More

    4 ವರ್ಷಗಳಲ್ಲಿ 1 ಲಕ್ಷವಾಯ್ತು 2.20 ಕೋಟಿ ರೂಪಾಯಿ: ಸೋಲಾರ್ ಕಂಪನಿ ಷೇರು ಈಗ ಮತ್ತೆ ಅಪ್ಪರ್​ ಸರ್ಕ್ಯೂಟ್​ ಹಿಟ್​

    ಮುಂಬೈ: ಸೋಲಾರ್ ಕಂಪನಿ ಕೆಪಿಐ ಗ್ರೀನ್ ಎನರ್ಜಿ ಲಿಮಿಟೆಡ್​ (KPI Green Energy Ltd.) ಷೇರುಗಳು ಏರಿಕೆ ಕಂಡಿವೆ. ಗುರುವಾರದಂದು ಕೆಪಿಐ ಗ್ರೀನ್ ಎನರ್ಜಿ ಷೇರುಗಳ ಬೆಲೆ ಶೇ. 5ರಷ್ಟು ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್​ ಹಿಟ್​ ಆಗಿದೆ. ಇಂಟ್ರಾ ಡೇ ವಹಿವಾಟಿನಲ್ಲಿ ಈ ಷೇರುಗಳ ಬೆಲೆ 1,773.35 ರೂ. ತಲುಪಿತು.

    ಈ ಕಂಪನಿಯ ಷೇರುಗಳು 4 ವರ್ಷಗಳಲ್ಲಿ ಹೂಡಿಕೆದಾರರನ್ನು ಶ್ರೀಮಂತರನ್ನಾಗಿ ಮಾಡಿದೆ. ಕೆಪಿಐ ಗ್ರೀನ್ ಎನರ್ಜಿ ಷೇರುಗಳು 4 ವರ್ಷಗಳಲ್ಲಿ 8 ರಿಂದ 1700 ರೂ.ಗೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಹೂಡಿಕೆದಾರರಿಗೆ ಶೇಕಡಾ 22000 ಕ್ಕಿಂತ ಹೆಚ್ಚಿನ ಆದಾಯವನ್ನು ನೀಡಿವೆ.

    ಈ ಷೇರುಗಳ ಬೆಲೆ ಕಳೆದ 4 ವರ್ಷಗಳಲ್ಲಿ ವೇಗವಾಗಿ ಬೆಳೆದಿದೆ. ಏಪ್ರಿಲ್ 17, 2020 ರಂದು ಕಂಪನಿಯ ಷೇರುಗಳ ಬೆಲೆ 8 ರೂ. ಇತ್ತು. ಈಗ ರೂ 1773.35 ತಲುಪಿದೆ. ಈ ಷೇರುಗಳ ಬೆಲೆ ಕಳೆದ 4 ವರ್ಷಗಳಲ್ಲಿ 22066 ಪ್ರತಿಶತದಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಯಾರಾದರೂ ಈ ಷೇರುಗಳಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ, ಈ ಷೇರುಗಳ ಮೊತ್ತ ಈಗ 2.20 ಕೋಟಿ ರೂಪಾಯಿ ಆಗುತ್ತಿತ್ತು.

    ಕಂಪನಿಯ ಷೇರುಗಳ 52 ವಾರಗಳ ಗರಿಷ್ಠ ಬೆಲೆ ರೂ 1895.95 ಹಾಗೂ ಕನಿಷ್ಠ ಬೆಲೆ 309 ರೂ. ಇದೆ. ಈ ಷೇರುಗಳ ಸಾರ್ವಕಾಲಿಕ ಗರಿಷ್ಠ ಬೆಲೆ ರೂ 1,890 ಹಾಗೂ ಕನಿಷ್ಠ ಬೆಲೆ ರೂ 38.77 ಇದೆ.

    ಸ್ಮಾಲ್‌ಕ್ಯಾಪ್ ಕಂಪನಿಯಾಗಿರುವ ಕೆಪಿಐ ಗ್ರೀನ್ ಎನರ್ಜಿಯ ಷೇರುಗಳ ಬೆಲೆ ಕಳೆದ ಒಂದು ವರ್ಷದಲ್ಲಿ 457 ಪ್ರತಿಶತದಷ್ಟು ಜಿಗಿದಿದೆ. 18 ಏಪ್ರಿಲ್ 2023 ರಂದು ಕಂಪನಿಯ ಷೇರುಗಳ ಬೆಲೆ 318.77 ರೂ. ಕಳೆದ 6 ತಿಂಗಳಲ್ಲಿ ಷೇರುಗಳ ಬೆಲೆ ಶೇಕಡಾ 207ರಷ್ಟು ಹೆಚ್ಚಾಗಿದೆ. ಈ ಷೇರುಗಳ ಬೆಲೆ 18 ಅಕ್ಟೋಬರ್ 2023 ರಂದು ರೂ 577.70 ಇತ್ತು, ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ, ಕೆಪಿಐ ಗ್ರೀನ್ ಎನರ್ಜಿ ಷೇರುಗಳ ಬೆಲೆ ಶೇಕಡಾ 86 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.

    ಈ ವರ್ಷದ ಫೆಬ್ರವರಿ 26 ರಂದು 52 ವಾರಗಳ ಗರಿಷ್ಠ ಬೆಲೆ ರೂ. 1,895.95 ಅನ್ನು ತಲುಪಿದ ನಂತರ, ಶೇಕಡಾ 12 ಕ್ಕಿಂತ ಹೆಚ್ಚು ಕುಸಿತ ಕಂಡಿತ್ತು. ಆದರೆ, ಏಪ್ರಿಲ್‌ನಲ್ಲಿ ಮತ್ತೆ ಲಾಭ ಕಂಡು, 16 ಪ್ರತಿಶತದಷ್ಟು ಏರಿಕೆಯಾಗಿದೆ,

    ಶುದ್ಧ ಇಂಧನ ಮೂಲಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ಕೆಪಿಐ ಗ್ರೀನ್ ಎನರ್ಜಿಯಂತಹ ನವೀಕರಿಸಬಹುದಾದ ಇಂಧನ ಸಂಸ್ಥೆಗಳಿಗೆ ತಮ್ಮ ಮಾರುಕಟ್ಟೆ ಉಪಸ್ಥಿತಿಯನ್ನು ವಿಸ್ತರಿಸಲು ಮತ್ತು ಆದಾಯದ ಸ್ಟ್ರೀಮ್‌ಗಳನ್ನು ಹೆಚ್ಚಿಸಲು ಭರವಸೆಯ ಅವಕಾಶವನ್ನು ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ.

    ಮುಂಬೈ:
    ಸೋಲಾರ್ ಕಂಪನಿ ಕೆಪಿಐ ಗ್ರೀನ್ ಎನರ್ಜಿ ಲಿಮಿಟೆಡ್​ (KPI Green Energy Ltd.) ಷೇರುಗಳು ಏರಿಕೆ ಕಂಡಿವೆ. ಗುರುವಾರದಂದು ಕೆಪಿಐ ಗ್ರೀನ್ ಎನರ್ಜಿ ಷೇರುಗಳ ಬೆಲೆ ಶೇ. 5ರಷ್ಟು ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್​ ಹಿಟ್​ ಆಗಿದೆ. ಇಂಟ್ರಾ ಡೇ ವಹಿವಾಟಿನಲ್ಲಿ ಈ ಷೇರುಗಳ ಬೆಲೆ 1,773.35 ರೂ. ತಲುಪಿತು.

    ಈ ಕಂಪನಿಯ ಷೇರುಗಳು 4 ವರ್ಷಗಳಲ್ಲಿ ಹೂಡಿಕೆದಾರರನ್ನು ಶ್ರೀಮಂತರನ್ನಾಗಿ ಮಾಡಿದೆ. ಕೆಪಿಐ ಗ್ರೀನ್ ಎನರ್ಜಿ ಷೇರುಗಳು 4 ವರ್ಷಗಳಲ್ಲಿ 8 ರಿಂದ 1700 ರೂ.ಗೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಹೂಡಿಕೆದಾರರಿಗೆ ಶೇಕಡಾ 22000 ಕ್ಕಿಂತ ಹೆಚ್ಚಿನ ಆದಾಯವನ್ನು ನೀಡಿವೆ.

    ಈ ಷೇರುಗಳ ಬೆಲೆ ಕಳೆದ 4 ವರ್ಷಗಳಲ್ಲಿ ವೇಗವಾಗಿ ಬೆಳೆದಿದೆ. ಏಪ್ರಿಲ್ 17, 2020 ರಂದು ಕಂಪನಿಯ ಷೇರುಗಳ ಬೆಲೆ 8 ರೂ. ಇತ್ತು. ಈಗ ರೂ 1773.35 ತಲುಪಿದೆ. ಈ ಷೇರುಗಳ ಬೆಲೆ ಕಳೆದ 4 ವರ್ಷಗಳಲ್ಲಿ 22066 ಪ್ರತಿಶತದಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಯಾರಾದರೂ ಈ ಷೇರುಗಳಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ, ಈ ಷೇರುಗಳ ಮೊತ್ತ ಈಗ 2.20 ಕೋಟಿ ರೂಪಾಯಿ ಆಗುತ್ತಿತ್ತು.

    ಕಂಪನಿಯ ಷೇರುಗಳ 52 ವಾರಗಳ ಗರಿಷ್ಠ ಬೆಲೆ ರೂ 1895.95 ಹಾಗೂ ಕನಿಷ್ಠ ಬೆಲೆ 309 ರೂ. ಇದೆ. ಈ ಷೇರುಗಳ ಸಾರ್ವಕಾಲಿಕ ಗರಿಷ್ಠ ಬೆಲೆ ರೂ 1,890 ಹಾಗೂ ಕನಿಷ್ಠ ಬೆಲೆ ರೂ 38.77 ಇದೆ.

    ಸ್ಮಾಲ್‌ಕ್ಯಾಪ್ ಕಂಪನಿಯಾಗಿರುವ ಕೆಪಿಐ ಗ್ರೀನ್ ಎನರ್ಜಿಯ ಷೇರುಗಳ ಬೆಲೆ ಕಳೆದ ಒಂದು ವರ್ಷದಲ್ಲಿ 457 ಪ್ರತಿಶತದಷ್ಟು ಜಿಗಿದಿದೆ. 18 ಏಪ್ರಿಲ್ 2023 ರಂದು ಕಂಪನಿಯ ಷೇರುಗಳ ಬೆಲೆ 318.77 ರೂ. ಕಳೆದ 6 ತಿಂಗಳಲ್ಲಿ ಷೇರುಗಳ ಬೆಲೆ ಶೇಕಡಾ 207ರಷ್ಟು ಹೆಚ್ಚಾಗಿದೆ. ಈ ಷೇರುಗಳ ಬೆಲೆ 18 ಅಕ್ಟೋಬರ್ 2023 ರಂದು ರೂ 577.70 ಇತ್ತು, ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ, ಕೆಪಿಐ ಗ್ರೀನ್ ಎನರ್ಜಿ ಷೇರುಗಳ ಬೆಲೆ ಶೇಕಡಾ 86 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.

    ಈ ವರ್ಷದ ಫೆಬ್ರವರಿ 26 ರಂದು 52 ವಾರಗಳ ಗರಿಷ್ಠ ಬೆಲೆ ರೂ. 1,895.95 ಅನ್ನು ತಲುಪಿದ ನಂತರ, ಶೇಕಡಾ 12 ಕ್ಕಿಂತ ಹೆಚ್ಚು ಕುಸಿತ ಕಂಡಿತ್ತು. ಆದರೆ, ಏಪ್ರಿಲ್‌ನಲ್ಲಿ ಮತ್ತೆ ಲಾಭ ಕಂಡು, 16 ಪ್ರತಿಶತದಷ್ಟು ಏರಿಕೆಯಾಗಿದೆ,

    ಶುದ್ಧ ಇಂಧನ ಮೂಲಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ಕೆಪಿಐ ಗ್ರೀನ್ ಎನರ್ಜಿಯಂತಹ ನವೀಕರಿಸಬಹುದಾದ ಇಂಧನ ಸಂಸ್ಥೆಗಳಿಗೆ ತಮ್ಮ ಮಾರುಕಟ್ಟೆ ಉಪಸ್ಥಿತಿಯನ್ನು ವಿಸ್ತರಿಸಲು ಮತ್ತು ಆದಾಯದ ಸ್ಟ್ರೀಮ್‌ಗಳನ್ನು ಹೆಚ್ಚಿಸಲು ಭರವಸೆಯ ಅವಕಾಶವನ್ನು ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ.

    ಟೆಕ್​ ಷೇರುಗಳ ಬೆಲೆ ಕುಸಿತ: ಈ ಸ್ಟಾಕ್​ಗಳಲ್ಲಿ ಹೂಡಿಕೆದಾರರಿಗೆ ಲಾಭ ಮಾಡಿಕೊಳ್ಳುವ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts