More

    ಭಾರತೀಯ ಷೇರು ಮಾರುಕಟ್ಟೆಯಲ್ಲಿ ವಿದೇಶಿಗರ ಹೂಡಿಕೆ ಹೆಚ್ಚಳ: ಫಾರೆನ್​​ ಇನ್ವೆಸ್ಟರ್​ ಖರೀದಿಸಿದ ಸ್ಟಾಕ್​ಗಳು ಯಾವವು?

    ಮುಂಬೈ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಾರ್ಚ್ ತ್ರೈಮಾಸಿಕದಲ್ಲಿ (2024ರ ಜನವರಿ 1ರಿಂದ 2024ರ ಮಾರ್ಚ್​ 31ರ ಅವಧಿ) ಭಾರತೀಯ ಷೇರು ಮಾರುಕಟ್ಟೆಯಲ್ಲಿ ಶಾಪಿಂಗ್ ಅಮಲಿನಲ್ಲಿದ್ದರು. ಏಸ್ ಇಕ್ವಿಟಿಯಲ್ಲಿ ಲಭ್ಯವಿರುವ ಷೇರುದಾರರ ಮಾಹಿತಿಯ ಪ್ರಕಾರ, ಬಿಎಸ್‌ಇಯಲ್ಲಿ ಪಟ್ಟಿ ಮಾಡಿರುವ 500 ಕಂಪನಿಗಳ ಪೈಕಿ 144 ಕಂಪನಿಗಳಲ್ಲಿ ತಮ್ಮ ಹೂಡಿಕೆಯನ್ನು ಹೆಚ್ಚಿಸಿದರು.

    ಈ ವರ್ಷವು ಜನವರಿಯಲ್ಲಿ ರೂ 25,743 ಕೋಟಿಗಳ ಈಕ್ವಿಟಿ ಹೊರಹರಿವಿನೊಂದಿಗೆ ಪ್ರಾರಂಭವಾಯಿತು, ಅಂದರೆ, ಇಷ್ಟೊಂದು ಮೊತ್ತದ ಹೂಡಿಕೆಯನ್ನು ವಿದೇಶಿ ಹೂಡಿಕೆದಾರರು ವಾಪಸು ತೆಗೆದುಕೊಂಡರು. ಫೆಬ್ರವರಿಯಲ್ಲಿ ರೂ 1,538 ಕೋಟಿಗಳ ಸೌಮ್ಯ ಧನಾತ್ಮಕ ಒಳಹರಿವು ಬಂದಿತು. ಮಾರ್ಚ್​ನಲ್ಲಿ ರೂ 35,098 ಕೋಟಿಗಳ ಒಳಹರಿವು ಹರಿದುಬಂದಿತು. ಅಂದರೆ, ಇಷ್ಟೊಂದು ಮೊತ್ತದ ಹೂಡಿಕೆಯನ್ನು ಈ ತಿಂಗಳಲ್ಲಿ ವಿದೇಶಿ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿದರು.

    ಈ ವಿದೇಶಿ ಹೂಡಿಕೆದಾರರು ಅದಾನಿ ಗ್ರೀನ್ ಎನರ್ಜಿ (18.03% ರಿಂದ 18.15% ಗೆ), ಅದಾನಿ ಪೋರ್ಟ್ಸ್ ಆ್ಯಂಡ್​ ಸ್ಪೇಷಲ್​ ಎಕನಾಮಿಕ್​ ಜೋನ್​ (14.72% ರಿಂದ 14.98% ಕ್ಕೆ), ಅದಾನಿ ಪವರ್ (15.86% ರಿಂದ 15.91% ಕ್ಕೆ) ಸೇರಿದಂತೆ ಆಯ್ದ ಅದಾನಿ ಗ್ರೂಪ್ ಸಂಸ್ಥೆಗಳಲ್ಲಿ ತಮ್ಮ ಪಾಲನ್ನು ಹೆಚ್ಚಿಸಿದರು. ಅದಾನಿ ಟೋಟಲ್ ಗ್ಯಾಸ್ (13.06% ರಿಂದ 13.12% ಗೆ) ಮತ್ತು ಅದಾನಿ ವಿಲ್ಮಾರ್ (0.65% ರಿಂದ 0.77% ಗೆ) ಕಂಪನಿಗಳಲ್ಲಿ ಕೂಡ ಹೂಡಿಕೆಯನ್ನು ಹೆಚ್ಚಿಸಿದರು.

    ಜಾಗತಿಕ ಹೂಡಿಕೆದಾರರು ಡಾಟಾ ಪ್ಯಾಟರ್ನ್ಸ್​ ಕಂಪನಿಯಲ್ಲಿ ತಮ್ಮ ಹೂಡಿಕೆ ಪಾಲನ್ನು ಶೇಕಡಾ 7.82 ಪಾಯಿಂಟ್‌ಗಳಿಂದ 14.56% ಗೆ ಹೆಚ್ಚಿಸಿದ್ದಾರೆ. ಅವರು ಡಿಸೆಂಬರ್ 2023 ರ ಹೊತ್ತಿಗೆ ಈ ಕಂಪನಿಯಲ್ಲಿ 6.74% ಪಾಲನ್ನು ಹೊಂದಿದ್ದರು. ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಜೆಫರೀಸ್, ಡೇಟಾ ಪ್ಯಾಟರ್ನ್ಸ್‌ ಷೇರು ಗುರಿ ಬೆಲೆಯನ್ನು ರೂ 3,545ಗೆ ನಿಗದಿಪಡಿಸಿದೆ, ಇದು ಖಾಸಗಿ ವಲಯದ ರಕ್ಷಣಾ ಎಲೆಕ್ಟ್ರಾನಿಕ್ಸ್ ಕಂಪನಿಯಾಗಿದೆ.

    ಕಂಪ್ಯೂಟರ್ ಏಜ್ ಮ್ಯಾನೇಜ್‌ಮೆಂಟ್ ಸರ್ವಿಸಸ್, ಯುರೇಕಾ ಫೋರ್ಬ್ಸ್, ಇಂಟರ್‌ಗ್ಲೋಬ್ ಏವಿಯೇಷನ್ (ಇಂಡಿಗೋ), ಜೆಎಸ್‌ಡಬ್ಲ್ಯೂ ಎನರ್ಜಿ, ಚಾಲೆಟ್ ಹೋಟೆಲ್‌ಗಳು, ಎನ್‌ಸಿಸಿ, ಮ್ಯಾನ್‌ಕೈಂಡ್ ಫಾರ್ಮಾ, ಮ್ಯಾಕ್ರೋಟೆಕ್ ಡೆವಲಪರ್ಸ್, ಎನ್‌ಎಂಡಿಸಿ, ಆದಿತ್ಯ ಬಿರ್ಲಾ ಸನ್ ಲೈಫ್ ಎಎಂಸಿ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ನ್ಯಾಟ್ಕೊ ಫಾರ್ಮಾ, ಲುಪಿನ್ ಮತ್ತು ಫೀನಿಕ್ಸ್ ಮಿಲ್ಸ್​ ಮುಂತಾದ ಕಂಪನಿಗಳಲ್ಲಿ ವಿದೇಶಿ ಹೂಡಿಕೆದಾರರರು ತಮ್ಮ ಹೂಡಿಕೆಯನ್ನು 2%ರಿಂದ 7% ನಡುವೆ ಹೆಚ್ಚಿಸಿದ್ದಾರೆ.

    ನುವಾಮಾ ಇನ್‌ಸ್ಟಿಟ್ಯೂಶನಲ್ ಇಕ್ವಿಟೀಸ್ ಎಂಬ ಬ್ರೋಕರೇಜ್​ ಸಂಸ್ಥೆಯು ಇಂಡಿಗೋ ಏರ್​ಲೈನ್ಸ್​ ಷೇರಿನ ಗುರಿ ಬೆಲೆಯನ್ನು 3,953 ರೂ.ಗೆ ನಿಗದಿಪಡಿಸಿದೆ.

    ಭಾರತೀಯ ಜೀವ ವಿಮಾ ನಿಗಮ (LIC) ಸಹ ವಿದೇಶಿ ಹೂಡಿಕೆದಾರರ ಅಚ್ಚುಮೆಚ್ಚಿನ ಷೇರು ಆಗಿದೆ. ಈ ಷೇರಿನಲ್ಲಿ ಡಿಸೆಂಬರ್ 31, 2023 ರಂದು 0.06%ರಷ್ಟು ಇದ್ದ ವಿದೇಶಿ ಹೂಡಿಕೆಯು ಮಾರ್ಚ್ 31, 2024 ರ ಹೊತ್ತಿಗೆ 0.14% ಕ್ಕೆ ಏರಿದೆ.

    ಬ್ಯಾಂಕಿಂಗ್ ಕ್ಷೇತ್ರದಲ್ಲಿ ಜಾಗತಿಕ ಹೂಡಿಕೆದಾರರು ಪಂಜಾಬ್ ನ್ಯಾಷನಲ್ ಬ್ಯಾಂಕ್ (3.10% ರಿಂದ 4.82% ಕ್ಕೆ), ಬ್ಯಾಂಕ್ ಆಫ್ ಮಹಾರಾಷ್ಟ್ರ (0.45% ರಿಂದ 1.04% ಕ್ಕೆ), ಸಿಟಿ ಯೂನಿಯನ್ ಬ್ಯಾಂಕ್ (26.60% ರಿಂದ 26.96% ಕ್ಕೆ), CSB ಬ್ಯಾಂಕ್ ( 4.62% ರಿಂದ 4.93% ಗೆ), ಬ್ಯಾಂಕ್ ಆಫ್ ಇಂಡಿಯಾ (4.31% ರಿಂದ 4.52% ಗೆ), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (10.91% ರಿಂದ 11.09% ಗೆ), ಬ್ಯಾಂಕ್ ಆಫ್ ಬರೋಡಾ (12.27% ರಿಂದ 12.40% ಗೆ), ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ( 0.07% ರಿಂದ 0.17% ಗೆ, UCO ಬ್ಯಾಂಕ್ (0.01% ರಿಂದ 0.03% ಗೆ) ಮತ್ತು ಪಂಜಾಬ್ & ಸಿಂಡ್ ಬ್ಯಾಂಕ್ (0.01% ರಿಂದ 0.02% ಗೆ). ಷೇರುಗಳಲ್ಲಿ ಹೂಡಿಕೆಯನ್ನು ಹೆಚ್ಚಳ ಮಾಡಿದ್ದಾರೆ.

    ಷೇರು ಮಾರುಕಟ್ಟೆ ಕುಸಿತದ ನಡುವೆಯೂ ಪತಂಜಲಿ ಫುಡ್ಸ್ ಷೇರು ಬೆಲೆ ಏಕಾಏಕಿ ಹೆಚ್ಚಳವಾಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts