More

  ಹೃದಯ ಸಂಬಂಧಿ ತೊಂದರೆಯಿಂದ ಭಾಮಾ ಹರೀಶ್ ಆಸ್ಪತ್ರೆಗೆ ದಾಖಲು

  ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಭಾಮಾ ಹರೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

  ನಿನ್ನೆ (ಮಾ27) ಭಾಮಾ ಹರೀಶ್​ ಅವರಿಗೆ ಸಡನ್​ ಆಗಿ ಹೃದಯ ಬಡಿತದಲ್ಲಿ ಏರುಪೇರಾಗಿತ್ತು. ಈ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ.ಇಂದು ವೈದ್ಯರು ಅಂಜಿಯೋಗ್ರಾಮ್​​ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

  ಹೃದಯ ಸಂಬಂಧಿ ತೊಂದರೆಯಿಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅವರ ಕುಟುಂಬದ ಮೂಲಗಳು ಮಾಹಿತಿ ನೀಡಿದೆ. ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಭಾಮಾ ಹರೀಶ್​ ಅವರು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ನಟ ದರ್ಶನ್​ ಅಭಿನಯದ ಮೆಜೆಸ್ಟಿಕ್​​ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ.

  ಸಿನಿಮಾ ಶೂಟಿಂಗ್ ಎಂದು ಸುಳ್ಳು ಹೇಳಿ ಮದುವೆಯಾದ ಸಿದ್ಧಾರ್ಥ್ ಜೋಡಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts