ಸಿನಿಮಾ ಶೂಟಿಂಗ್ ಎಂದು ಸುಳ್ಳು ಹೇಳಿ ಮದುವೆಯಾದ ಸಿದ್ಧಾರ್ಥ್ ಜೋಡಿ

AditiRaoHydari
Published on

ಬೆಂಗಳೂರು: ಟಾಲಿವುಡ್​ ನಟಿ ಅದಿತಿ ರಾವ್ ಮತ್ತು ಸಿದ್ಧಾರ್ಥ್ ಬಹಳ ಸಮಯದಿಂದ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದಿದ್ದರು. ಆದರೆ ಈ ಜೋಡಿ ನಿನ್ನೆ ಮದುವೆಯಾಗಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್​​ ಆಗಿತ್ತು. ಈ ಮದುವೆ ಕುರಿತಾದ ಗುಸುಗುಸು ಸುದ್ದಿ ಹಬ್ಬಿದೆ.

ನಿನ್ನೆ(ಮಾರ್ಚ್27) ತೆಲಂಗಾಣದ ವನಪರ್ತಿ ಜಿಲ್ಲೆಯ ಶ್ರೀರಂಗಪುರದಲ್ಲಿರುವ ಶ್ರೀ ರಂಗನಾಯಕಸ್ವಾಮಿ ದೇವಸ್ಥಾನದಲ್ಲಿ ಅದಿತಿ ರಾವ್ ಮತ್ತು ಸಿದ್ಧಾರ್ಥ್ ಜೋಡಿಯ ವಿವಾಹವಾಗಿದೆ ಎಂದು ವರದಿಯಾಗಿದೆ. ಇದು ಇಬ್ಬರಿಗೂ 2ನೇ ಮದುವೆ ಎನ್ನುವು ವಿಶೇಷವಾಗಿದೆ. ಆದರೆ ಇಲ್ಲಿಯವರೆಗೆ ಸಿದ್ಧಾರ್ಥ್ ಮತ್ತು ಅತಿಥಿಯಿಂದ ಈ ಮದುವೆಯ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ. ಆದರೆ ಸಿನಿಮಾವೊಂದರ ಶೂಟಿಂಗ್ ನೆಪದಲ್ಲಿ ಸಿದ್ಧಾರ್ಥ್ ಮತ್ತು ಅತ್ತಿ ಮದುವೆಯಾಗಿದ್ದಾರೆ ಎಂಬುದು ಚಿತ್ರರಂಗದ ವಲಯದಲ್ಲಿ ಕೇಳಿಬರುತ್ತಿರುವ ಮಾತು.

ಅತಿಥಿ ರಾವ್ ಹೈದರಿಯವರ ತಾಯಿ 'ವಿದ್ಯಾ ರಾವ್' ಅವರು ವನಪರ್ತಿ ಸಂಸ್ಥಾನದ ಕೊನೆಯ ರಾಜ ಜೆ ರಾಮೇಶ್ವರ ರಾವ್ ಅವರ ಮಗಳು. ಈ ಪರಂಪರೆಯಿಂದಲೇ ಅವರ ಮದುವೆ ವನಪರ್ತಿಯಲ್ಲಿ ನಡೆದಿದೆ. ಜೆ ರಾಮೇಶ್ವರ ರಾವ್ ಅವರ ವಂಶಸ್ಥರಾದ ಜೆ ಕೃಷ್ಣದೇವರ ರಾವ್ ಅವರ ಕುಟುಂಬದವರು ಈ ಮದುವೆಯಲ್ಲಿ ಭಾಗವಹಿಸಿದ್ದರು. ಸಿದ್ಧಾರ್ಥ್ ಮತ್ತು ಅತಿಥಿ ಈ ಮದುವೆಯನ್ನು ಬಹಳ ರಹಸ್ಯವಾಗಿಟ್ಟಿದ್ದರು. ಈ ಮದುವೆ ಮಾಡಲು ತಮಿಳುನಾಡಿನಿಂದ ಅರ್ಚಕರು ಬಂದಿದ್ದರು.

ಶ್ರೀರಂಗಪುರಂ ದೇವಸ್ಥಾನದಲ್ಲಿ ಕೆಲಸ ಮಾಡುವ ಸ್ಥಳೀಯ ಅರ್ಚಕರಿಗೆ ಸಿನಿಮಾ ಶೂಟಿಂಗ್ ಎಂದು ಹೇಳಿದ್ದರು. ಇದಲ್ಲದೆ, ಆ ಸಮಯದಲ್ಲಿ ಸ್ಥಳೀಯ ಅರ್ಚಕರನ್ನು ಒಳಗೆ ಬಿಡಲಿಲ್ಲ. ಸದ್ಯ ಆ ಮದುವೆಗೆ ಸಂಬಂಧಿಸಿದ ಡೆಕೊರೇಶನ್ ವಿಡಿಯೋಗಳು ವೈರಲ್ ಆಗುತ್ತಿವೆ. ಮತ್ತು ಸಿದ್ಧಾರ್ಥ್ ಮತ್ತು ಅತಿಥಿ ನಿಜವಾಗಿಯೂ ಮದುವೆಯಾಗಿದ್ದಾರಾ..? ಅಥವಾ ಅವರು ಹೇಳಿದಂತೆ ಸಿನಿಮಾ ಶೂಟಿಂಗ್ ? ಎಂಬುದು ತಿಳಿಯಬೇಕಿದೆ.

ಈ ಮೊದಲು ಅದಿತಿ ರಾವ್​ ಹೈದರಿ ಅವರು ನಟ ಸತ್ಯದೀಪ್​ ಮಿಶ್ರಾ ಜತೆ ಮದುವೆ ಆಗಿದ್ದರು. ಆದರೆ 2013ರಲ್ಲಿ ಅವರು ವಿಚ್ಛೇದನ ಪಡೆದರು. ಅದೇ ರೀತಿ, ಸಿದ್ಧಾರ್ಥ್​ ಕೂಡ ಮೇಘನಾ ನಾರಾಯಣ್​ ಜತೆ 2003ರಲ್ಲಿ ಮದುವೆಯಾಗಿ 2007ರಲ್ಲಿ ಡಿವೋರ್ಸ್​ ಪಡೆದರು.

ಅದಿತಿ ರಾವ್ ಮತ್ತು ಸಿದ್ಧಾರ್ಥ್ ‘ಮಹಾಸಮುದ್ರಂ’ ಸಿನಿಮಾದಲ್ಲಿ ಜತೆಯಾಗಿ ನಟಿಸಿದ್ದು, ಆಗ ಪ್ರೀತಿಯಲ್ಲಿ ಬಿದ್ದಿದ್ದರು. ಅಂದಿನಿಂದ ಇಬ್ಬರೂ ಒಟ್ಟಿಗೆ ಸುತ್ತಾಡುತ್ತಿದ್ದರು, ಡಿನ್ನರ್, ಲಂಚ್ ಮತ್ತು ಪಾರ್ಟಿಗಳಿಗೆ ಹೋಗುತ್ತಿದ್ದಾರೆ. ಆದರೆ ಪ್ರೀತಿ ಮತ್ತು ಮದುವೆಯ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿರಲಿಲ್ಲ. ಇದೀಗ ಇವರ ಪ್ರೀತಿಗೆ ಮದುವೆ ಎನ್ನುವ ಮುದ್ರೆ ಒತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net