವರಿ 20 ರ ನಂತರ ಮುಕ್ತಾಯವಾಗುವ ಎಲ್ಲಾ ಭವಿಷ್ಯದ ಬಿಡ್‌ಗಳಿಗೆ ಮತ್ತು ಜನವರಿ 5 ರ ನಂತರ ಸಲ್ಲಿಸಲಾಗುವ ಕ್ಲೈಮ್‌ಗಳಿಗೆ ಅನ್ವಯಿಸುತ್ತದೆ.

    ಇಂಧನ ಕುರಿತ ಸಮಿತಿಯ ನವೆಂಬರ್‌ನಲ್ಲಿ ಸಲ್ಲಿಸಿರುವ ಪರಿಸರ ಮತ್ತು ನೀರು ವರದಿಯ ಪ್ರಕಾರ, ಭಾರತದಾದ್ಯಂತ 25 ಕೋಟಿ ಕುಟುಂಬಗಳು 637 ಗಿಗಾ ವಾಟ್​ ಸೌರಶಕ್ತಿ ಸಾಮರ್ಥ್ಯವನ್ನು ಛಾವಣಿಯ ಮೇಲೆ ನಿಯೋಜಿಸುವ ಸಾಮರ್ಥ್ಯವನ್ನು ಹೊಂದಿವೆ.

    ಪ್ರಸ್ತುತ, ಭಾರತದಲ್ಲಿ 11 ಗಿಗಾ ವಾಟ್​ ಛಾವಣಿಯ ಸೌರ ಸಾಮರ್ಥ್ಯವನ್ನು ಸ್ಥಾಪಿಸಲಾಗಿದೆ, ಇದರಲ್ಲಿ 2.7 ಗಿಗಾ ವಾಟ್​ ಮಾತ್ರ ವಸತಿ ವಲಯದಲ್ಲಿದೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಬಂಡವಾಳ ಸಬ್ಸಿಡಿಯೊಂದಿಗೆ, ಸಾಮರ್ಥ್ಯವು 32 GW ಗೆ ಹೆಚ್ಚಾಗುತ್ತದೆ ಎಂದು ವರದಿ ಹೇಳಿದೆ.

    ವಿದ್ಯುತ್ ವಿತರಣಾ ಕಂಪನಿಗಳು ಮೇಲ್ಛಾವಣಿಯ ಸೌರ ಯೋಜನೆಗಳಿಂದ ನವೀಕರಿಸಬಹುದಾದ ಇಂಧನವನ್ನು ಖರೀದಿಸುವುದು ಕಡ್ಡಾಯವಾಗಿದೆ. ಹೀಗಾಗಿ, ಸಬ್ಸಿಡಿ ನೆರವಿನ ಮೂಲಕ ಮನೆ ಮೇಲ್ಛಾವಣಿ ಸೌರ ವಿದ್ಯುತ್​ ಉತ್ಪಾದನೆಯನ್ನು ಮನೆ ಬಳಕೆಗೆ ಬಳಸಿಕೊಂಡು, ಉಳಿದುದನ್ನು ವಿದ್ಯುತ್​ ವಿತರಣಾ ಕಂಪನಿಗಳಿಗೆ ಮಾರುವ ಮೂಲಕ ಲಾಭ ಗಳಿಸಬಹುದು.

    ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಸೋನಿಯಾ, ಖರ್ಗೆ: ಆಹ್ವಾನ ತಿರಸ್ಕರಿಸಿದ್ದಕ್ಕೆ ಕಾಂಗ್ರೆಸ್​ ನೀಡಿದ ಕಾರಣಗಳು ಹೀಗಿವೆ…

    ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಬಿಗ್​ ರಿಲೀಫ್: 3 ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು

    ಹೆಚ್ಚು ಮಕ್ಕಳಿಗೆ ಜನ್ಮ ನೀಡಿ, ಮೋದಿ ಮನೆ ಕಟ್ಟಿಕೊಡುತ್ತಾರೆ: ಹೀಗೆ ಹೇಳಿದ ಇಬ್ಬರು ಹೆಂಡಂದಿರು, 8 ಮಕ್ಕಳಿರುವ ಸಚಿವ ಯಾರು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts