More

    ಸ್ಮಾಲ್ ಫೈನಾನ್ಸ್ ಬ್ಯಾಂಕ್ ಷೇರು ಖರೀದಿಸಿ: ಹೀಗೆಂದು ಎಸ್​ಬಿಐ ಸೆಕ್ಯುರಿಟೀಸ್​ ಸಲಹೆ ನೀಡಿದ್ದೇಕೆ?

    ಮುಂಬೈ: ಏಪ್ರಿಲ್‌ನಲ್ಲಿ ಕೆಲವು ಸಣ್ಣ ಹಣಕಾಸು ಬ್ಯಾಂಕುಗಳು (SFB) ಷೇರು ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನ ನೀಡಿದವು. ಮಾರ್ಚ್ ತ್ರೈಮಾಸಿಕದಲ್ಲಿ ತಮ್ಮ ವ್ಯಾಪಾರ ನವೀಕರಣಗಳಿಂದ ಉತ್ತೇಜಿತಗೊಂಡಿವೆ. ಈ ಬ್ಯಾಂಕುಗಳು ಮುಂಗಡಗಳು ಮತ್ತು ಠೇವಣಿಗಳೆರಡರಲ್ಲೂ ಎರಡಂಕಿಯ ಬೆಳವಣಿಗೆಯನ್ನು ಸಾಧಿಸಿವೆ

    ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಷೇರನ್ನು ರೂ. 227.8 ಗುರಿ ಬೆಲೆಯೊಂದಿಗೆ ‘ಖರೀದಿ’ಸಲು ಬ್ರೋಕರೇಜ್ ಸಂಸ್ಥೆ ಎಸ್‌ಬಿಐ ಸೆಕ್ಯುರಿಟೀಸ್ ಶಿಫಾರಸು ಮಾಡಿದೆ. ಪ್ರಸ್ತುತು ಈ ಷೇರಿ ಬೆಲೆ 193.10 ರೂ. ಇದೆ. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ ರೂ. 296.35 ಇದೆ.

    ಸೂರ್ಯೋದಯ ಮೈಕ್ರೋ ಫೈನಾನ್ಸ್ ಲಿಮಿಟೆಡ್ ಅನ್ನು ಜಂಟಿ ಹೊಣೆಗಾರಿಕೆ ಗುಂಪು (ಜೆಎಲ್‌ಜಿ) ಸಾಲ ನೀಡುವ ಮಾದರಿಯನ್ನು ಬಳಸಿಕೊಂಡು ನಗರ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಮಹಿಳೆಯರಿಗೆ ಸಾಲ ನೀಡಲು ಸ್ಥಾಪಿಸಲಾಗಿದೆ. ಇದು ಜನವರಿ 2017 ರಲ್ಲಿ ಸಣ್ಣ ಹಣಕಾಸು ಬ್ಯಾಂಕ್ ಆಗಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಡಿಸೆಂಬರ್​ 2023ರಲ್ಲಿ, ಈ ಬ್ಯಾಂಕ್ ತನ್ನ 672 ಶಾಖೆಗಳ ಮೂಲಕ ಮಹಾರಾಷ್ಟ್ರ, ತಮಿಳುನಾಡು ಮತ್ತು ಒಡಿಶಾ ಸೇರಿದಂತೆ ಭಾರತದಾದ್ಯಂತ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಬಲ ಅಸ್ತಿತ್ವವನ್ನು ಹೊಂದಿದೆ. ಈ ಬ್ಯಾಂಕ್​ ಡಿಸೆಂಬರ್ 2023 ರ ಹೊತ್ತಿಗೆ 26.3 ಲಕ್ಷ ಗ್ರಾಹಕರನ್ನು ನಿರ್ವಹಿಸಿದ್ದು, ರೂ. 7,600 ಕೋಟಿ ರೂ. ವಹಿವಾಟು ನಡೆಸಿದೆ.

    ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸ್ಟಾಕ್ ಕಳೆದ ಒಂದು ತಿಂಗಳಲ್ಲಿ ಅಂದಾಜು ಶೇಕಡಾ 16.55 ಮತ್ತು ಕಳೆದ ಆರು ತಿಂಗಳಲ್ಲಿ ಶೇಕಡಾ 18.91 ರಷ್ಟು ಹೆಚ್ಚಳವಾಗಿದೆ.

    ಎಸ್‌ಬಿಐ ಸೆಕ್ಯುರಿಟೀಸ್ ಬ್ರೋಕರೇಜ್ ಸಂಸ್ಥೆಯು ಸೂರ್ಯೋದಯ ಮೈಕ್ರೋ ಫೈನಾನ್ಸ್ ಸ್ಟಾಕ್‌ನಲ್ಲಿ ಏಕೆ ಹೂಡಿಕೆ ಮಾಡಬೇಕೆಂದಕ್ಕೆ ಕಾರಣಗಳನ್ನು ನೀಡಿದೆ.

    ಬ್ಯಾಂಕ್ ಕ್ರಮೇಣ ತನ್ನ ಉತ್ಪನ್ನ ಮಿಶ್ರಣವನ್ನು ವೈವಿಧ್ಯಗೊಳಿಸಿದೆ. ವಾಣಿಜ್ಯ ವಾಹನಗಳು, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSMEಗಳು), ವಸತಿ ಸಾಲಗಳು, ಹಣಕಾಸು ಮಧ್ಯವರ್ತಿ ಗುಂಪುಗಳು ಮತ್ತು ಇತರವುಗಳನ್ನು ಒಳಗೊಂಡಂತೆ ಹೊಸ ಉತ್ಪನ್ನಗಳಲ್ಲಿ ಬ್ಯಾಂಕ್ ತನ್ನ ಪಾಲನ್ನು ಹೆಚ್ಚಿಸುತ್ತಿದೆ. ಲಿಕ್ವಿಡಿಟಿ ಕವರೇಜ್ ಅನುಪಾತವು ಆಯಾ ತ್ರೈಮಾಸಿಕಗಳಿಗೆ ದೈನಂದಿನ ಸರಾಸರಿ ಆಧಾರದ ಮೇಲೆ ಡಿಸೆಂಬರ್’23ಕ್ಕೆ ಕೊನೆಗೊಂಡ ತ್ರೈಮಾಸಿಕಕ್ಕೆ ಆರೋಗ್ಯಕರವಾಗಿದೆ ಎಂದು ಬ್ರೋಕರೇಜ್​ ಸಂಸ್ಥೆ ಹೇಳಿದೆ.

    ಭಾರತೀಯ ಷೇರು ಮಾರುಕಟ್ಟೆಯಲ್ಲಿ ವಿದೇಶಿಗರ ಹೂಡಿಕೆ ಹೆಚ್ಚಳ: ಫಾರೆನ್​​ ಇನ್ವೆಸ್ಟರ್​ ಖರೀದಿಸಿದ ಸ್ಟಾಕ್​ಗಳು ಯಾವವು?

    ಷೇರು ಮಾರುಕಟ್ಟೆ ಕುಸಿತದ ನಡುವೆಯೂ ಪತಂಜಲಿ ಫುಡ್ಸ್ ಷೇರು ಬೆಲೆ ಏಕಾಏಕಿ ಹೆಚ್ಚಳವಾಗಿದ್ದೇಕೆ?

    ಬೆಳ್ಳಿ ಬೆಲೆ ಗಗನಮುಖಿ: ಒಂದು ಕೆಜಿಗೆ ಒಂದು ಲಕ್ಷ ರೂಪಾಯಿ ಆಗಲಿದೆ ಎನ್ನುತ್ತಾರೆ ತಜ್ಞರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts