More

  ಐಟಿ ಸ್ಟಾಕ್​ನಲ್ಲಿ 1 ಲಕ್ಷವಾಯ್ತು 44 ಲಕ್ಷ ರೂಪಾಯಿ: ಈಗ 20% ಹೆಚ್ಚಳವಾಗಿ ಅಪ್ಪರ್​ ಸರ್ಕ್ಯೂಟ್​ ಹಿಟ್ ಆಗಿದ್ದೇಕೆ?

  ಮುಂಬೈ: ಸ್ಮಾಲ್ ಕ್ಯಾಪ್ ಸ್ಟಾಕ್ ಡೈನಾಕಾನ್ಸ್ ಸಿಸ್ಟಮ್ಸ್ (Dynacons Systems) ಷೇರುಗಳ ಬೆಲೆ ಮಂಗಳವಾರ ಗಮನಸೆಳೆದಿವೆ. ಈ ಕಂಪನಿಯ ಷೇರುಗಳ ಬೆಲೆ ಮಂಗಳವಾರ 20% ರಷ್ಟು ಏರಿಕೆ ಕಂಡು, ಅಪ್ಪರ್ ಸರ್ಕ್ಯೂಟ್‌ ಹಿಟ್​ ಆಯಿತು. ಅಲ್ಲದೆ, 52 ವಾರಗಳ ಗರಿಷ್ಠ ಬೆಲೆಯಾದ 1133.40 ರೂ. ತಲುಪಿತು.

  ಷೇರುಗಳ ಈ ಏರಿಕೆಯ ಹಿಂದೆ ದೊಡ್ಡ ಕಾರಣವಿದೆ. ವಾಸ್ತವವಾಗಿ, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಮಾದರಿಯಲ್ಲಿ ಕೋರ್ ಬ್ಯಾಂಕಿಂಗ್ ಪರಿಹಾರ ಉನ್ನತೀಕರಣ ಮತ್ತು ವಲಸೆಗಾಗಿ ಈ ಐಟಿ ಕಂಪನಿಯು ರೂ. 233 ಕೋಟಿ ಮೌಲ್ಯದ ಕಾಮಗಾರಿ ಆರ್ಡರ್​ ಪಡೆದುಕೊಂಡಿದೆ.

  ಈ ಯೋಜನೆಯು ಕೋರ್ ಬ್ಯಾಂಕಿಂಗ್ ಪರಿಹಾರದ (CBS) ಅಪ್​ಗ್ರೇಡೇಶನ್ ಒಳಗೊಂಡಿರುತ್ತದೆ. Finacle 7.0 ನಿಂದ Finacle 10.2.25 ಗೆ ಕೋರ್​ ಬ್ಯಾಂಕಿಂಗ್​ ಸೋಲುಷನ್​ ಅಪ್​ಗ್ರೇಡ್​ ಮಾಡುವುದು ಇದಾಗಿದೆ. ಈ ಒಪ್ಪಂದದ ವ್ಯಾಪ್ತಿಯು ಎಂಟು ರಾಜ್ಯಗಳಲ್ಲಿ 38 ರಾಜ್ಯ ಸಹಕಾರಿ ಬ್ಯಾಂಕ್‌ಗಳ 1,391 ಶಾಖೆಗಳ ಸೇವೆಯನ್ನು ಒಳಗೊಂಡಿದೆ. ಈ ಒಪ್ಪಂದವು ಐದು ವರ್ಷಗಳವರೆಗೆ ಇರುತ್ತದೆ. ಹೊಸ ಫಿನಾಕಲ್ ಪ್ಲಾಟ್‌ಫಾರ್ಮ್‌ನ ಪ್ರಯೋಜನಗಳನ್ನು ಹೆಚ್ಚಿಸುವಾಗ ಬ್ಯಾಂಕಿಂಗ್ ಕಾರ್ಯಾಚರಣೆಗಳಿಗೆ ಅಡ್ಡಿಪಡಿಸುವುದನ್ನು ಕಡಿಮೆ ಮಾಡುವುದಾಗಿದೆ ಈ ಅಪ್​ಗ್ರೇಡ್​ ಉದ್ದೇಶವಾಗಿದೆ.

  ಈ ಸ್ಟಾಕ್ ಒಂದು ವರ್ಷದಲ್ಲಿ 210% ಏರಿದೆ. ಕಂಪನಿಯ ಷೇರುಗಳು ಏಪ್ರಿಲ್ 2020 ರಲ್ಲಿ ಪ್ರತಿ ಷೇರಿಗೆ ರೂ. 17.75 ರಷ್ಟಿತ್ತು. ಅಲ್ಲಿಂದ ಇದುವರೆಗೆ 4,300 ಪ್ರತಿಶತದಷ್ಟು ಏರಿದೆ. ಅಂದರೆ, ಈ ಅವಧಿಯಲ್ಲಿ ರೂ. 1 ಲಕ್ಷ ರೂಪಾಯಿ ಹೂಡಿಕೆಯು ಈಗ ರೂ. 44 ಲಕ್ಷ ಆಗಿದೆ. ಕಳೆದ ಒಂದು ತಿಂಗಳಲ್ಲಿ ಈ ಐಟಿ ಕಂಪನಿಯ ಷೇರು ಶೇ. 43.63ರಷ್ಟು ಏರಿಕೆಯಾಗಿದೆ.

  ರಾಕೆಟ್​ನಂತೆ ಗಗನಕ್ಕೆ ಜಿಗಿದ ರಿಲಯನ್ಸ್​ ಚಾಕೊಲೇಟ್ ಕಂಪನಿ ಷೇರು: ಒಂದೇ ದಿನದಲ್ಲಿ 14% ಏರಿಕೆ ಆಗಿದ್ದೇಕೆ?

  ಕರ್ನಾಟಕದಲ್ಲಿ ಬಿಜೆಪಿಗೆ 21, ಜೆಡಿಎಸ್​ಗೆ 2, ಕಾಂಗ್ರೆಸ್​​ಗೆ ಬರೀ 5 ಸ್ಥಾನ: ಮೆಗಾ ಚುನಾವಣೆ ಸಮೀಕ್ಷೆ ಭವಿಷ್ಯ

  ಮಾರಕ ಕ್ಯಾನ್ಸರ್​ ವಿರುದ್ಧ ಹೋರಾಡಿ “ದಿ ಸ್ಕೈ ಕ್ವೀನ್” ಆದ ಕನಿಕಾ: ಈ ಗಟ್ಟಿಗಿತ್ತಿ 10 ಖಾಸಗಿ ಜೆಟ್‌ಗಳ ಒಡತಿಯಾಗಿದ್ದು ಹೇಗೆ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts