More

    S*x ಎಂಬುದು… ಬೆಡ್​ರೂಮ್​ ಸೀಕ್ರೆಟ್​ ಬಿಚ್ಚಿಟ್ಟ ಅಮೆರಿಕ ಅಧ್ಯಕ್ಷ ಜೋ ಬೈಡೆನ್!​

    ಕ್ಯಾಲಿಫೋರ್ನಿಯಾ: ದೀರ್ಘಾವಧಿಯ ದಾಂಪತ್ಯಕ್ಕೆ ಲೈಂಗಿಕತೆ ತುಂಬಾ ಮುಖ್ಯವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಹೇಳಿದ್ದಾರೆ. ನ್ಯೂಯಾರ್ಕ್ ಟೈಮ್ಸ್​ನ ವೈಟ್ ಹೌಸ್ ವರದಿಗಾರ ಕೇಟೀ ರೋಜರ್ಸ್ ಬರೆದ ಪುಸ್ತಕದಲ್ಲಿ ಇದು ಬಹಿರಂಗವಾಗಿದೆ. ಈ ಪುಸ್ತಕದಲ್ಲಿ ಹಿಲ್ಲರಿ ಕ್ಲಿಂಟನ್​ನಿಂದ ಹಿಡಿದು ಜಿಲ್​ ಬೈಡೆನ್​ವರೆಗೆ ಯುಎಸ್ ಪ್ರಥಮ ಮಹಿಳೆಯರ ಬಗ್ಗೆ ವಿವರಿಸಲಾಗಿದೆ.​

    ಲೇಖಕರು 276 ಪುಟಗಳ ತಮ್ಮ ಪುಸ್ತಕದಲ್ಲಿ ಜೋ ಬೈಡೆನ್ ಅವರ 47 ವರ್ಷಗಳ ದಾಂಪತ್ಯವನ್ನು ವಿವರಿಸಿದ್ದಾರೆ. ಸೆಕ್ಸ್​ ಕುರಿತ ಬೈಡೆನ್ ಅವರ ಉಲ್ಲೇಖಗಳು ಕಡಿಮೆ ಆದರೆ, ಅವರ ಹೇಳಿಕೆಯು ಈಗಾಗಲೇ ದೊಡ್ಡ ಚರ್ಚೆಗೆ ಕಾರಣವಾಗಿದೆ.

    ಬೆಡ್​ರೂಮ್​ ರಹಸ್ಯ ಬಿಚ್ಚಿಟ್ಟಿರುವ ಬೈಡೆನ್​, ಮಕ್ಕಳು ಮಲಗಿರುವಾಗ ತನ್ನ ಹೆಂಡತಿಯ ಜತೆ ರೊಮ್ಯಾಂಟಿಕ್​ ಕ್ಷಣಗಳನ್ನು ಕಳೆಯುವ ಸಲುವಾಗಿ ಮನೆಯಲ್ಲಿಯೇ ಇರಲು ಇಷ್ಟಪಡುತ್ತಾರೆ ಎಂದು ಪುಸ್ತಕದಲ್ಲಿ ಹೇಳಿದೆ. ಬೈಡೆನ್​ ಅವರು 2004ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಆಸಕ್ತಿ ಹೊಂದಿರಲಿಲ್ಲ. ಆಗ ಸೆನೆಟರ್ ಆಗಿದ್ದ ಬೈಡೆನ್, ಜಿಲ್ ಅವರನ್ನು ಗಾಢವಾಗಿ ಪ್ರೀತಿಸುತ್ತಿದ್ದರು ಎಂದು ಲೇಖಕರು ಉಲ್ಲೇಖಿಸಿದ್ದಾರೆ.

    ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಸ್ಥಾನವನ್ನು ಗೆಲ್ಲಲು ಜೋ ಬೈಡೆನ್ ತಮ್ಮ ಬೆಡ್​ರೂಮ್​ ಬಯಕೆಗಳನ್ನು ತ್ಯಜಿಸಿರಬಹುದು ಎಂದು ಲೇಖಕರು ಹೇಳುತ್ತಾರೆ ಮತ್ತು ಉತ್ತಮ ಸೆಕ್ಸ್​ ಶಾಶ್ವತ ಮತ್ತು ಸಂತೋಷದ ದಾಂಪತ್ಯಕ್ಕೆ ಪ್ರಮುಖವಾಗಿದೆ ಎಂದು ಬೈಡೆನ್​ ಹೇಳಿರುವುದನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

    1972ರಲ್ಲಿ ಬೈಡೆನ್ ತನ್ನ ಮೊದಲ ಪತ್ನಿ ನೀಲಿಯಾ ಮತ್ತು ಮಗಳು ನವೋಮಿಯನ್ನು ಅಪಘಾತದಲ್ಲಿ ಕಳೆದುಕೊಂಡರು. ಆ ಸಮಯದಲ್ಲಿ ಅವರು ಅನುಭವಿಸಿದ ನೋವು ಮತ್ತು ಪ್ರತ್ಯೇಕತೆಯನ್ನೂ ಪುಸ್ತಕವು ವಿವರಿಸಿದೆ. ನಂತರ ಅವರು ಕಮ್ಯೂನಿಟಿ ಕಾಲೇಜಿನಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿದ್ದ ಜಿಲ್ ಅವರನ್ನು ಭೇಟಿಯಾದರು. ಬೈಡೆನ್ ಜಿಲ್‌ಗೆ ಐದಕ್ಕಿಂತ ಹೆಚ್ಚು ಬಾರಿ ಪ್ರೇಮ ನಿವೇದನೆ ಮಾಡಿದ್ದಾರೆ. ಅಂತಿಮವಾಗಿ ಇಬ್ಬರು 1977ರಲ್ಲಿ ವಿವಾಹವಾದರು. ಜಿಲ್ ತನ್ನ ವೃತ್ತಿಜೀವನವನ್ನು ಪ್ರಥಮ ಮಹಿಳೆಯಾಗಿ ಮುಂದುವರೆಸಿದರು ಎಂದು ಪುಸ್ತಕವು ಹೇಳಿದೆ.

    ಬೈಡೆನ್ ಉಪಾಧ್ಯಕ್ಷರಾಗಿದ್ದ ಸಮಯದಲ್ಲಿ ಭದ್ರತಾ ಅಧಿಕಾರಿಗಳ ಮುಂದೆ ಜಗಳವಾಡದೆ ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಫೋನ್ ಮೂಲಕ ತಮ್ಮ ಪತ್ನಿ ಜಿಲ್​ಗೆ ಹೇಗೆ ಸಂದೇಶಗಳನ್ನು ಕಳುಹಿಸುತ್ತಿದ್ದರು ಎಂಬುದರ ಕುರಿತು ಪುಸ್ತಕವು ಹೇಳುತ್ತದೆ. ಸದ್ಯ ಈ ಪುಸ್ತಕ ಅಮೆರಿಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. (ಏಜೆನ್ಸೀಸ್​)

    ಅದನ್ನು ದಪ್ಪ ಮಾಡಿಕೊಳ್ಳಲು ಹೇಳುತ್ತಿದ್ದರು! ಸಿನಿ ಇಂಡಸ್ಟ್ರಿಯ ಕರಾಳತೆ ಬಿಚ್ಚಿಟ್ಟ ನಟಿ ಸಮೀರಾ ರೆಡ್ಡಿ

    ಬಿಸಿಲಿಗೂ ಕರಗದ ಈ ಐಸ್​ ಕ್ರೀಮ್​ ಹಿಂದಿನ ರಹಸ್ಯ ತಿಳಿದ್ರೆ ನೀವು ಬೆರಗಾಗೋದು ಖಚಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts