More

    1 ಲಕ್ಷವಾಯ್ತು 6.89 ಕೋಟಿ ರೂಪಾಯಿ: 10 ಬಾರಿ ಬೋನಸ್ ಷೇರು ನೀಡಿದ ಕಂಪನಿಯಿಂದ ಹೂಡಿಕೆದಾರರಿಗೆ ಲಾಭದ ಸುರಿಮಳೆ

    ಮುಂಬೈ: ಸಂವರ್ಧನ್ ಮದರ್‌ಸನ್ ಇಂಟರ್‌ನ್ಯಾಶನಲ್ ಲಿಮಿಟೆಡ್​ (Samvardhana Motherson International Ltd.) ಷೇರುಗಳು ಹೂಡಿಕೆದಾರರಿಗೆ ಉತ್ತಮ ಲಾಭವನ್ನು ನೀಡಿವೆ. ಈ ಕಂಪನಿಯ ಷೇರುಗಳು 18 ಪೈಸೆಯಿಂದ 124 ರೂ. ಏರಿಕೆ ಕಂಡಿವೆ. ಪ್ರಾರಂಭದಿಂದಲೂ ಇಲ್ಲಿಯವರೆಗೆ, ಸಂವರ್ಧನ್ ಮದರ್‌ಸನ್ ಇಂಟರ್‌ನ್ಯಾಶನಲ್ ಷೇರುಗಳ ಬೆಲೆ 68000% ಏರಿಕೆ ಕಂಡಿದೆ.

    ಸಂವರ್ಧನ್ ಮದರ್‌ಸನ್ ಇಂಟರ್‌ನ್ಯಾಶನಲ್, ಆಟೋ ಘಟಕಗಳು ಮತ್ತು ಸಲಕರಣೆಗಳ ಉದ್ಯಮಕ್ಕೆ ಸಂಬಂಧಿಸಿದ ಕಂಪನಿಯಾಗಿದೆ. ತನ್ನ ಹೂಡಿಕೆದಾರರಿಗೆ ಇದುವರೆಗೆ 10 ಬಾರಿ ಬೋನಸ್ ಷೇರುಗಳನ್ನು ಉಡುಗೊರೆಯಾಗಿ ನೀಡಿರುವುದು ವಿಶೇಷ.

    ಈ ಕಂಪನಿಯ ಷೇರುಗಳ ಬೆಲೆ 14 ಜುಲೈ 1995 ರಂದು ಈ ಷೇರುಗಳ ಬೆಲೆ 18 ಪೈಸೆ ಇತ್ತು. ಆದರೆ, ಏಪ್ರಿಲ್ 16, 2024 ರಂದು ಈ ಷೇರುಗಳ ಬೆಲೆ 124.25 ರೂ.ಗೆ ಏರಿಕೆಯಾಗಿದೆ. ಕಂಪನಿಯು ತನ್ನ ಪ್ರಾರಂಭದಿಂದ ಇದುವರೆಗೆ ಹೂಡಿಕೆದಾರರಿಗೆ 68927% ನಷ್ಟು ಬಲವಾದ ಲಾಭವನ್ನು ನೀಡಿದೆ. 1995ರ ಜುಲೈನಲ್ಲಿ ಈ ಕಂಪನಿಯ ಷೇರುಗಳಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿ ಇದುವರೆಗೂ ಇಟ್ಟುಕೊಂಡಿದ್ದರೆ ಈ ಷೇರುಗಳ ಬೆಲೆ ಈಗ 6.89 ಕೋಟಿ ರೂಪಾಯಿ ಆಗುತ್ತಿತ್ತು.

    ಕಳೆದ ಒಂದು ವರ್ಷದಲ್ಲಿ, ಈ ಷೇರುಗಳ ಬೆಲೆ ಅಂದಾಜು 81 ಪ್ರತಿಶತದಷ್ಟು ಹೆಚ್ಚಾಗಿದೆ. ಕಂಪನಿಯ ಷೇರುಗಳ ಬೆಲೆ 18 ಏಪ್ರಿಲ್ 2023 ರಂದು ರೂ 68.71 ಇತ್ತು. ಈಗ ರೂ 124.25ಕ್ಕೆ ತಲುಪಿದೆ. ಕಳೆದ 6 ತಿಂಗಳುಗಳಲ್ಲಿ, ಕಂಪನಿಯ ಷೇರುಗಳ ಬೆಲೆ ಅಂದಾಜು 30% ರಷ್ಟು ಏರಿಕೆ ಕಂಡಿದೆ. ಈ ಷೇರುಗಳ 52 ವಾರಗಳ ಗರಿಷ್ಠ ಬೆಲೆ 126.55 ರೂ. ಹಾಗೂ ಕನಿಷ್ಠ ಬೆಲೆ 67.42 ರೂ. ಇದೆ.

    ಸಂವರ್ಧನ ಮದರ್ಸನ್ ಇಂಟರ್ನ್ಯಾಷನಲ್ ತನ್ನ ಹೂಡಿಕೆದಾರರಿಗೆ ಪ್ರಾರಂಭದಿಂದಲೂ ಇದುವರೆಗೂ 10 ಬಾರಿ ಬೋನಸ್ ಷೇರುಗಳನ್ನು ನೀಡಿದೆ. ಕಂಪನಿಯು ತನ್ನ ಹೂಡಿಕೆದಾರರಿಗೆ ಡಿಸೆಂಬರ್ 1997 ರಲ್ಲಿ 1:2 ಅನುಪಾತದಲ್ಲಿ ಬೋನಸ್ ಷೇರುಗಳನ್ನು ವಿತರಿಸಿತು. ಅಂದರೆ, ಕಂಪನಿಯು ಪ್ರತಿ 2 ಷೇರುಗಳಿಗೆ 1 ಬೋನಸ್ ಷೇರುಗಳನ್ನು ಹೂಡಿಕೆದಾರರಿಗೆ ನೀಡಿತು. 1997 ರಿಂದ 2022 ರ ವರೆಗೆ ಕಂಪನಿಯು ಒಟ್ಟು 10 ಬಾರಿ ಬೋನಸ್ ಷೇರುಗಳನ್ನು ನೀಡಿದೆ. ಕಂಪನಿಯು ಕೊನೆಯದಾಗಿ 1:2 ರ ಅನುಪಾತದಲ್ಲಿ ಅಕ್ಟೋಬರ್ 2022 ರಲ್ಲಿ ಬೋನಸ್ ಷೇರುಗಳನ್ನು ನೀಡಿದೆ. ಕಂಪನಿಯು ಪ್ರತಿ ಬಾರಿ 1:2 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡಿದೆ. ಸಂವರ್ಧನ್ ಮದರ್‌ಸನ್ ಇಂಟರ್‌ನ್ಯಾಶನಲ್‌ನ ಲಿಮಿಟೆಡ್​ನ ಮಾರುಕಟ್ಟೆ ಮೌಲ್ಯ 84000 ಕೋಟಿ ರೂ. ಇದೆ.

    ಪಿಎಫ್​ ಖಾತೆಯಿಂದ ಹಣ ಹಿಂತೆಗೆದುಕೊಳ್ಳುವ ನಿಯಮ ಬದಲು: ವಿತ್​ಡ್ರಾವಲ್​ ಮಿತಿ ಹೆಚ್ಚಳ

    ಸ್ಮಾಲ್ ಫೈನಾನ್ಸ್ ಬ್ಯಾಂಕ್ ಷೇರು ಖರೀದಿಸಿ: ಹೀಗೆಂದು ಎಸ್​ಬಿಐ ಸೆಕ್ಯುರಿಟೀಸ್​ ಸಲಹೆ ನೀಡಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts