More

    ಮಾರುಕಟ್ಟೆಯಲ್ಲಿ ರೂ. 421 ಇರುವ ಷೇರು ರೂ. 300ಕ್ಕೆ ಲಭ್ಯ: ಕಂಪನಿಯೇ ಕಡಿಮೆ ಬೆಲೆಗೆ ಸ್ಟಾಕ್​ ನೀಡುತ್ತಿರುವುದೇಕೆ?

    ಮುಂಬೈ: ಹಣಕಾಸು ವಲಯದ ಕಂಪನಿ ಐಐಎಫ್‌ಎಲ್ ಫೈನಾನ್ಸ್ ಲಿಮಿಟೆಡ್ ರೈಟ್ಸ್​ ಇಶ್ಯೂ ಮೂಲಕ ಪ್ರತಿ ಷೇರಿಗೆ 300 ರೂಪಾಯಿ ದರದಲ್ಲಿ ಷೇರುಗಳನ್ನು ವಿತರಿಸಲು ಮುಂದಾಗಿದೆ. ಈಗ ಮಾರುಕಟ್ಟೆಯಲ್ಲಿ ಈ ಷೇರುಗಳ ಬೆಲೆ 421.70 ರೂ. ಇದೆ.

    ಈ ಮೂಲಕ 1,271.83 ಕೋಟಿ ರೂಪಾಯಿ ಸಂಗ್ರಹಿಸುವ ಯೋಜನೆಯನ್ನು ನಿರ್ದೇಶಕ ಮಂಡಳಿ ಅನುಮೋದಿಸಿದೆ ಎಂದು ಕಂಪನಿಯ ಹೇಳಿದೆ.

    ಕಳೆದ ತಿಂಗಳು, ಕಂಪನಿಯ ನಿರ್ದೇಶಕರ ಮಂಡಳಿಯು ದಾಖಲೆ ದಿನಾಂಕದಂದು ಅಸ್ತಿತ್ವದಲ್ಲಿರುವ ಅರ್ಹ ಷೇರುದಾರರಿಗೆ ಅವರ ಷೇರುಗಳಿಗೆ ಅನುಗುಣವಾಗಿ ಷೇರುಗಳನ್ನು ವಿತರಿಸುವ ಮೂಲಕ 1,500 ಕೋಟಿ ರೂ.ವರೆಗೆ ಸಂಗ್ರಹಿಸಲು ಅನುಮೋದನೆ ನೀಡಿತ್ತು.

    ರಿಸರ್ವ್ ಬ್ಯಾಂಕ್‌ನಿಂದ ಕ್ರಮವನ್ನು ಎದುರಿಸುತ್ತಿರುವ ಈ ಕಂಪನಿಯು ಷೇರು ಮಾರುಕಟ್ಟೆಗೆ ಸಲ್ಲಿಸಿದ ಹೇಳಿಕೆಯಲ್ಲಿ, ಕಂಪನಿಯ ನಿರ್ದೇಶಕರ ಮಂಡಳಿಯು 4,23,94,270 ಸಂಪೂರ್ಣವಾಗಿ ಪಾವತಿಸಿದ ಈಕ್ವಿಟಿ ಷೇರುಗಳನ್ನು ಹಂಚಿಕೆ ಮಾಡುವ ಮೂಲಕ 1,271.83 ಕೋಟಿ ರೂ.ವರೆಗೆ ಸಂಗ್ರಹಿಸಲು ಅನುಮೋದಿಸಿದೆ ಎಂದು ತಿಳಿಸಿದೆ.

    ಈ ಸಭೆಯಲ್ಲಿ, ಪ್ರತಿ ಯೂನಿಟ್‌ಗೆ ರೂ. 298 ಪ್ರೀಮಿಯಂನೊಂದಿಗೆ ಪ್ರತಿ ಷೇರಿಗೆ ರೂ 300 ರ ಬೆಲೆಯನ್ನು ಅನುಮೋದಿಸಲಾಗಿದೆ. ರೈಟ್ಸ್ ಇಶ್ಯೂ ಷೇರುಗಳ ಹಂಚಿಕೆ ದಿನಾಂಕವನ್ನು ಏಪ್ರಿಲ್ 23, 2024 ಎಂದು ನಿಗದಿಪಡಿಸಲಾಗಿದೆ.

    ಷೇರುದಾರರು ತಾವು ಹೊಂದಿರುವ ಪ್ರತಿ ಒಂಬತ್ತು ಷೇರುಗಳಿಗೆ ಒಂದು ರೈಟ್ಸ್​ ಇಶ್ಯೂ ಷೇರನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಎಪ್ರಿಲ್ 30 ರಿಂದ ಮೇ 14 ರವರೆಗೆ ಈ ಷೇರು ಖರೀದಿಸಲು ಅವಕಾಶವಿದೆ.

    ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿ (ಎನ್‌ಬಿಎಫ್‌ಸಿ) ಐಐಎಫ್‌ಎಲ್, ಚಿನ್ನದ ಸಾಲಗಳನ್ನು ಅನುಮೋದಿಸದಂತೆ ಅಥವಾ ವಿತರಿಸುವುದರ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ಬಂಧ ಹೇರಿದೆ. ಕಳೆದ ತಿಂಗಳು, ಆರ್‌ಬಿಐ ಚಿನ್ನದ ಶುದ್ಧತೆಯನ್ನು ಪರೀಕ್ಷಿಸುವಲ್ಲಿ ಮತ್ತು ಪ್ರಮಾಣೀಕರಿಸುವಲ್ಲಿ ಗಂಭೀರವಾದ ಲೋಪದೋಷಗಳು ಮತ್ತು ಹಲವಾರು ಮೇಲ್ವಿಚಾರಣಾ ಆತಂಕಗಳ ಹಿನ್ನೆಲೆಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಚಿನ್ನದ ಸಾಲ ನೀಡುವುದನ್ನು ನಿಲ್ಲಿಸಲು ಕಂಪನಿಗೆ ಸೂಚಿಸಿದೆ.

    ಮಂಗಳವಾರದಂದು ಈ ಷೇರುಗಳ ಬೆಲೆ 2.35% ರಷ್ಟು ಕುಸಿದು 421.70 ರೂ. ತಲುಪಿದೆ. ಅಕ್ಟೋಬರ್ 16, 2023 ರಂದು ಈ ಷೇರಿನ ಬೆಲೆ ರೂ 704.20 ತಲುಪಿತ್ತು. ಇದು 52 ವಾರಗಳ ಗರಿಷ್ಠ ಬೆಲೆಯಾಗಿದೆ. ಮಾರ್ಚ್ 27, 2024 ರಂದು ಈ ಷೇರಿನ ಬೆಲೆ ರೂ 313.25 ಕ್ಕೆ ಕುಸಿದಿತ್ತು. ಇದು ಈ ಷೇರುಗಳ 52 ವಾರಗಳ ಕನಿಷ್ಠ ಬೆಲೆಯಾಗಿದೆ. ಈ ಷೇರುಗಳ ಸಾರ್ವಕಾಲಿಕ ಗರಿಷ್ಠ ಬೆಲೆ ರೂ. 874 ಹಾಗೂ ಕನಿಷ್ಠ ಬೆಲೆ ರೂ. 15.34 ಇದೆ.

     

    1 ಲಕ್ಷವಾಯ್ತು 6.89 ಕೋಟಿ ರೂಪಾಯಿ: 10 ಬಾರಿ ಬೋನಸ್ ಷೇರು ನೀಡಿದ ಕಂಪನಿಯಿಂದ ಹೂಡಿಕೆದಾರರಿಗೆ ಲಾಭದ ಸುರಿಮಳೆ

    ಪಿಎಫ್​ ಖಾತೆಯಿಂದ ಹಣ ಹಿಂತೆಗೆದುಕೊಳ್ಳುವ ನಿಯಮ ಬದಲು: ವಿತ್​ಡ್ರಾವಲ್​ ಮಿತಿ ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts