More

    ಷೇರು ಮಾರುಕಟ್ಟೆ ಕುಸಿತದ ನಡುವೆಯೂ ಪತಂಜಲಿ ಫುಡ್ಸ್ ಷೇರು ಬೆಲೆ ಏಕಾಏಕಿ ಹೆಚ್ಚಳವಾಗಿದ್ದೇಕೆ?

    ಮುಂಬೈ: ಮಂಗಳವಾರ ಷೇರು ಪೇಟೆ ಸಾಕಷ್ಟು ಕುಸಿತ ಅನುಭವಿಸಿತು. ಆದರೆ, ಇದರ ನಡುವೆಯೇ ಬಾಬಾ ರಾಮ್‌ದೇವ್ ನೇತೃತ್ವದ ಎಫ್‌ಎಂಸಿಜಿ ಸಂಸ್ಥೆಯ ಷೇರುಗಳ ಬೆಲೆ ಮಂಗಳವಾರ 6.62% ಏರಿಕೆಯಾಗಿದೆ.

    ಹೂಡಿಕೆ ನಿರ್ವಹಣೆ ಸಂಸ್ಥೆಯಾದ GQG ಪಾರ್ಟನರ್ಸ್​, ಮಾರ್ಚ್ 2024 ತ್ರೈಮಾಸಿಕದಲ್ಲಿ ತಮ್ಮ ಪಾಲನ್ನು 11.48% ಕ್ಕೆ ಏರಿಸಿದ್ದಾರೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಪತಂಜಲಿ ಫುಡ್ಸ್ ಷೇರುಗಳ ಬೆಲೆ ಮಂಗಳವಾರ ಮಧ್ಯಾಹ್ನದ ಅವಧಿಯಲ್ಲಿ ಅಂದಾಜು 7% ಏರಿಕೆಯಾದವು.

    ಡಿಸೆಂಬರ್ 2023 ತ್ರೈಮಾಸಿಕದವರೆಗೆ GQG ಪಾರ್ಟನರ್ಸ್​ ಸಂಸ್ಥೆಯ ಪಾಲು ಪತಂಜಲಿ ಫುಡ್ಸ್​ನಲ್ಲಿ 3.3% ರಷ್ಟಿತ್ತು. ಮಂಗಳವಾರ ಅಂತಿಮವಾಗಿ, ಪತಂಜಲಿ ಫುಡ್ಸ್‌ನ ಷೇರುಗಳ ಬೆಲೆ ಶೇಕಡಾ. 5.41% ಏರಿಕೆಯಾಗಿ ರೂ 1407.70 ಕ್ಕೆ ತಲುಪಿತು.

    ಪತಂಜಲಿ ಫುಡ್ಸ್ ಷೇರುಗಳ ಬೆಲೆ ಒಂದು ವರ್ಷದಲ್ಲಿ 45% ಹೆಚ್ಚಳವಾಗಿದೆ. ಈ ವರ್ಷದ ಆರಂಭದಿಂದ 10.40% ಕುಸಿತ ಕಂಡಿವೆ. ಆರು ತಿಂಗಳಲ್ಲಿ ಶೇ. 6.57ರಷ್ಟು ಏರಿಕೆಯಾಗಿದೆ. ಸಂಸ್ಥೆಯ ಮಾರುಕಟ್ಟೆ ಮೌಲ್ಯ 50,856 ಕೋಟಿ ರೂ.ಗೆ ಏರಿದೆ.

    ಏಪ್ರಿಲ್ 12 ರಂದು ತನ್ನ ನಾಲ್ಕನೇ ತ್ರೈಮಾಸಿಕ ವ್ಯವಹಾರ ಅಪ್‌ಡೇಟ್‌ನಲ್ಲಿ, ಕಂಪನಿಯು ತನ್ನ ತ್ರೈಮಾಸಿಕ ಕಾರ್ಯಕ್ಷಮತೆ ಸ್ಥಿರವಾಗಿದೆ. ಆಹಾರ, ಎಫ್‌ಎಂಸಿಜಿ ಮತ್ತು ಖಾದ್ಯ ತೈಲ ವಿಭಾಗಗಳಲ್ಲಿನ ಉತ್ತಮ ಫಲಿತಾಂಶಗಳಿಂದ ಮುನ್ನಡೆಸಿದೆ ಎಂದು ಹೇಳಿದೆ.

    ಮಾರ್ಚ್ ತ್ರೈಮಾಸಿಕದಲ್ಲಿ, ಭಾರತದಲ್ಲಿ ಖಾದ್ಯ ತೈಲಗಳ ಬೆಲೆಗಳು ಸ್ಥಿರವಾಗಿ ಉಳಿದಿವೆ ಮತ್ತು ಹಿಂದಿನ ತ್ರೈಮಾಸಿಕದಲ್ಲಿ ಕಂಡುಬಂದ ಕಡಿಮೆ ಮಟ್ಟದಿಂದ ಚೇತರಿಸಿಕೊಂಡಿವೆ.

    ಕಾಂಗ್ರೆಸ್​ ನಾಯಕ ಸುರ್ಜೇವಾಲಾ ಚುನಾವಣೆ ಪ್ರಚಾರಕ್ಕೆ ಬಿತ್ತು ನಿಷೇಧ: ನಟಿ ಹೇಮಾಮಾಲಿನಿ ಕುರಿತ ಅವಹೇಳನಕಾರಿ ಹೇಳಿಕೆಗೆ ತಲೆದಂಡ

    ಐಟಿ ಸ್ಟಾಕ್​ನಲ್ಲಿ 1 ಲಕ್ಷವಾಯ್ತು 44 ಲಕ್ಷ ರೂಪಾಯಿ: ಈಗ 20% ಹೆಚ್ಚಳವಾಗಿ ಅಪ್ಪರ್​ ಸರ್ಕ್ಯೂಟ್​ ಹಿಟ್ ಆಗಿದ್ದೇಕೆ?

    ರಾಕೆಟ್​ನಂತೆ ಗಗನಕ್ಕೆ ಜಿಗಿದ ರಿಲಯನ್ಸ್​ ಚಾಕೊಲೇಟ್ ಕಂಪನಿ ಷೇರು: ಒಂದೇ ದಿನದಲ್ಲಿ 14% ಏರಿಕೆ ಆಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts